ಮಣಿಪಾಲ: ಕೋವಿಡ್ 19 ವೈರಸ್ ಹೇಗೆ ಹರಡುತ್ತದೆ, ರೋಗದ ಲಕ್ಷಣಗಳೇನು, ಕೋವಿಡ್ ಹೇಗೆ ಮನುಷ್ಯನ ದೇಹದೊಳಗೆ ಸೇರಿಕೊಂಡು ಜೀವ ಹರಣ ಮಾಡುತ್ತದೆ ಎಂಬ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದು, ರೋಗ ನಿರೋಧಕ ಶಕ್ತಿ ಕಡಿಮೆಯಾಗುವ ಮೂಲಕ ಕೋವಿಡ್ 19 ವೈರಸ್ ನಿಂದ ಮನುಷ್ಯ ಸಾವನ್ನಪ್ಪುತ್ತಿರುವುದಾಗಿ ಅಂದಾಜಿಸಲಾಗಿದೆ.
ಕೋವಿಡ್ ಕುರಿತ ಅಧ್ಯಯನ ವರದಿ ಪ್ರಕಟಿಸಿರು ಫ್ರಂಟಿಯರ್ಸ್ ಪ್ರಕಾರ, ಗಾಳಿಯ ಮೂಲಕ ಹರಡುವ ಸೋಂಕು ಹೇಗೆ ಮನುಷ್ಯನ ದೇಶದೊಳಗೆ ಸೇರಿಕೊಂಡು ರೋಗ ನಿರೋಧಕ ಶಕ್ತಿಯನ್ನು ಹೇಗೆ ಕೊಲ್ಲುತ್ತದೆ ಎಂಬುದನ್ನು ವಿವರಿಸಿದೆ.
ಮನುಷ್ಯನ ದೇಹದೊಳಗೆ ಉತ್ಪತ್ತಿಯಾಗುವ ಸೈಟೋಕಿನ್ ಅನ್ನು ದುರ್ಬಲಗೊಳಿಸಿ ರೋಗ ನಿರೋಧಕ ಶಕ್ತಿಯನ್ನೇ ಕೋವಿಡ್ ಕುಂಠಿತಗೊಳಿಸುತ್ತದೆ ಎಂದು ವರದಿ ತಿಳಿಸಿದೆ. ಬಿಳಿ ರಕ್ತಕಣಗಳು ಅತೀ ಹೆಚ್ಚು ಸಕ್ರಿಯವಾಗುವ ಮೂಲಕ ಅತೀ ಹೆಚ್ಚಿನ ಸೈಟೋಕಿನ್ಸ್ ಗಳನ್ನು ಬಿಡುಗಡೆ ಮಾಡುತ್ತದೆ. ಇದು ರಕ್ತದಲ್ಲಿ ಸೇರಿಕೊಳ್ಳುತ್ತದೆ. ಹೀಗೆ ಸಾರ್ಸ್ ಅಥವಾ ಮರ್ಸ್ ಸೋಂಕು ಪೀಡಿತರಾದಾಗ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತ ಬರುತ್ತದೆ. ಹೀಗೆ ಮನುಷ್ಯನ ಶ್ವಾಸಕೋಶ, ರೋಗ ನಿರೋಧಕ ಶಕ್ತಿಯನ್ನು ಹೀರುವ ಮೂಲಕ ಕೋವಿಡ್ ಮನುಷ್ಯನನ್ನು ಸಾವಿನ ದವಡೆಗೆ ದೂಡುತ್ತದೆ ಎಂದು ತಿಳಿಸಿದೆ.
ಕೋವಿಡ್ ನೂತನ ವೈರಸ್ ಜಗತ್ತಿನ 200ಕ್ಕೂ ಅಧಿಕ ದೇಶಗಳನ್ನು ಕಂಗೆಡಿಸಿದೆ. ಜಾಗತಿಕವಾಗಿ 42 ಲಕ್ಷ ಮಂದಿ ಸೋಂಕು ಪೀಡಿತರಾಗಿದ್ದು, 2ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ 74,281 ಮಂದಿ ಕೋವಿಡ್ 19 ವೈರಸ್ ಪೀಡಿತರಿದ್ದು, ಸಾವಿನ ಸಂಖ್ಯೆ 2,415ಕ್ಕೆ ತಲುಪಿದೆ. ಕೋವಿಡ್ ನಿಂದ ಜಗತ್ತಿನ ಬಲಿಷ್ಠ ರಾಷ್ಟ್ರಗಳು ಎನ್ನಿಸಿಕೊಂಡಿದ್ದ ಅಮೆರಿಕ, ಬ್ರಿಟನ್, ಸ್ಪೇನ್, ಜರ್ಮನಿ, ಇಟಲಿ ತತ್ತರಿಸಿ ಹೋಗಿದೆ.