Advertisement

ಸ್ಕಾಟ್ಲೆಂಡ್‌ನ‌ಲ್ಲಿ ಉಚಿತ ಸ್ಯಾನಿಟರಿ ಉತ್ಪನ್ನ

12:53 AM Nov 27, 2020 | mahesh |

ಎಡಿನ್‌ಬರ್ಗ್‌: ಸ್ಯಾನಿಟರಿ ಉತ್ಪನ್ನಗಳನ್ನು ಉಚಿತವಾಗಿ ಹಂಚುವ ಬಗ್ಗೆ ಇರುವ ಕಾನೂನನ್ನು ಸ್ಕಾಟ್ಲೆಂಡ್‌ ಸಂಸತ್‌ ಅಂಗೀಕರಿಸಿದೆ. ಇಂಥ ಕಾನೂನು ಜಾರಿ ಮಾಡಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ. ಮಂಗಳವಾರ ನಡೆದ ಸಂಸತ್‌ ಅಧಿವೇಶನದಲ್ಲಿ “ಪೀರಿಯೆಡ್‌ ಪ್ರಾಡಕ್ಟ್ ಬಿಲ್‌’ಗೆ ಅವಿರೋಧವಾಗಿ ಅನುಮೋದನೆ ನೀಡಲಾ ಗಿದೆ. ಇದಕ್ಕಿಂತ ಮೊದಲು ಸಂಸದರು ಅಂಥ ಕಾಯ್ದೆ ಜಾರಿ ಮಾಡುವುದಕ್ಕೆ ಸಂಸದ ರೆಲ್ಲರೂ ಒಪ್ಪಿಕೊಂಡಿದ್ದರು.

Advertisement

ಹೊಸ ಕಾಯ್ದೆಯ ಪ್ರಕಾರ ಸ್ಯಾನಿಟರಿ ಉತ್ಪನ್ನಗಳು ಶಾಲೆಗಳು, ವಿವಿಗಳು ಸೇರಿದಂತೆ ಸಾರ್ವಜನಿಕ ಕಟ್ಟಡ ಗಳಲ್ಲಿ ಯಾವತ್ತೂ ಲಭ್ಯವಾ ಗು ವಂತೆ ಇರಬೇಕು. ಸ್ಥಳೀಯ ಆಡಳಿತದ ಹೊಣೆ ಹೊತ್ತಿರುವವರು ಅದನ್ನು ಸುಲಭವಾಗಿ ಅಗತ್ಯ ಬಿದ್ದವರಿಗೆ ಸಿಗುವಂತೆ ಮಾಡಬೇಕು ಎಂದು ಪ್ರಸ್ತಾವಿಸಲಾಗಿದೆ. ಕಾಯ್ದೆಯ ಬಗ್ಗೆ ಮಾತನಾಡಿದ ಸ್ಕಾಟ್ಲೆಂಡ್‌ ಸಂಸದೆ ಮೋನಿಕಾ ಲೆನೊನ್‌ “ಕಾರ್ಮಿಕ ಸಂಘಟನೆಗಳು, ಮಹಿಳಾ ಸಂಘಟನೆಗಳು ಮತ್ತು ದತ್ತಿ ಸಂಸ್ಥೆಗಳು ಈ ಕಾಯ್ದೆಗೆ ಬೆಂಬಲ ನೀಡಿವೆ.

ನಮ್ಮ ದೇಶ ಋತುಮತಿಯ ಸಂದರ್ಭದ ಅವಧಿಯ ಬಡತನ ಹೊಂದಿರುವ ಕೊನೆಯ ರಾಷ್ಟ್ರವಾ ಗಬೇಕು’ ಎಂದು ಹೇಳಿದ್ದಾರೆ. ಮೋನಿಕಾ ಅವರೇ ಈ ಮಸೂದೆ ಮಂಡಿಸಿದ್ದರು. ಯುನೈಟೆಡ್‌ ಕಿಂಗ್‌ಡಮ್‌ 2017ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಆ ದೇಶದಲ್ಲಿ ಪ್ರತೀ ಹತ್ತು ಹುಡುಗಿಯರ ಪೈಕಿ ಒಬ್ಬಳಿಗೆ ಋತುಮತಿಯಾಗುವ ಅವಧಿಯಲ್ಲಿ ಬಳಕೆ ಮಾಡುವ ಉತ್ಪನ್ನಗಳನ್ನು ಖರೀದಿಸಲು ಅಸಾಧ್ಯವಾಗಿರುವ ಪರಿಸ್ಥಿತಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next