ಮೂಡುಬಿದಿರೆ: ವಿದ್ಯಾಗಿರಿಯಲ್ಲಿ ಬುಧವಾರದಿಂದ ನಡೆಯ ಲಿರುವ 25ನೇ ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಯಲ್ಲಿ ಪಾಲ್ಗೊಳ್ಳಲಿರುವ ಲಕ್ಷ ಲಕ್ಷ ಮಂದಿಯ ಆತಿಥ್ಯಕ್ಕೆ ಸಕಲ ಸಿದ್ಧತೆ ನಡೆದಿದೆ. 50,000 ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳೂ. 10,000 ಶಿಕ್ಷಕರು, 3,000 ಸಿಬಂದಿಗಳಿಗೆ ಇಲ್ಲಿರುವ ಹಾಸ್ಟೆಲ್‌ಗಳಲ್ಲಿ ಅನ್ನದಾಸೋಹಕ್ಕೆ ವ್ಯವಸ್ಥೆ ಯಾಗಿದ್ದರೆ ಉಳಿದಂತೆ ಕೃಷಿ ಮೇಳದ ಪರಿಸರದಲ್ಲಿ ಸುಮಾರು 50,000 ಚದರಡಿಯ ಎರಡು ಪೆಂಡಾಲ್‌ಗಳಲ್ಲಿ 60 ಕೌಂಟರ್‌ಗಳಲ್ಲಿ ಏನಿಲ್ಲವೆಂದರೂ ಹೊತ್ತು ಹೊತ್ತಿಗೆ ಲಕ್ಷ ಮಂದಿಯ ಊಟೋಪಚಾರಕ್ಕೆ ಎಲ್ಲ ವ್ಯವಸ್ಥೆ ಆಗುತ್ತಿವೆ. ಹಾಸ್ಟೆಲ್‌ಗಳ ಹೊರತು ಪಡಿಸಿ ಇತರೆಡೆ ಸಾರ್ವಜನಿಕರಿಗಾಗಿ ಆಡುಗೆ ಸಿದ್ಧಪಡಿಸಲು 300 ಮಂದಿ ಬಾಣಸಿಗರು, 1,200 ಮಂದಿ ಸ್ವಯಂ ಸೇವಕರು ಆಗಮಿಸಿದ್ದಾರೆ.
ಭಾರೀ ಹೊರೆ ಕಾಣಿಕೆ ಹರಿದು ಬರುತ್ತಿದೆ. ಉಗ್ರಾಣವೇ ಸುಮಾರು 40,000 ಚದರಡಿ ಪ್ರದೇಶದಲ್ಲಿ ಹರಡಿ ಕೊಂಡಿದೆ. ವಿಜಯಾನಂದ ಜೋಗಿ ಕಾನಡ್ಕ ಇವರ ಮೇಲುಸ್ತುವಾರಿಯಲ್ಲಿ, ಆಳ್ವಾಸ್ ಎಫ್‌ಓ ರಾಜೇಶ್ ನಾಯಕ್, ರಾಜಗೋಪಾಲ ಶೆಟ್ಟಿ, ಭರತೇಶ್, ಮೋಹನ್ ಕುಮಾರ್, ಸುಂದರ ಶೆಟ್ಟಿ ಸಹಿತ 75 ಮಂದಿಯ ತಂಡ, 200 ಕಾರ್ಮಿಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಈಗಾಗಲೇ 52 ಟನ್ ಬೆಳ್ತಿಗೆ ಅಕ್ಕಿಯನ್ನು ಕಳುಹಿಸಿ ಕೊಟ್ಟಿದ್ದಾರೆ. ಸ್ಕೌಟ್ಸ್ ಗೈಡ್ಸ್ ರಾಜ್ಯ ಕಮಿಶನರ್ ಪಿಜಿಆರ್ ಸಿಂಧ್ಯಾ 36 ಟನ್ ಸಕ್ಕರೆ ಸಮರ್ಪಿಸಿದ್ದಾರೆ. ಬಂಟ್ವಾಳದ ರಂಗೋಲಿ ಚಂದ್ರಹಾಸ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ತಾಲೂಕಿನ ವಿವಿಧೆಡೆಗಳಿಂದ 278 ಪಿಕಪ್, 7 ಟಿಪ್ಪರ್, 4ಲಾರಿಗಳಲ್ಲಿ 1,420 ಕ್ವಿಂ. ಅಕ್ಕಿ, 1.23 ಲಕ್ಷ ತೆಂಗಿನಕಾಯಿ, ಅವಲಕ್ಕಿ, ಬೆಲ್ಲ, ಸುಮಾರು25 ಲಕ್ಷ ರೂ. ಹರಿದುಬಂದಿದೆ. ರಾಮ ನಗರದ ಕೊಟ್ರೋಶ್ 4 ಟನ್ ರಾಗಿ, 3 ಟನ್ ಬೆಲ್ಲ, ಹೊಸದುರ್ಗ ಚಿತ್ರದುರ್ಗಗಳಿಂದ 28,000 ಕಾಯಿ, 27 ಟನ್ ರಾಗಿ, 9 ಕ್ವಿ. ತೊಗರಿ ಬೇಳೆ.ಅಕ್ಕಿ 1 ಟನ್, ಬೆಲ್ಲ 2 ಟನ್ ಕಳುಹಿಸಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್ ಅವರು ತಮ್ಮ ಕ್ಷೇತ್ರದ ಬಜಪೆ, ಮೂಲ್ಕಿ, ಕಟೀಲು, ಹಳೆಯಂಗಡಿ, ಕಿನ್ನಿಗೋಳಿ ಮೊದಲಾದ ಪ್ರದೇಶ ಗಳಿಂದ 5 ಟನ್ ಆಕ್ಕಿ, 8,000 ಕೆಜಿ ತರಕಾರಿ, ಬೆಲ್ಲ 1 ಟನ್, ಬೇಳೆ 3 ಕ್ವಿ. ತೆಂಗಿನ ಕಾಯಿ 1,500, ಇತರ ಅಡುಗೆ ಸಾಮಗ್ರಿಗಳನ್ನು ಹೊರೆಕಾಣಿಕೆ ಮೂಲಕ ಸಮರ್ಪಿಸಿದ್ದಾರೆ.
ಗದಗದ ಮಾದರಿ ಕೊಡುಗೆ
ಗದಗದ ಜಿಲ್ಲಾ ಸ್ಕೌಟ್ ಪ್ರಮುಖ ಜಿ.ಎಚ್. ಪೂಜಾರ್ ಅವರು 2.75 ಲಕ್ಷ ಜೋಳದ ರೊಟ್ಟಿ, 2 ಕ್ವಿ. ಸೇಂಗಾ ಚಟ್ನಿ, ವಿಜಯಪುರ ಸ್ಕೌಟ್ಸ್‌ನಿಂದ 10 ಕ್ವಿ. ಒಣದ್ರಾಕ್ಷಿ, ಬಳ್ಳಾರಿಯಿಂದ 13 ಟನ್ ಬೆಳ್ತಿಗೆ, ಪುತ್ತೂರಿನಿಂದ 3 ಟನ್ ಅಕ್ಕಿ 5025 ಕಾಯಿ, 3 ಕ್ವಿ. ತರಕಾರಿ, ಪಾಂಡವಪುರ ಶಾಸಕರಿಂದ 20 ಟನ್ ಸಕ್ಕರೆ, ಕೊಡಗು ಸ್ಕೌಟ್ಸ್ ನಿಂದ 1.25 ಟನ್ ಕಾಫಿ, ಎಕ್ಸಲೆಂಟ್‌ಕಾಫಿ ಪ್ಲಾಂಟ್‌ನಿಂದ 2 ಟನ್ ಕಾಫಿ, ಬೆಳಗಾವಿ ಬಸವೇಶ್ವರ ಟ್ರೇಡರ್ನಿಂದ 18 ಟನ್ ಈರುಳ್ಳಿ, ಹಾಸನ ಸ್ಕೌಟ್ಸ್ ನಿಂದ 3.25 ಕ್ವಿ. ಕಾಫಿ, 6000 ಕಾಯಿ, 1 ಲಕ್ಷ ಮಾಸ್ಕ್, ಮೂಡುಬಿದಿರೆ ಎಂಸಿಎಸ್ ಸೊಸೈಟಿ ಹಿರಿತನದಲ್ಲಿ 10 ಟನ್ ಅಕ್ಕಿ, ಅಥಣಿಯಿಂದ 18 ಟನ್ ಕ್ವಾಲಿಫÉವರ್..ಹೀಗೆ ಬಂದಿದೆ. ಸಣ್ಣಪುಟ್ಟ ಪ್ರಮಾಣದಲ್ಲಿ ವೈಯಕ್ತಿಕವಾಗಿಯೂ ಅಕ್ಕಿ, ಕಾಯಿ, ಬೇಳೆ, ತರಕಾರಿಗಳನ್ನು ದಾನಿಗಳು ಸಮರ್ಪಿಸುತ್ತಿದ್ದಾರೆ.ಹೊರೆಕಾಣಿಕೆಗಳ ವಾಹನಗಳು ಬರುತ್ತಲೇ ಇವೆ. ಆಹಾರ ಸಾಮಗ್ರಿ ರಾಶಿ ಬೀಳುತ್ತಲೇ ಇದೆ.
ಇದನ್ನೂ ಓದಿ: ಅಂಬೇಡ್ಕರ್ ಬ್ಯಾನರ್ ತೆರವಿಗೆ ಸದಸ್ಯರ ಅಸಮಾಧಾನ: ಕಾರ್ಕಳ ಪುರಸಭೆ ಸಾಮಾನ್ಯ ಸಭೆ