ಚಿಕ್ಕಬಳ್ಳಾಪುರ: ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ರಾಷ್ಟ್ರೀಯ ಶಿಲೆ ಯಂತ್ರಶಾಸ್ತ್ರಸಂಸ್ಥೆಯ ಹಿರಿಯ ಅಧಿ ಕಾರಗಳ ತಂಡ ಜಿಲ್ಲೆಯ ಭೂಕಂಪನ ಬಾಧಿ ತ ಬಂಡಹಳ್ಳಿ, ಶೆಟ್ಟಿಗೆರೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕಂದಾಯ ಇಲಾಖೆ ಹಿರಿಯ ಸಮಾಲೋಚಕ ಡಾ.ಜಿ.ಎಸ್.ಶ್ರೀನಿವಾಸ್‌ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಧಾರಾಕಾರ ಮಳೆ, ಅಂತರ್ಜಲ ಮಟ್ಟಹೆಚ್ಚಳ ಹಾಗೂ ಭೂಮಿ ಒಳಭಾಗದ ಚಲನೆಯಿಂದ ಉಂಟಾಗುವ ಒತ್ತಡದಿಂದ ಇತ್ತೀಚೆಗೆ ಲಘು ಭೂಕಂಪನ ಸಂಭವಿಸಿರುವ ಸಾಧ್ಯತೆ ಇದೆ. ಜನರು ಆತಂಕ ಪಡುವುದು ಬೇಡ ಎಂದು ಹೇಳಿದರು.
ವಸ್ತುಸ್ಥಿತಿ ಪರಿಶೀಲನೆ: ರಾಷ್ಟ್ರೀಯ ಶಿಲೆ ಯಂತ್ರಶಾಸ್ತ್ರ ಸಂಸ್ಥೆ ಮುಖ್ಯಸ್ಥ ಡಾ.ಬಾಲಸುಬ್ರಹ್ಮಣ್ಯಂ ಮಾತನಾಡಿ, ಭೂಕಂಪನವನ್ನು ಯಾರೂ ತಡೆಯಲಾಗದಿದ್ದರೂ, ಅಂತಹ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬಹುದಾಗಿದೆ. ಆ ನಿಟ್ಟಿನಲ್ಲಿ ಭೂಕಂಪನ ಬಾಧಿತ ಪ್ರದೇಶದ ವಸ್ತುಸ್ಥಿತಿಯನ್ನು ವೈಜ್ಞಾನಿಕವಾಗಿ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
ವಿಜ್ಞಾನಿ ಬಿಜು ಜಾನ್, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಕಿರಿಯ ವೈಜ್ಞಾನಿಕ ಅಧಿಕಾರಿ ಕೆ.ಕೆ.ಅಭಿನಯ, ಚಿಕ್ಕಬಳ್ಳಾಪುರ ಜಿಲ್ಲೆಯ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ, ಹಿರಿಯ ಹೈಡ್ರಾಲಜಿಸ್ಟ್ ಬೋರಪ್ಪ, ಕಿರಿಯ ಭೂವಿಜ್ಞಾನಿ ಬಿ.ಎನ್.ಕೃಷ್ಣಮೂರ್ತಿ, ಚಿಕ್ಕಬಳ್ಳಾಪುರ ತಾಲೂಕಿನ ತಹಶೀಲ್ದಾರ್ ಗಣಪತಿಶಾಸ್ತ್ರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಕರಪತ್ರ ಹಂಚಿ ಜಾಗೃತಿ: ಈ ಸಂದರ್ಭದಲ್ಲಿ ತಂಡವು ಭೂಕಂಪನದ ಮೊದಲು, ನಂತರದ ಸಮಯದಲ್ಲಿಕೈಗೊಳ್ಳಬೇಕಾದ ಸಿದ್ಧತೆ ಬಗ್ಗೆ ಕರಪತ್ರ ನೀಡಿ ಜನರಲ್ಲಿ ಜಾಗೃತಿ ಮೂಡಿಸಿತು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದು ತಿಂಗಳಿಂದಭೂಕಂಪನದ ಅನುಭವದಿಂದ ನಾಗರಿಕರು ಆತಂಕಗೊಂಡಿದ್ದಾರೆ. ಹಲವರು ಪ್ರಾಣಭೀತಿಯಿಂದಗ್ರಾಮ ತೊರೆದಿದ್ದಾರೆ. ಈ ಹಿಂದೆ ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾ ಧಿಕಾರಿ ಆರ್.ಲತಾಭೂಕಂಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ,ಮನೆಗಳು ಬಿರುಕು ಬಿಟ್ಟಿರುವುದನ್ನು ವೀಕ್ಷಣೆ ಮಾಡಿದನ್ನು ಇಲ್ಲಿ ಸ್ಮರಿಸಬಹುದಾಗಿದೆ.