ಲಾಸ್ ಏಂಜಲೀಸ್ : ವೈರಸ್ ತಾನು ದಾಳಿ ಮಾಡುವ ಜೀವಕೋಶದ ಪ್ರೊಟೀನ್ಗಳನ್ನು ಹೈಜಾಕ್ ಮಾಡಿ, ಅಲ್ಲಿಂದ ಉದ್ದನೆಯ ಕೈ ರೀತಿಯ ರಚನೆಯನ್ನು ಬೆಳೆಸಿಕೊಂಡು ಹತ್ತಿರದ ಜೀವಕೋಶಕ್ಕೆ ತಲುಪುವ ಮೂಲಕ ಸೋಂಕು ಹರಡುತ್ತಾ ಹೋಗುವಂತೆ ಮಾಡುತ್ತದೆ ಎಂದು ಸಂಶೋಧಕರು ತೋರಿಸಿ ಕೊಟ್ಟಿದ್ದಾರೆ. ಇದೇ ಸಂಶೋಧನೆಯ ಆಧಾರದಲ್ಲಿ ವೈರಸ್ ಹರಡುವ ಪ್ರಕ್ರಿಯೆ ತಡೆಗಟ್ಟಬಲ್ಲ ಔಷಧಗಳನ್ನು ತಯಾರಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ.
ಕೋವಿಡ್ ಸೋಂಕು ದಾಳಿ ಮಾಡುವ ಕೋಶದ ವ್ಯವಸ್ಥೆಯನ್ನ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ ಹಾಗೂ ಅಲ್ಲಿ ಮತ್ತಷ್ಟು ಸೋಂಕಿನ ಕಣಗಳು ಹುಟ್ಟುವಂತೆ ವ್ಯವಸ್ಥೆ ಮಾರ್ಪಡಿಸುತ್ತದೆ. ಕೆಲ ಬಾರಿ ಇಂಥ ಹೈಜಾಕಿಂಗ್ ಆದಾಗ ದಾಳಿಯಾದ ಕೋಶದ ಪ್ರೊಟೀನ್ ಹಾಗೂ ಇತರ ಮಾಲಿಕ್ಯೂಲ್ಗಳಾದ ಎಂಜೈಮ್ಗಳ ಕಾರ್ಯವನ್ನು ಏರುಪೇರು ಮಾಡುವ ವೈರಸ್, ಪ್ರೊಟೀನ್ಗಳಲ್ಲಿನ ರಾಸಾಯನಿಕ ಕ್ರಿಯೆಗಳನ್ನು ಮಾರ್ಪಡಿಸುತ್ತದೆ ಎಂದು ಯುರೋಪಿಯನ್ ಬಯೊ ಇನ್ಫರ್ಮೆಟಿಕ್ಸ್ ಇನ್ಸ್ಟಿಟ್ಯೂಟ್ ಮತ್ತು ಸ್ಯಾನ್ ಫ್ರಾನ್ಸಿಸ್ಕೊದ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ತಿಳಿಸಿದ್ದಾರೆ.
ದಾಳಿಯಾದ ಶರೀರದ ಕೋಶದ ಪ್ರೊಟೀನ್ ಮತ್ತು ವೈರಲ್ ಪ್ರೊಟೀನ್ಗಳಲ್ಲಾಗುವ ಎಂಜೈಮ್ ಪ್ರಕ್ರಿಯೆಯನ್ನು ಫಾಸೊ ರೈಲೇಶನ್ ಎಂದು ಕರೆಯಲಾಗಿದೆ. ಈ ಫಾಸೊ#ರೈಲೇಶನ್ ಪ್ರಕ್ರಿಯೆಯಲ್ಲಿ ಪ್ರೊಟೀನ್ ಒಳಗಡೆ ಫಾಸೊ#ರಿಲ್ ಗ್ರೂಪ್ ರಚನೆಯಾಗಿ ಕೈನೇಸ್ ಎಂಬ ಎಂಜೈಮ್ ಬಿಡುಗಡೆಯಾಗುತ್ತದೆ.
ಜೀವಕೋಶದ ಬಹುತೇಕ ಎಲ್ಲ ಕಾರ್ಯವಿಧಾನ, ಕೋಶದಿಂದ ಕೋಶದ ಸಂಪರ್ಕ, ಕೋಶದ ಬೆಳವಣಿಗೆ ಹಾಗೂ ಕೋಶದ ಸಾವು ಎಲ್ಲವನ್ನೂ ಈ ಕೈನೇಸ್ ಎಂಜೈಮ್ ನಿಯಂತ್ರಿಸುತ್ತದೆ ಎಂದು ಸಂಡೇ ಜರ್ನಲ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಸಂಶೋಧನಾ ವರದಿ ಹೇಳಿದೆ.
ದಾಳಿ ಮಾಡುವ ದೇಹದ ಪ್ರೊಟೀನ್ಗಳ ಫಾಸೊ ರೈಲೇಶನ್ ಮಾದರಿಗಳನ್ನು ಬದಲಾಯಿಸುವ ಮೂಲಕ ಸೋಂಕು ತನ್ನನ್ನು ತಾನು ಬೇರೆ ಕೋಶಗಳಿಗೆ ಹಾಗೂ ನಂತರ ಬೇರೆ ಜೀವಿಗಳಿಗೆ ಹರಡುವ ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳುತ್ತದೆ. ಸೋಂಕಿನೊಂದಿಗೆ ಸಂಪರ್ಕಕ್ಕೆ ಬರುವ ಶೇ.12 ರಷ್ಟು ಪ್ರೊಟೀನ್ಗಳು ಮಾರ್ಪಾಟಾಗಿರುತ್ತವೆ. ಇಂಥ ಮಾರ್ಪಾಟುಗಳನ್ನು ಬಹುತೇಕ ಕೈನೇಸ್ಗಳು ನಿಯಂತ್ರಿಸುತ್ತವೆ ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.