Advertisement

ಪಕ್ಷದಲ್ಲಿ ನಿಷ್ಠಾವಂತರ ಕಡೆಗಣನೆ: ಈಶ್ವರಪ್ಪ

03:45 AM Jan 21, 2017 | Team Udayavani |

ವಿಜಯಪುರ: ರಾಯಣ್ಣ ಬ್ರಿಗೇಡ್‌ ರಾಜಕೀಯ ಪಕ್ಷವಲ್ಲ ಎಂದು ಪುನರುಚ್ಚರಿಸಿರುವ ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ, ಬ್ರಿಗೇಡ್‌ ವಿಷಯದಲ್ಲಿ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲಕ್ಕೆ ಶೀಘ್ರವೇ ತೆರೆ ಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿ, ಪಕ್ಷದ ಸಂಘಟನೆ ವಿಷಯದಲ್ಲಿ ಕೊಂಚ ಗೊಂದಲ ಇರುವುದು ನಿಜವೇ ಆದರೂ, ಕೇಂದ್ರದ ವರಿಷ್ಠರು ತಮ್ಮ ವಿಷಯದಲ್ಲಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಶೀಘ್ರವೇ ಸಮಸ್ಯೆಗೆ ಹೈಕಮಾಂಡ್‌ ಸೂಕ್ತ ಪರಿಹಾರ ಕಂಡುಕೊಡುವ ನಿರೀಕ್ಷೆ ಇದೆ ಎಂದರು.

“ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳ ನೇಮಕದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸಿದವರನ್ನು ಕಡೆಗಣಿಸಿದ್ದು, ಪಕ್ಷದ ಸಂಸ್ಥಾಪಕ ನಾಯಕರ ಭಾವಚಿತ್ರವನ್ನೇ ಗುರುತು ಹಿಡಿಯಲಾಗದ ಹೊಸಬರನ್ನು ನೇಮಕ ಮಾಡಿರುವ ರಾಜ್ಯಾಧ್ಯಕ್ಷ ಯಡಿಯೂರಪ್ಪ ವರ್ತನೆ ತಿಳಿಯದಾಗಿದೆ. ಪಕ್ಷದಲ್ಲಿ ಅತೃಪ್ತರಾದ ಮೇಲ್ಮನೆಯ 24 ಸದಸ್ಯರು ಪತ್ರ ಬರೆದಿದ್ದರೂ ನಾನು ಅದಕ್ಕೆ ಸಹಿ ಮಾಡಿರಲಿಲ್ಲ. ಇದರಲ್ಲಿ ಸಮಸ್ಯೆ ಪರಿಹಾರ ಮಾಡಿಕೊಳ್ಳಲು 12 ಜನರನ್ನು ಯಡಿಯೂರಪ್ಪ ಸಭೆಗೆ ಆಹ್ವಾನಿಸಿದ್ದರೂ ನನಗೆ ಆಹ್ವಾನ ಇರಲಿಲ್ಲ’ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತ. ಹೀಗಾಗಿ ಮಂಬರುವ ಚುನಾವಣೆ ಬಳಿಕ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂಬುವುದು ಕೇವಲ ಕನಸು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next