Advertisement

ಸಮಾನ ಅಭಿವೃದ್ಧಿಗೆ ವೈಜ್ಞಾನಿಕ ಯೋಜನೆ

01:24 AM Apr 13, 2022 | Team Udayavani |

ಮಣಿಪಾಲ: ರಾಜ್ಯ ದಲ್ಲಿ ಆಗಿರುವ ಅಭಿವೃದ್ಧಿಯ ಅಸಮಾನತೆ ಯನ್ನು ಹೋಗಲಾಡಿಸಲು ಮೊದಲ ಬಾರಿಗೆ ವೈಜ್ಞಾನಿಕ ಯೋಜನೆಗಳನ್ನು ರೂಪಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಸೋಮವಾರ ಉದಯವಾಣಿಯ ಅತಿಥಿ ಸಂಪಾದಕರಾಗಿ ಸೇವೆ ಸಲ್ಲಿಸಿ, ಮಂಗಳವಾರ ತಮ್ಮ ಸಂಪಾದಕೀಯದ ಆಧಾರದಲ್ಲಿ “ಉದಯವಾಣಿ’ಯೊಂದಿಗೆ ಕೆಲಕಾಲ ವಿವಿಧ ವಿಷಯಗಳ ಬಗ್ಗೆ ವಿಶ್ಲೇಷಣೆ ಮಾಡಿದರು.
ಕರಾವಳಿ ಸಹಿತವಾಗಿ ರಾಜ್ಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಲ್ಲಿ ಕರ್ನಾಟಕ ವನ್ನು ಸದೃಢವಾಗಿ ಕಟ್ಟಲು ಬೇಕಾದ ದಿಕ್ಸೂಚಿ ಸಂಪಾದಕೀಯದಲ್ಲಿ ಇದೆ. ಈ ಮೂಲಕ ರಾಜ್ಯದಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ತರಲಿದ್ದೇವೆ. ಇಡೀ ರಾಜ್ಯದಲ್ಲಿ ಆಗಿರುವ ಅಭಿವೃದ್ಧಿಯ ಅಸಮಾನತೆಯನ್ನು ನಿವಾರಿಸಲು ವೈಜ್ಞಾ ನಿಕ ರೀತಿಯಲ್ಲಿ ಕೆಲವೊಂದು ಯೋಜನೆ  ಗಳನ್ನು ರೂಪಿಸಿದ್ದೇವೆ. ಎಲ್ಲ ಕ್ಷೇತ್ರಕ್ಕೂ ಸಮಾನ ಆದ್ಯತೆ ಸಿಗಲಿದೆ ಎಂದರು.

ನಾಡಿನ ಸಮಗ್ರ ಅಭಿವೃದ್ಧಿಯ ಜತೆಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಹಿತ ಎಲ್ಲ ರಂಗದಲ್ಲೂ ರಾಜ್ಯವನ್ನು ಹೇಗೆ ಮುನ್ನಡೆಸುತ್ತೇವೆ ಎನ್ನುವುದರ ಸ್ಥೂಲವಾದ ವಿವರವನ್ನು ಸಂಪಾದಕೀಯ ಒಳಗೊಂಡಿದೆ. ಇದರ ಆಧಾರದ ಮೇಲೆಯೇ ಮುಂದೆ ನಮ್ಮ ಬಜೆಟ್‌ ಕಾರ್ಯ ಕ್ರಮಗಳನ್ನು ಅನುಷ್ಠಾನ ಮಾಡಲಿ ದ್ದೇವೆ ಮತ್ತು ಅಭಿವೃದ್ಧಿಯ ವಿಷಯವಾಗಿ ಬಹಳ ದೊಡ್ಡ ಪರಿವರ್ತನೆ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.

ರಾಜ್ಯದ ಒಟ್ಟಾರೆ ಅಭಿವೃದ್ಧಿಯ ಸೂಚ್ಯಂಕದ ಆಧಾರವಾಗಿ ವಿವಿಧ ವಲಯಗಳಲ್ಲಿ ಸರಾಸರಿ ಅಭಿವೃದ್ಧಿಯಲ್ಲಿ ಹಿಂದುಳಿದ ತಾಲೂಕುಗಳನ್ನು ಗುರುತಿ ಸುವ ಕಾರ್ಯ ಆಗಿದೆ. ತಾಲೂಕುಗಳಲ್ಲಿ ವಲಯವಾರು ಆಕಾಂಕ್ಷಿಗಳ ಪಟ್ಟಿ ಸಿದ್ಧವಾಗಿದೆ. ಇದರಲ್ಲಿ 104 ತಾಲೂಕು ಆರೋಗ್ಯ ಕ್ಷೇತ್ರದಲ್ಲಿ ರಾಜ್ಯದ ಸರಾಸರಿ ಅಭಿವೃದ್ಧಿಗಿಂತ ಕಡಿಮೆ ಯಿದೆ. 100 ತಾಲೂಕುಗಳು ಶೈಕ್ಷಣಿಕ ವಾಗಿ ರಾಜ್ಯ ಸರಾಸರಿ ಅಭಿವೃದ್ಧಿಗಿಂತ ಕಡಿಮೆಯಿದೆ. ಈ ಎಲ್ಲ ತಾಲೂಕುಗಳನ್ನು ರಾಜ್ಯದ ಅಭಿವೃದ್ಧಿಯ ಸರಾಸರಿಗೆ ತೆಗೆದು ಕೊಂಡು ಹೋಗುವ ಕಾರ್ಯ ಆರಂಭಿಸಿದ್ದೇವೆ. ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಪೌಷ್ಟಿಕತೆ ನಿವಾರಣೆಯ ನಿಟ್ಟಿನಲ್ಲೂ ಕ್ರಮ ಕೈಗೊಳ್ಳುತ್ತಿದ್ದೇವೆ. ಒಟ್ಟಾರೆಯಾಗಿ 3 ಸಾವಿರ ಕೋ.ರೂ.ಗಳನ್ನು ವಲಯ ವಾರು ವಿವಿಧ ತಾಲೂಕುಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದೇವೆ ಎಂದರು.

ಇನ್ನಷ್ಟು ಕಾರ್ಯಸಾಧನೆಗೆ ಉದಯವಾಣಿ ಪ್ರೇರಣೆ
ಸೋಮವಾರ ಉದಯವಾಣಿಯಲ್ಲಿ ಅತಿಥಿ ಸಂಪಾದಕನಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಒಂದು ರೀತಿಯಲ್ಲಿ ಅದ್ಭುತ ಅನುಭವ ನೀಡಿದೆ. ನನ್ನ ಕಲ್ಪನೆಯಲ್ಲಿ ರಾಜ್ಯವನ್ನು ಹೇಗೆ ಅಭಿವೃದ್ಧಿ ಮಾಡಲಿದ್ದೇನೆ ಮತ್ತು ಅದಕ್ಕಾಗಿ ರೂಪಿಸಿರುವ ಯೋಜನೆಯ ಸಮಗ್ರತೆಯನ್ನು ಜನರ ಮುಂದಿಡಲು ಬೇಕಾದ ವಾತಾವರಣ ಉದಯವಾಣಿಯಿಂದ ನಿರ್ಮಾಣವಾಗಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಾಜ್ಯದ ಜತೆಗೆ ಅದರಲ್ಲೂ ವಿಶೇಷವಾಗಿ ರೈತರಿಗೆ ಇನ್ನಷ್ಟು ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯ ಮಾಡಲು ಉದಯವಾಣಿ ರೂಪಿಸಿದ ವೇದಿಕೆ ಪ್ರೇರಣೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಹಂಚಿಕೊಂಡರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next