Advertisement
ಜಾಗತಿಕವಾಗಿ ಉಗ್ರ ಕಾರ್ಯಾಚರಣೆಯನ್ನು ತಡೆಯುವ ನಿಟ್ಟಿನಲ್ಲಿ ಈ ಕೆಲಸ ಮಾಡಲು ಎಸ್‌ಸಿಒ ಶೃಂಗಸಭೆ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಒಟ್ಟು 8 ರಾಷ್ಟ್ರಗಳ ಸದಸ್ಯರು ಈ ಶೃಂಗದಲ್ಲಿ ಭಾಗಿಯಾಗಿದ್ದರು. ಹಾಗೆಯೇ ರಾಸಾಯನಿಕ ಹಾಗೂ ಭೌತಿಕ ಉಗ್ರವಾದವನ್ನು ತಡೆಯುವ ನಿಟ್ಟಿನಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳ ಉತ್ಪಾದನೆ, ಸಂಗ್ರಹಣೆ ಮತ್ತು ಬಳಕೆಗೆ ಕಡಿವಾಣ ಹೇರಬೇಕೆಂದು ಸಭೆಯಲ್ಲಿ ನಿರ್ಧರಿಸಲಾಗಿದೆ. ತಾಲಿಬಾನ್ ಆಡಳಿತ ದಲ್ಲಿರುವ ಅಫ್ಘಾನಿಸ್ಥಾನದಲ್ಲಿ ಎಲ್ಲರನ್ನೊಳಗೊಂಡ ಸರಕಾರ ರಚಿಸಬೇಕು. ಅಘಾ^ನ್ ಸಮಾಜದ ಎಲ್ಲ ಧರ್ಮ, ರಾಜಕೀಯ ಪಕ್ಷ, ಸಮುದಾಯಗಳು ಆ ಸರಕಾರದಲ್ಲಿ ಒಳಗೊಂಡಿರಬೇಕು ಎಂಬ ಬಗ್ಗೆಯೂ ಚರ್ಚಿಸಲಾಗಿದೆ.
ಅಮೆರಿಕದ ಪ್ರಸಿದ್ಧ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದೆ. ಎಸ್‌ಸಿಒ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ಪುತಿನ್ ಅವರೊಂದಿಗಿನ ಮಾತುಕತೆ ವೇಳೆ ಮೋದಿ ಅವರು, “ಇದು ಉಕ್ರೇನ್ ವಿರುದ್ಧ ಯುದ್ಧ ಮಾಡುವ ಸಮಯವಲ್ಲ’ ಎಂದು ಬುದ್ಧಿಮಾತು ಹೇಳಿದ್ದರ ಬಗ್ಗೆ ಪತ್ರಿಕೆ ವರದಿ ಮಾಡಿದೆ. “ಮೋದಿ ಅವರು ಪುತಿನ್‌ಗೆ ಸಾರ್ವಜನಿಕವಾಗಿ ಛೀಮಾರಿ ಹಾಕಿದ್ದಾರೆ. ಈ ಮೂಲಕ ಎಲ್ಲ ರಾಷ್ಟ್ರಗಳು ರಷ್ಯಾಕ್ಕೆ ಯುದ್ಧ ನಿಲ್ಲಿಸಲು ಒತ್ತಡ ಹೆಚ್ಚಿಸಿದಂತಾಗಿದೆ’ ಎಂದು ಹೇಳಿದೆ.