Advertisement

ಮಲೆನಾಡಿನ ಭೂ ಕುಸಿತವಾದ ಪ್ರದೇಶಗಳಿಗೆ ವಿಜ್ಞಾನಿಗಳ ಭೇಟಿ

10:34 AM Aug 23, 2019 | Team Udayavani |

ಚಿಕ್ಕಮಗಳೂರು: ಜಿಲ್ಲೆಯ ಭೂ ಕುಸಿತವಾಗಿರುವ ಪ್ರದೇಶಗಳಿಗೆ ಇಂದು ಭೂ ವಿಜ್ಞಾನಿಗಳು ಭೇಟಿ ನೀಡಿ ಅಧ್ಯಯನ ನಡೆಸಿದರು. ಭಾರತೀಯ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳಾದ ಕಪಿಲ್ ಸಿಂಗ್ , ಕಮಲ್ ಕುಮಾರ್ , ದಯಾನಂದ್ ನೇತೃತ್ವದ ತಂಡ ಭೂ ಕುಸಿತವಾದ ಪ್ರದೇಶಗಳಿಗೆ ಭೇಟಿ ನೀಡಿದರು.

Advertisement

ಭಾರಿ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್, ಅಲೇಖಾನ್, ಮಲೆಮನೆ, ದುರ್ಗದಹಳ್ಳಿ ಸೇರಿದಂತೆ ಹಲವು ಭಾಗಗಳಲ್ಲಿ ಭೂ ಕುಸಿತ ಸಂಭವಿಸಿತ್ತು.

ಈ ಪ್ರದೇಶಗಳಿಗೆ ಭೇಟಿ ನೀಡಿದ ವಿಜ್ಞಾನಿಗಳ ತಂಡ ಯಾವ ಕಾರಣಕ್ಕಾಗಿ ಭೂ ಕುಸಿತವಾಗಿದೆ, ಮಳೆಯಿಂದಾಗಿ ಅಥವಾ ಭೂಕಂಪನದಿಂದ ಹೀಗಾಗಿದೆಯೇ ಎಂದು ತನಿಖೆ ನಡೆಸಲಿದೆ. ಮುಂದಿನ ದಿನಗಳಲ್ಲಿ ಆಗಬಹುದಾದ ಅನಾಹುತಗಳ ಬಗ್ಗೆ ಕೂಡಾ ಈ ತಂಡ ಅಧ್ಯಯನ ನಡೆಸಲಿದೆ.

 

Advertisement

ಭೂಕುಸಿತದ ಕಾರಣಗಳ ಬಗ್ಗೆ ಆಧ್ಯಯನ ನಡೆಸಿ ಈ ತಂಡ ಸರ್ಕಾರಕ್ಕೆ ಸಮಗ್ರ ವರದಿ‌‌ ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next