Advertisement
ಕೊರ್ಗಿ ಗ್ರಾ.ಪಂ. ವ್ಯಾಪ್ತಿಯ ಈ ಸರಕಾರಿ ಶಾಲೆಯಲ್ಲಿ ಪ್ರಸ್ತುತ 241 ವಿದ್ಯಾರ್ಥಿಗಳಿದ್ದಾರೆ. 2021-22ನೇ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ 1ನೇ ತರಗತಿಗೆ ಸುಮಾರು 30 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 2ರಿಂದ 7ನೇ ತರಗತಿಯಲ್ಲಿ ಸುಮಾರು 211 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಕಲಿಕೆಯನ್ನು ಪ್ರಯೋಗಾತ್ಮಕ ಹಾಗೂ ಪರಿಣಾಮಕಾರಿಯಾಗಿ ಬೋಧಿಸುವ ಮೂಲಕ ವಿಷಯ ವಾರು ತರಗತಿ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ.
Related Articles
Advertisement
ಸುಮಾರು 1.35 ಎಕರೆ ವಿಸ್ತೀರ್ಣದಲ್ಲಿರುವ ಈ ಶಿಕ್ಷಣ ಸಂಸ್ಥೆಗೆ ಯಡಾಡಿ ಮತ್ಯಾಡಿ, ಕೊಳ್ಕೆಬೈಲು, ಯಡ್ತಾಡಿ, ಬಿಲ್ಲಾಡಿ, ದೇಲಟ್ಟು, ಅಸೋಡು, ಜಪ್ತಿ ಸೇರಿದಂತೆ ಗ್ರಾಮೀಣ ಭಾಗಗಳಿಂದ ವಿದ್ಯಾರ್ಥಿಗಳು ಶಾಲೆಗೆ ಬರುತ್ತಾರೆ. ಆದರೆ ಗ್ರಾಮಕ್ಕೆ ಸಮರ್ಪಕ ಬಸ್ ಸಂಪರ್ಕ ವ್ಯವಸ್ಥೆ ಇಲ್ಲದೆ ಇರುವ ಕಾರಣ
ಹೆತ್ತವರೇ ಮಕ್ಕಳನ್ನು ಶಾಲೆಗೆ ಕರೆ ತರಬೇಕಾಗಿದೆ. 2 ಶಾಲಾ ವಾಹನಗಳು ದೊರೆತರೆ ಶಾಲೆಗೆ ವಿದ್ಯಾರ್ಥಿಗಳಿಗೂ ಅನುಕೂಲವಾದೀತು. ಯೋಗ ಶಿಕ್ಷಣಕ್ಕೆ ಅನುಕೂಲಕರವಾಗುವಂತೆ ಒಳಾಂಗಣ ಸಭಾಂಗಣದ ಅಗತ್ಯವೂ ಇದೆ.
ಹೊಸ ಕಟ್ಟಡದ ಅಗತ್ಯ:
ಶಾಲೆಯಲ್ಲಿ ಮೂಲ ಅಗತ್ಯಗಳ ಈಡೇರಿಕೆಗೆ ಪ್ರಯತ್ನ ನಡೆಸಲಾಗುತ್ತಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತರಗತಿ ಕೊಠಡಿಯ ಸಮಸ್ಯೆಗಳಿದೆ. ಅಲ್ಲದೇ ಈಗಾಗಲೇ ಶಾಲಾ ಪರಿಸರದಲ್ಲಿ ಶಿಥಿಲಗೊಂಡ ಕಟ್ಟಡಗಳಿದ್ದು ಅದನ್ನು ತೆರವುಗೊಳಿಸಿ, ನೂತನ ಕಟ್ಟಡ ನಿರ್ಮಾಣವಾಗಬೇಕಾದ ಅನಿವಾರ್ಯತೆ ಕೂಡಾ ಇದೆ.–ಶೇಖರ್ ಕುಮಾರ್, ಮುಖ್ಯ ಶಿಕ್ಷಕರು
ಸುವ್ಯಸ್ಥಿತ ಮೈದಾನ ಅಗತ್ಯ:
ಕನ್ನಡ ಶಾಲೆಯಾದರೂ ನ್ಪೋಕನ್ ಇಂಗ್ಲಿಷ್ ತರಗತಿಯ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯ ಬಗ್ಗೆಯೂ ಅರಿವು ಮೂಡಿಸುತ್ತಿದೆ. ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಗುರುಕುಲ ಮಾದರಿ ಕುಟೀರ ನಿರ್ಮಿಸಿ ಪಾಠೇತರ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸುವ ಯೋಜನೆ ಇದೆ. ಸುವ್ಯವಸ್ಥಿತ ಆಟದ ಮೈದಾನ ಹಾಗೂ ಸುತ್ತಲೂ ತಡೆಗೋಡೆ ನಿರ್ಮಾಣವಾಗಬೇಕಾಗಿದೆ.– ಕೃಷ್ಣ ಕೆದ್ಲಾಯ, ಎಸ್‌ಡಿಎಂಸಿ.ಅಧ್ಯಕ್ಷರು,
-ಟಿ. ಲೋಕೇಶ್ ಆಚಾರ್ಯ ತೆಕ್ಕಟ್ಟೆ