ಬೀದರ: ಪುರಾತನ ಕಾಲದಲ್ಲಿ ವೇದ ಶಾಸ್ತ್ರಗಳು ಮತ್ತು ವಚನ ಸಾಹಿತ್ಯದ ಮೂಲಕ ವೈಜ್ಞಾನಿಕ ಅನುಭಾವಗಳನ್ನು ನೀಡಿದ ಸಂತರು ಮತ್ತು ಶರಣರು ಅಂದಿನ ಕಾಲದ ವಿಜ್ಞಾನಿಗಳಂತಾಗಿದ್ದರು ಎಂದು ವಿಜಯಪುರ ಅಕ್ಕಾಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಭೌತಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ| ಎಂ.ಎಸ್. ಜೋಗದ್ ಅಭಿಪ್ರಾಯಪಟ್ಟರು. ನಗರದ ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವಿಷಯಗಳಲ್ಲಿ ವಿಜ್ಞಾನ ಬಹುಮುಖ್ಯ ಪಾತ್ರವಹಿಸಿದೆ. ವೈಜ್ಞಾನಿಕ ದೃಷ್ಟಿಯಿಂದ ಸಂತರ ವಾಣಿ ಮತ್ತು ಶರಣರ ವಚನಗಳನ್ನು ಅಧ್ಯಯನ ಮಾಡಿದಾಗ, ಅತಂತ್ಯ ಸರಳವಾಗಿ ಅರ್ಥ ಮಾಡಿಕೊಳ್ಳುವ ಕ್ರಮ ಬದ್ಧತೆಯ ವೈಜ್ಞಾನಿಕ ಸ್ವರೂಪವನ್ನೇ ಕಾಣಬಹುದಾಗಿದೆ. ಜನತೆಗಾಗಿ ವಿಜ್ಞಾನ, ವಿಜ್ಞಾನಕ್ಕಾಗಿ ಜನತೆ ಎಂಬ ವಾಣಿಯನ್ನು ಘೋಷಿಸುವುದರ ಮೂಲಕ ಜನಸಾಮಾನ್ಯರಿಗೆ ಸ್ವತ್ಛತೆಯ ವಿಜ್ಞಾನದ ಅರಿವು ಮೂಡಿಸುವ ಕಾರ್ಯ ಮಹತ್ವದಾಗಿದೆ ಎಂದು ಹೇಳಿದರು.
ಡಾ| ಬಿ.ಎಸ್. ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನದ ಮೂಲ ಸೂಗಳನ್ನು ತಿಳಿದುಕೊಳ್ಳಬೇಕು. ವಿಜ್ಞಾನ ತಿಳಿದುಕೊಂಡು ಜೀವನದಲ್ಲಿ ಹೇಗೆಲ್ಲಾ ಅಳವಡಿಸಿಕೊಳ್ಳಬಹುದು ಎಂಬುದನ್ನು ಅರಿಯಬೇಕು. ಯಾವುದೇ ಮೂಢ ನಂಬಿಕೆಗಳಿಗೆ ವಿದ್ಯಾರ್ಥಿಗಳು ಬಲಿಯಾಗಬಾರದು ಎಂದು ಹೇಳಿದರು.
ಪ್ರಭಾರಿ ಪ್ರಾಂಶುಪಾಲ ಡಾ| ಎಸ್.ಬಿ. ಗಾಮಾ ಮಾತನಾಡಿ, ಸಂಸ್ಕಾರ ವಿಜ್ಞಾನಕ್ಕಿತ ಶ್ರೇಷ್ಠವಾದದ್ದು. ಪ್ರತಿಯೊಂದು ವಿಷಯವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅಳತೆ ಮಾಡಿ ನೋಡಬೇಕು ಎಂದರು.
ಇದೇ ವೇಳೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಕರ್ನಾಟಕ ವಿಜ್ಞಾನ ಪರಿಷತ್ ನಿರ್ದೇಶಕ ದಾನಿ ಬಾಬುರಾವ್, ಪ್ರೊ| ಅನೀಲಕುಮಾರ ಅಣದೂರೆ, ಡಾ| ಹಣಮಂತಪ್ಪ ಸೇಡಂಕರ್, ಡಾ| ಮಲ್ಲಿಕಾರ್ಜುನ ಕೋಟೆ, ಪ್ರೊ|ವಿಜಯಕುಮಾರ ಪಂಚಾಳ, ಪ್ರೊ| ರೇಣುಕಾ ಕೆ., ಪ್ರೊ|ವೈಜಿನಾಥ ಚೆನಪೂರೆ, ಪ್ರೊ|ವಾಮನರಾವ್ ಕುಲಕರ್ಣಿ, ಸುಮನ್ ಕೌರ್, ಪ್ರೊ|ರೇಣುಕಾ ಕುಮ್ಮನೂರ, ಪ್ರೊ|ಉಮಾಕಾಂತ ದೇಶಮುಖ, ಪ್ರೊ|ಶ್ರೀಕಾಂತರಾವ್ ಬಿರಾದಾರ, ಡಾ|ಮಲ್ಲಿಕಾಜುನ ಕೋಟೆ ಇದ್ದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಬೀದರ ಜಿಲ್ಲಾ ವಿಜ್ಞಾನ ಸಮಿತಿ, ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ವದೇಶಿ ವಿಜ್ಞಾನ ಆಂದೋಲನ ಸಂಯುಕ್ತಾಶ್ರಯಲದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.