Advertisement

ಮಧ್ಯಮ ವರ್ಗದವರ ಪರ್ಸ್‌ಗೆ ಕತ್ತರಿ ಹಾಕುವ ಬಜೆಟ್

11:56 AM Jul 06, 2018 | |

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಮಂಡಿಸಿರುವ ಚೊಚ್ಚಲ ಬಜೆಟ್‌ ಬಡ ಹಾಗೂ ಮಧ್ಯಮ ವರ್ಗದವರ ಪರ್ಸ್‌ ಅನ್ನು ಚುಚ್ಚುವ ಬಜೆಟ್‌ ಆಗಿರುವುದು ವಿಪರ್ಯಾಸ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಟೀಕಿಸಿದ್ದಾರೆ.

Advertisement

ಯಾವುದೇ ಪೂರ್ವ ತಯಾರಿ ಇಲ್ಲದೆ  ತಜ್ಞರನ್ನು ಸಂಪರ್ಕಿಸದೆ , ದೂರದೃಷ್ಟಿ ರಹಿತ ಬಜೆಟ್‌ ಮಂಡಿಸಿದ್ದು, ಪೆಟ್ರೋಲ್‌, ಡೀಸೆಲ್‌ ಮೇಲೆ ಹೆಚ್ಚುವರಿ  ಸೆಸ್‌ ವಿಧಿಸುವ  ಮೂಲಕ  ಬಡ ವರ್ಗದ ಜನರ ಮೇಲೆ ಹೊರೆ ಹೇರಿದ್ದಾರೆ.ಜತೆಗೆ  ಪಾಲುದಾರ ಕಾಂಗ್ರೆಸ್‌ ಅನ್ನು ಮೆಚ್ಚಿಸುವ ಸರ್ಕಸ್‌ ನಡೆಸಲಾಗಿದೆ ಎಂದು ಲೇವಡಿ ಮಾಡಿದ್ದಾರೆ. ರೈತರ ಸಂಪೂರ್ಣ ಸಾಲಮನ್ನಾ ಮಾಡದೇ ಮಾತಿಗೆ ತಪ್ಪಿರುವ ಮುಖ್ಯಮಂತ್ರಿಗಳು ತನ್ನ ವಚನ ಭ್ರಷ್ಟತೆಯ ಪರಂಪರೆಯನ್ನು ಮುಂದುವರೆಸಿದ್ದಾರೆ.

ಆಕಾಶಕ್ಕೆ  ಏಣಿ ಹಾಕಲು ಹೊರಟ ಕುಮಾರಸ್ವಾಮಿಯವರು ಆಕಾಶ  ಮುಟ್ಟಲೂ  ಆಗದೆ ನೆಲದ ಮೇಲೂ  ಇರಲಾಗದೆ  ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಬಿಜೆಪಿ ಪ್ರಾಬಲ್ಯದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ  ಪ್ರದೇಶಗಳನ್ನು  ಸಂಪೂರ್ಣ ನಿರ್ಲಕ್ಷಿಸಿ  ತಾನು ಹಳೇ  ಮೈಸೂರು  ಪ್ರಾಂತ್ಯಕ್ಕೆ  ಮಾತ್ರ  ಮುಖ್ಯಮಂತ್ರಿ ಎಂಬ ತಪ್ಪು ಸಂದೇಶವನ್ನು ನೀಡಿದ್ದಾರೆ ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next