Advertisement

ವಿಜ್ಞಾನಕ್ಕೆ ಇತಿಮಿತಿಗಳೇ ಇಲ್ಲ: ಡಾ|ರಾವ್‌

10:05 AM Sep 07, 2019 | Suhan S |

ಧಾರವಾಡ: ಸದಾ ಕಾಲ ಹರಿಯುತ್ತಲೇ ಇರುವ ನೀರಂತೆ ವಿಜ್ಞಾನಕ್ಕೆ ಇತಿಮಿತಿಗಳು ಇಲ್ಲ ಎಂದು ಭಾರತರತ್ನ ಪುರಸ್ಕೃತ ಪ್ರೊ| ಸಿ.ಎನ್‌.ಆರ್‌. ರಾವ್‌ ಹೇಳಿದರು.

Advertisement

ನಗರದ ಸೃಜನಾ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ವಿಜ್ಞಾನ ಕಾಲೇಜು ಮತ್ತು ಬೆಂಗಳೂರಿನ ನ್ಯಾನೊ ಮತ್ತು ಸಾಫ್ಟ್‌ ಮ್ಯಾಟರ್‌ ಸೈನ್ಸ್‌ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಆವರ್ತ ಕೋಷ್ಟಕದ 150ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ವಿಜ್ಞಾನ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳು ಆಗುತ್ತಲೇ ಇರುತ್ತವೆ. ಆ ಕಾರಣದಿಂದಲೇ ಅದು ಸದಾ ಕಾಲ ಹರಿಯುವ ನೀರಿನಂತೆ. ಹೀಗಾಗಿ ವಿಜ್ಞಾನಿಗಳು ನಿರಂತರವಾಗಿ ಸಂಶೋಧನೆಗಳಲ್ಲಿ ತೊಡಗಬೇಕು ಎಂದರು.

ನನಗೆ ವಿಜ್ಞಾನ ಕ್ಷೇತ್ರದಲ್ಲಿ ಪ್ರೇರಣೆ ಅಂದರೆ ಮೈಕಲ್ ಪ್ಯಾರಡೆ. ಅವರು ವರ್ಷಪೂರ್ತಿ ಸಂಶೋಧನಾ ಕೇಂದ್ರದಲ್ಲಿ ನೂತನ ಸಂಶೋಧನೆಗೆ ತಮ್ಮ ಸಮಯ ಮೀಸಲಿಟ್ಟ ಪರಿಣಾಮ ವಿಜ್ಞಾನ ಕ್ಷೇತ್ರಕ್ಕೆ ಹಲವಾರು ಕೊಡುಗೆ ನೀಡಲು ಸಾಧ್ಯವಾಯಿತು ಎಂದರು. ಹಲವಾರು ವಿಜ್ಞಾನಿಗಳ ಸಂಶೋಧನೆ, ಜೀವಮಾನ ಸಾಧನೆಗಳು ಮತ್ತು ಸಾಹಸಗಳ ಕುರಿತು ವಿವರಿಸಿದರು.

ಶಿಕ್ಷಣ ತಜ್ಞೆ ಡಾ| ಇಂದುಮತಿ ರಾವ್‌ ಮಾತನಾಡಿದರು. ವಿಜ್ಞಾನಿ ಡಾ| ಗಿರಿಧರ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ನಂತರದಲ್ಲಿ ನ್ಯಾನೋ ಮತ್ತು ಸಾಫ್ಟ್‌ ಮ್ಯಾಟರ್‌ ವಿಜ್ಞಾನ ಸಂಸ್ಥೆಯ ಎಸ್‌. ಕೃಷ್ಣಪ್ರಸಾದ, ಪ್ರೊ| ಟಿ. ಗೋವಿಂದರಾಜು ಉಪನ್ಯಾಸ ನೀಡಿದರು. ಪ್ರೊ| ವಿದ್ಯಾರಾಜವರಿಂದ ಪ್ರಯೋಗಗಳ ಪ್ರದರ್ಶನ ಮತ್ತು ವಿದ್ಯಾರ್ಥಿಗಳಿಗಾಗಿ ಕ್ವಿಜ್‌ ಕಾರ್ಯಕ್ರಮ ಜರುಗಿದವು.

Advertisement

ಪ್ರೊ| ಎಸ್‌.ಎಂ. ಶಿವಪ್ರಸಾದ, ಡಾ|ಅರುಂಧತಿ ಕುಲಕರ್ಣಿ, ಪ್ರೊ| ಜಿ.ಯು. ಕುಲಕರ್ಣಿ, ಸಂಜಯ ರಾವ್‌, ಡಾ| ಸಿ.ಎಫ್‌. ಮೂಲಿಮನಿ ಸೇರಿದಂತೆ ವಿವಿಧ ಕಾಲೇಜಿನ 600ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಆವರ್ತ ಕೋಷ್ಟಕ(ಪಿರಿಯಾಡಿಕ್‌ ಟೇಬಲ್)ದ ಸಂಶೋಧಕ ಮಾಂಡಲಿವಸ್‌ ಅವರಂತೆ ಪೋಷಾಕು ಧರಿಸಿದ್ದ ವಿದ್ಯಾರ್ಥಿ ಗಮನ ಸೆಳೆದನು. ಇದಲ್ಲದೇ ಆವರ್ತ ಕೋಷ್ಟಕದ ಮಾದರಿಯ ಕೇಕ್‌ ಕತ್ತರಿಸಿ ಸಂಭ್ರಮಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next