Advertisement
ಈ ಮೂಲಕ ಭಕ್ತರಿಗೆ ಉತ್ತಮ ಗುಣಮಟ್ಟ ಖಾತರಿಪಡಿಸಿದ ಪ್ರಸಾದವನ್ನು ನೀಡುವ ಉದ್ದೇಶವನ್ನು ಸರಕಾರ ಹೊಂದಿದೆ. ಪ್ರಾರಂಭಿಕ ಹಂತದಲ್ಲಿ ಕರಾವಳಿಯ ನಾಲ್ಕು ದೇವಸ್ಥಾನಗಳನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವ ನಿರೀಕ್ಷೆ ಹೊಂದಲಾಗಿದೆ. ಪ್ರಸಾದಗಳಲ್ಲಿ ಯಾವ ಉತ್ಪನ್ನಗಳನ್ನು ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡಬೇಕು. ಅದರ ಶೇಖರಣೆ ಹೇಗೆ? ಯಾವ ವಸ್ತುಗಳನ್ನು ಬಳಸಬಾರದು ಎಂಬ ಅಂಶಗಳನ್ನು ಇದರ ಸದಸ್ಯರು ಗಮನಿಸಲಿದ್ದಾರೆ.
Related Articles
ಪ್ರಸಾದ ಸಿದ್ಧಪಡಿಸುವ ಸ್ಥಳಗಳಲ್ಲಿ ಇನ್ನು ಮುಂದೆ ಶುಚಿತ್ವಕ್ಕೆ ಬಹಳಷ್ಟು ಮಹತ್ವ ನೀಡಲಾಗುತ್ತದೆ. ಆಹಾರ ಸುರಕ್ಷೆ ಮತ್ತು ಗುಣಮಟ್ಟ ಕಾಯ್ದೆಯ ನಿಯಮಾವಳಿಗಳಂತೆ ಎಲ್ಲ ಪ್ರಸಾದಗಳನ್ನೂ ತಯಾರಿಸಲಾಗುತ್ತದೆ. ಪ್ರಸಾದ ಸೇವಿಸಿದ ಭಕ್ತರ ಆರೋಗ್ಯಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶ.
Advertisement
ಆಯ್ಕೆಯಾಗಿರುವ ದೇವಸ್ಥಾನಗಳುಉಡುಪಿ ಜಿಲ್ಲೆಯ ಕೊಲ್ಲೂರು, ದ.ಕ. ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ, ಉತ್ತರ ಕನ್ನಡ ಶಿರಸಿಯ ಮಾರಿಕಾಂಬಾ ದೇವಸ್ಥಾನಗಳು ಆಯ್ಕೆಯಾಗಿದ್ದು, ಅಗತ್ಯವಿರುವ ಸಿಬಂದಿಗೆ ತರಬೇತಿ ನೀಡಲಾಗಿದೆ. ಕೇಂದ್ರ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರವು ಭೋಗ್ ಕಾರ್ಯಕ್ರಮದ ಮೂಲಕ ದೇವಸ್ಥಾನಗಳ ಪ್ರಸಾದಗಳನ್ನು ಗುಣಮಟ್ಟ ಪರಿಶೀಲಿಸಿ ನೀಡಲಿದೆ. ಇದಕ್ಕಾಗಿ 4 ಜಿಲ್ಲೆಗಳು ಆಯ್ಕೆಗೊಂಡಿದ್ದು, ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ.
– ಡಾ| ಪ್ರೇಮಾನಂದ, ಜಿಲ್ಲಾ ಆಹಾರ ಸುರಕ್ಷೆ ಅಧಿಕಾರಿ, ಉಡುಪಿ -ಪುನೀತ್ ಸಾಲ್ಯಾನ್