Advertisement

ವೈಜ್ಞಾನಿಕ ಚಿಂತನೆ ನಮ್ಮದಾಗಲಿ

03:38 AM Feb 28, 2021 | Team Udayavani |

ಭಾರತದ ಶ್ರೇಷ್ಠ ಭೌತ ವಿಜ್ಞಾನಿ ಸರ್‌| ಸಿ. ವಿ. ರಾಮನ್‌ ಅವರು ಬೆಳಕಿನ ವಿಶಿಷ್ಟ ಚಲನೆಯ “ರಾಮನ್‌ ಪ್ರಭಾವ’ವನ್ನು ಸಂಶೋಧಿಸಿದ್ದು ಕ್ರಿ.ಶ. 1928ರ ಫೆಬ್ರವರಿ 28ರಂದು. ಇದನ್ನು ನೆನಪಿಸಿಕೊಳ್ಳುವುದರ ಜತೆಯಲ್ಲಿ ಜನತೆಯಲ್ಲಿ ವಿಜ್ಞಾನ ಮತ್ತು ಸಂಶೋಧನೆಯತ್ತ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಈ ದಿನವನ್ನು ಪ್ರತೀ ವರ್ಷ “ರಾಷ್ಟ್ರೀಯ ವಿಜ್ಞಾನ ದಿನ’ ಎಂದು ಆಚರಿಸಲಾಗುತ್ತದೆ. ಅಂದಿನ ದಿನಗಳಲ್ಲಿ ಸಾಮಾನ್ಯವಾದ ಉಪಕರಣಗಳನ್ನು ಬಳಸಿ ಕೊಂಡು ಸತತ ಪರಿಶ್ರಮ, ತಾಳ್ಮೆಯಿಂದ ಸಂಶೋಧನೆ ನಡೆಸಿ ಇಡೀ ಪ್ರಪಂಚವೇ ಅಚ್ಚರಿ ಪಡುವಂತೆ ಮಹತ್ತರವಾದ ಸಂಶೋಧನೆ ನಡೆಸಿ ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ಮೊದಲ ನೊಬೆಲ್‌ ಪ್ರಶಸ್ತಿಯನ್ನು ತಂದುಕೊಟ್ಟವರು ಸರ್‌| ಸಿ.ವಿ. ರಾಮನ್‌ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ಭಾರತ ರತ್ನ’ ವನ್ನು ಪಡೆದ ಮೊದಲ ವಿಜ್ಞಾನಿ ಕೂಡ.

Advertisement

“ವಿಜ್ಞಾನವಿಲ್ಲದೆ ಮಾನವನಿಲ್ಲ. ಮಾನವನಿಲ್ಲದೆ ವಿಜ್ಞಾನವಿಲ್ಲ’ ಎಂಬುದು ಕೇವಲ ಮಾತಲ್ಲ. ಇಂದು ನಾವು ವಿಜ್ಞಾನ ಯುಗದಲ್ಲಿದ್ದೇವೆ. ಅನೇಕ ವೈಜ್ಞಾನಿಕ ಸಂಶೋಧನೆಗಳಿಂದಾಗಿ ನಮ್ಮ ಜೀವನದಲ್ಲಿಂದು ಕ್ರಾಂತಿಕಾರಿ ಬದಲಾವಣೆಗಳಾಗಿವೆ. ವಿಜ್ಞಾನದ ಬೆಳವಣಿಗೆಯಿಂದಾಗಿ ಇಡೀ ವಿಶ್ವವೇ ಒಂದು ಹಳ್ಳಿಯಂತಾಗಿದೆ. ನಿರಂತರ ವೈಜ್ಞಾನಿಕ ಸಂಶೋಧನೆಗಳ ಫ‌ಲವನ್ನು ಜನತೆ ಈಗ ಉಣ್ಣುವಂತಾಗಿದೆ. ಪ್ರತಿಯೊಂದೂ ಕ್ಷೇತ್ರದಲ್ಲಿಯೂ ಇದೀಗ ವಿಜ್ಞಾನ ಹಾಸುಹೊಕ್ಕಾಗಿದೆ. ಪ್ರತಿನಿತ್ಯ ಎಂಬಂತೆ ನಡೆಯುತ್ತಿರುವ ಆವಿಷ್ಕಾರ ಗಳಿಂದಾಗಿ ಜಗತ್ತು ಅಭಿವೃದ್ಧಿಯ ನಾಗಾಲೋಟದಲ್ಲಿದೆ.

ಆಧುನಿಕ ಯಂತ್ರೋಪಕರಣಗಳು ಮಾನವನ ದೈನಂದಿನ ಬದುಕನ್ನು ಸುಲಭಸಾಧ್ಯವಾಗಿಸಿದೆ. ವಿಜ್ಞಾನವು ಮಾನವನಿಗೆ ವರವೇ ಹೊರತು ಶಾಪವಲ್ಲ. ಶಾಂತಿಯುತ ಉದ್ದೇಶಕ್ಕಾಗಿಯೇ ಅಣುಬಾಂಬ್‌ ಅನ್ನು ಸಂಶೋಧಿಸಲಾಗಿತ್ತೇ ಹೊರತು ಸ್ವಾರ್ಥ, ದ್ವೇಷ ಸಾಧನೆಗಾಗಿ ಅಲ್ಲ. ವೈಜ್ಞಾನಿಕ ಚಿಂತನೆ, ಮನೋಭಾವ ನಮ್ಮದಾಗಬೇಕಿದೆ. ಹಾಗಾದಾಗ ಮಾತ್ರ ವಿಜ್ಞಾನದ ಆವಿ ಷ್ಕಾರಗಳು ಸ್ವಸ್ಥ ಮತ್ತು ಶಾಂತಿಯುತ ಸಮಾಜಕ್ಕೆ ಪೂರಕವಾಗಬಲ್ಲವು.

– ಎನ್‌. ಯಜ್ಞನಾರಾಯಣ ಉಳ್ಳೂರ

Advertisement

Udayavani is now on Telegram. Click here to join our channel and stay updated with the latest news.

Next