ಮಣಿಪಾಲ: ಕೋವಿಡ್ 19 ವೈರಾಣುವನ್ನು ತಡೆಯುವುದು ಕಷ್ಟವಲ್ಲ. ಚೀನ ಆಯ್ತು ಮುಂದಿನ ಸರದಿ ಅಮೆರಿಕ ಎಂದು ನೊಬೆಲ್ ಪುರಸðತ ವಿಜ್ಞಾನಿ ಲೆವಿಟ್ ಹೇಳಿದ್ದಾರೆ.
ಈ ಕುರಿತಂತೆ ಲಾಸ್ ಎಂಜಲೀಸ್ ಟೈಮ್ಸ್ ಪತ್ರಿಕೆ ವರದಿ ಮಾಡಿದ್ದು, ವಿಶ್ವಕ್ಕೆ ಕೆಲವೇ ದಿನಗಳಲ್ಲಿ ಕೋವಿಡ್ 19 ವೈರಸ್ ನಿಂದ ಗಂಡಾಂತರ ಕಾದಿದೆ ಎಂದು ಈ ಹಿಂದೆಯೇ ಮೈಕಲ್ ಲೆವಿಟ್ ಎಚ್ಚರಿಸಿದ್ದರು.
ಲೆವಿಟ್ ನೀಡಿರುವ ಅಂಕಿಅಂಶಗಳಿಗೂ ಚೀನದಲ್ಲಿ ಈ ತನಕ ಸಂಭವಿಸಿರುವ ಸಾವಿನ ಪ್ರಮಾಣ ತಾಳೆಯಾಗುತ್ತಿದೆ. ಲೆವಿಟ್ ಹೇಳುವಂತೆ ಕೋವಿಡ್ 19 ವೈರಸ್ ವಿಶ್ವದೆಲ್ಲಡೆ ಹೊಸಹೊಸ ಪ್ರಕರಣಗಳು ದಾಖಲಾಗುತ್ತಿವೆ. ಕೋವಿಡ್ 19 ನಿಂದ ಚೇತರಿಕೆಯ ಲಕ್ಷಣಗಳು ಕಂಡುಬರುತ್ತಿವೆ. ಜಗತ್ತು ಇದಕ್ಕೆ ಭಯ ಪಡಬೇಕಾಗಿಲ್ಲ. ಮುಂದಿನ ವಾರದಿಂದ ಕೋವಿಡ್ 19 ಹರಡುವುದು ಕಡಿಮೆಯಾಗಲಿದೆ ಎಂದಿದ್ದಾರೆ.
ಕೋವಿಡ್ 19 ಸೋಂಕಿತ ರಾಷ್ಟ್ರಗಳು ಈ ನಿರ್ಣಾಯಕ ಘಟ್ಟದಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು ಅತೀ ಮುಖ್ಯ. ಜತೆಗೆ, ಶುಚಿತ್ವಕ್ಕೂ ಆದ್ಯತೆಯನ್ನು ನೀಡಬೇಕು. ಸಾರ್ವಜನಿಕರು ಇನ್ನೊಂದು ವಾರ ಜಾಗರೂಕತೆಯಿಂದ ಇದ್ದರೆ, ಎಲ್ಲವೂ ಸರಿಹೋಗಲಿದೆ ಎಂದಿದ್ದಾರೆ ಲೆವಿಟ್. 2013ರಲ್ಲಿ ರಸಾಯನ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದ್ದ ಅಮೆರಿಕ – ಬ್ರಿಟಿಷ್ ಮೂಲದ ಮೈಕಲ್ ಲೆವಿಟ್, ಚೀನ ದೇಶಕ್ಕೆ ಕೋವಿಡ್ 19 ಎನ್ನುವ ವೈರಾಣು ದಾಳಿ ಮಾಡುವ ಮುನ್ನವೇ ಜಗತ್ತಿಗೆ ಎಚ್ಚರಿಕೆ ನೀಡಿದ್ದರು.
ಲೆವಿಟ್ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದ ಜಗತ್ತು ಇಂದು ಈ ಮಾರಣಾಂತಿಕ ವೈರಸ್ ನಿಂದ ಹೈರಾಣಗೊಂಡಿದೆ. ಇದೀಗ ಮತ್ತೆ ಮೈಕಲ್ ಲೆವಿಟ್ ಮತ್ತೆ ವಿಶ್ವ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದಾರೆ. ಕೋವಿಡ್ 19 ಅಧಿಕ ಬಿಸಿಲ ಒತ್ತಡದಲ್ಲಿ ಹೆಚ್ಚುಕಾಲ ಇರುತ್ತದೆಯೇ, ಜಾಸ್ತಿ ನೀರು ಕುಡಿದರೆ ತೊಲಗಿ ಸಾಯುತ್ತದೆಯೇ ಎನ್ನುವುದರ ಬಗ್ಗೆ ಲೆವಿಟ್ ಯಾವುದೇ ಸುಳಿವು ನೀಡದೇ ಮನೆಯಲ್ಲೇ ಇರುವುದು ಒಳ್ಳೆಯದು ಎಂದಿದ್ದಾರೆ.