Advertisement

ಬಂಟ್ವಾಳ: ಸ್ಕೂಟರ್‌ ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

06:17 PM May 10, 2022 | Team Udayavani |

ಬಂಟ್ವಾಳ:  ಸ್ಕೂಟರ್‌ ಢಿಕ್ಕಿಯಾಗಿ ಪಾದಚಾರಿ ಮೃತಪಟ್ಟ ಘಟನೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬೇಂಕ್ಯದಲ್ಲಿ ನಡೆದಿದೆ.

Advertisement

ಸಜೀಪಮೂಡ ಗ್ರಾಮದ ಬೇಂಕ್ಯ ಸುಭಾಶ್ ನಗರ ನಿವಾಸಿ ಸುನಿಲ್ ಕುಮಾರ್ (46) ಮೃತಪಟ್ಟ ವ್ಯಕ್ತಿ.

ಸುನಿಲ್ ಕುಮಾರ್ ಅವರು ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿ ಮನೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸ್ಕೂಟರ್ ಢಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ‌.

ಇದನ್ನೂ ಓದಿ:ಕುಣಿಗಲ್ ಬಳಿ ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಸಾವು 

ಘಟನಾ ಸ್ಥಳಕ್ಕೆ ಸಂಚಾರ ಠಾಣಾ ಪಿಎಸ್ಐ ಮೂರ್ತಿ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next