Advertisement
ಹಿಂಗಾರ ಒಣಗಿದ ರೋಗದಿಂದ ಪಾರಾದ ಎಳೆ ಅಡಿಕೆಗೆ ಮುಂದಿನ ಹಂತದಲ್ಲಿ ಕಾಡುವುದು ಪೆಂಟಟೊಮಿಡ್ ತಿಗಣೆ ಮತ್ತು ಪೆರಿಯಾಂತ್ ಮೈಟ್. ಇದನ್ನು ನಿರ್ವಹಣೆ ಮಾಡುವಲ್ಲಿ ಕೃಷಿಕರು ಹೈರಾಣಾಗಿದ್ದಾರೆ. ಬೇರೆ ಬೇರೆ ಸಮಯದಲ್ಲಿ ಹಿಂಗಾರ ಒಣಗುವ ರೋಗ, ಪೆಂಟಟೊಮಿಡ್ ತಿಗಣೆ ಮತ್ತು ಪೆರಿಯಾಂತ್ ಮೈಟ್ ಅಡಿಕೆಗೆ ಬಾಧಿಸುವ ಕಾರಣ, ಬೋಡೋì ಸಿಂಪಡಣೆಯೇ ಕಷ್ಟ ಎನ್ನುವ ಸ್ಥಿತಿ ಉಂಟಾಗಿದೆ.
Related Articles
- ಮುಂಗಾರು ಪೂರ್ವದಲ್ಲಿ ಮತ್ತು ಜೂನ್-ಜುಲೈ ತಿಂಗಳಲ್ಲಿ ಬಿದ್ದ ಕಾಯಿಗಳನ್ನು ಗಮನಿಸುತ್ತಿರುವುದು ಅತೀ ಮುಖ್ಯ. ಏಕೆಂದರೆ ತಿಗಣೆ ರಸಹೀರಿದ ಎಳೆಕಾಯಿಯು 2-3 ದಿನದಲ್ಲಿ ನೆಲಕ್ಕೆ ಉದುರುತ್ತದೆ ಮತ್ತು ಒಂದು ತಿಗಣೆ ದಿನಕ್ಕೆ ಒಂದೇ ಕಾಯಿಯಿಂದ ರಸ ಹೀರುತ್ತದೆ. ಹಾಗಾಗಿ ಬಿದ್ದ ಎಳೆಕಾಯಿಗಳನ್ನು ಗಮನಿಸಿ ಆ ಮರಕ್ಕೆ ಮತ್ತು ಸುತ್ತಮುತ್ತಲಿನ ಮರಗಳಿಗೆ ಔಷಧ ಸಿಂಪಡಣೆ ಒಳ್ಳೆಯದು.
- ನಾವು ಬೆಳೆಸುವ ಅಲಸಂಡೆ, ಬೆಂಡೆ ಕಾಯಿ, ಹಾಗಲಕಾಯಿ, ಕಾಯಿ ಮೆಣಸು, ತೊಂಡೆಕಾಯಿ, ಬೂದು ಕುಂಬಳಕಾಯಿ ಮುಂತಾದುವುಗಳಲ್ಲಿ ತಿಗಣೆಯು ಆಶ್ರಯ ಪಡೆಯುತ್ತವೆ. ಹಾಗಾಗಿ ಇಂತಹ ತರಕಾರಿಗಳಲ್ಲಿ ತಿಗಣೆಯನ್ನು ನಿಯಂತ್ರಣ ಮಾಡಬೇಕು.
- ಕಡಿಮೆ ಹಾನಿ ಇದ್ದಲ್ಲಿ, ಬೇವಿನ ಎಣ್ಣೆ (5 ಎಂಎಲ್ ಒಂದು ಲೀಟರ್ ನೀರಿಗೆ+ಸೋಪ್) ಸಿಂಪಡಣೆ ಮಾಡಬಹುದು. ಸಿಂಪಡಣೆ ಮಾಡುವಾಗ ಮರದ ಎಲ್ಲ ಗೊನೆಗಳು ಚೆನ್ನಾಗಿ ಒದ್ದೆ ಆಗಬೇಕು. ಏಕೆಂದರೆ ಈ ಕೀಟದ ಸಂತಾ ನೋತ್ಪತ್ತಿ ಗೊನೆಯಲ್ಲಿಯೇ ಆಗುತ್ತದೆ.
Advertisement
ಪೊಟಾಷ್(235-350 ಗ್ರಾಂ) ಬಳಕೆ ಮರದ ಸದೃಢ ಬೆಳವಣಿಗೆಗೆ ಬಹಳ ಮುಖ್ಯ. ಕೆಲವೊಮ್ಮೆ ಪೋಷಕಾಂಶ ಕೊರತೆ ಮತ್ತು ಪೆರಿಯಾಂತ್ ಮೈಟ್ ಬಾಧೆಯಿಂದ ಎಳೆಕಾಯಿ ಉದುರುತ್ತದೆ. ಹಾಗಾಗಿ ಎಳೆಕಾಯಿಯಲ್ಲಿ ಹಾನಿಯ ಲಕ್ಷಣ ಗಮನಿಸದೆ ಕೀಟನಾಶಕ ಸಿಂಪಡಣೆ ಮಾಡುವುದು ಸರಿಯಲ್ಲ. ಅಲ್ಲದೆ ಬೋರ್ಡೋ ಮಿಶ್ರಣದೊಂದಿಗೆ ಕೀಟನಾಶಕವನ್ನು ಸೇರಿಸಿ ಸಿಂಪಡಣೆ ಮಾಡುವುದು ಒಳ್ಳೆಯದಲ್ಲ. –ಡಾ| ಭವಿಷ್ಯ, ವಿಟ್ಲ ಸಿಪಿಸಿಆರ್‌ಐ ವಿಜ್ಞಾನಿ
ಕೀಟದ ಬಾಧೆ ಹೆಚ್ಚಿದ್ದರೆ ಕ್ಲೋಥಯನಿಡಿನ್ Clothianidin 50WDG ಅನ್ನು ಒಂದು ಲೀಟರ್ ನೀರಿಗೆ 0.3ರಂತೆ ಹಾಕಿ ಸಿಂಪಡಣೆ ಮಾಡಬೇಕು. ಆದರೆ ರಾಸಾಯನಿಕ ಕೀಟನಾಶಕವನ್ನು ಅನಿವಾರ್ಯ ಸ್ಥಿತಿಯಲ್ಲಿ ಮಾತ್ರ ಸಿಂಪಡಣೆ ಮಾಡಬೇಕು. –ಡಾ| ಶಿವಾಜಿ ತುಬೆ, ವಿಟ್ಲ ಸಿಪಿಸಿಆರ್‌ಐ ವಿಜ್ಞಾನಿ