Advertisement
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಇಂಥದ್ದೊಂದು ಮಹತ್ವದ ಸಾಧನೆ ಮಾಡಿದ್ದಾರೆ. 53 ವರ್ಷದ ಮಹಿಳೆಯೊಬ್ಬರ ಚರ್ಮದ ಕೋಶಗಳನ್ನು 30 ವರ್ಷಗಳಷ್ಟು ಹಿಂದಕ್ಕೆ ತಂದಿದ್ದಾರೆ!
Related Articles
25 ವರ್ಷಗಳ ಹಿಂದೆ ಡಾಲಿ ಎಂಬ ಮೇಕೆಯ ತದ್ರೂಪಿಯನ್ನು ಸೃಷ್ಟಿಸಲು ಬಳಸಿದ ತಂತ್ರಜ್ಞಾನವನ್ನೇ ಇದಕ್ಕೂ ಬಳಸಲಾಗಿದೆ. ದೇಹದ ಇತರೆ ಅಂಗಾಂಶಗಳನ್ನೂ ಇದೇ ರೀತಿ ಪುನರುಜ್ಜೀವನಗೊಳಿಸಬಹುದು ಎಂದೂ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
Advertisement
ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಮತ್ತು ನರರೋಗಗಳಂತಹ ವಯೋಸಹಜ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸುವುದೇ ಈ ಸಂಶೋಧನೆಯ ಮುಖ್ಯ ಉದ್ದೇಶ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ:ಬೆಳಗಿನ ಜಾವದವರೆಗೂ ಸಿಎಂ,ಜೋಶಿ ಮತ್ತು ಪ್ರಭಾವಿ ಸಚಿವರ ಚರ್ಚೆ!
ಟೈಮ್ ಜಂಪ್:ವಯಸ್ಸಾದಂತೆ, ನಮ್ಮ ಕೋಶಗಳ ಕಾರ್ಯಕ್ಷಮತೆ ಕುಗ್ಗುತ್ತಾ ಹೋಗುತ್ತದೆ ಮತ್ತು ವಯಸ್ಸಾಗಿರುವ ಗುರುತುಗಳು ನಮ್ಮ ದೇಹದಲ್ಲಿ ಗೋಚರಿಸತೊಡಗುತ್ತವೆ. ರಿಜನರೇಟಿವ್ ಬಯಾಲಜಿ(ಪುನರುತ್ಪಾದಕ ಜೀವಶಾಸ್ತ್ರ)ಯು ಹಳೆಯದ್ದೂ ಸೇರಿದಂತೆ ಎಲ್ಲ ಕೋಶಗಳನ್ನು ಸರಿಪಡಿಸುವ ಕೆಲಸ ಮಾಡುತ್ತದೆ. ಕೇಂಬ್ರಿಡ್ಜ್ ಸಂಶೋಧಕರು ಮೆಚ್ಯುರೇಷನ್ ಫೇಸ್ ಟ್ರಾನ್ಸಿಯೆಂಟ್ ರೀಪ್ರೊಗ್ರಾಮಿಂಗ್(ಎಂಪಿಟಿಆರ್) ಎಂಬ ವಿಧಾನವನ್ನು ಬಳಸಿಕೊಂಡು, ಕೋಶದ ಕಾರ್ಯನಿರ್ವಹಣೆಯನ್ನು ಹಾಗೆಯೇ ಉಳಿಸಿಕೊಂಡು, ಅವುಗಳು ಯುವ ಕೋಶಗಳಾಗಿ ಕಾಣುವಂತೆ ಮಾಡಿದ್ದಾರೆ. ಈ ಮೂಲಕ ವಯಸ್ಸಾದವರ ಚರ್ಮವನ್ನು 30 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.