ನವದೆಹಲಿ: ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ವಿಜ್ಞಾನಿ(55ವರ್ಷ)ಯೊಬ್ಬರು ಸೆಂಟ್ರಲ್ ದೆಹಲಿಯಲ್ಲಿರುವ ಶಾಸ್ತ್ರೀ ಭವನದ ಏಳನೇ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ (ಮೇ 24) ಬೆಳಗ್ಗೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಎರಡು ವಾರದ ಹಿಂದೆ ನಾಪತ್ತೆಯಾಗಿದ್ದ ಗಾಯಕಿಯ ಶವ ಸಮಾಧಿ ಸ್ಥಿತಿಯಲ್ಲಿ ಪತ್ತೆ: ಅತ್ಯಾಚಾರ ಆರೋಪ
ಈ ವ್ಯಕ್ತಿಯನ್ನು ಪಶ್ಚಿಮ ದೆಹಲಿಯ ಪೀರ್ ಗರ್ಹಿ ನಿವಾಸಿ ರಾಜೇಶ್ ಮಲ್ಲಿಕ್ ಎಂದು ಗುರುತಿಸಲಾಗಿದೆ. ಮಲ್ಲಿಕ್ ಶವ ಶಾಸ್ತ್ರೀ ಭವನ ಮುಂಭಾಗದ ಗೇಟ್ ನಂಬರ್ 2ರ ಬಳಿ ಶವ ಪತ್ತೆಯಾಗಿದೆ. ಶಾಸ್ತ್ರೀ ಭವನದಲ್ಲಿ ಕೇಂದ್ರ ಸರ್ಕಾರದ ಸಚಿವಾಲಯಗಳ ಸಚಿವರ ಹಲವಾರು ಮನೆಗಳು ಇಲ್ಲಿರುವುದಾಗಿ ವರದಿ ತಿಳಿಸಿದೆ.
ಶಾಸ್ತ್ರೀ ಭವನದ ಮಹಡಿಯಿಂದ ವ್ಯಕ್ತಿಯೊಬ್ಬರು ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ಬಂದಿತ್ತು. ನಂತರ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತರನ್ನು ವಿಜ್ಞಾನಿ ರಾಕೇಶ್ ಮಲ್ಲಿಕ್ ಎಂದು ಗುರುತಿಸಲಾಗಿದೆ ಎಂಬುದಾಗಿ ಡೆಪ್ಯುಟಿ ಪೊಲೀಸ್ ಕಮಿಷನರ್ ಅಮೃತಾ ಗುಗುಲೋತ್ ತಿಳಿಸಿದ್ದಾರೆ.
ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಅಮೃತಾ ತಿಳಿಸಿರುವುದಾಗಿ ವರದಿ ಹೇಳಿದೆ.