Advertisement
ಪಾಠ, ಸಹಪಾಠಿಗಳ ಭೇಟಿ, ಪಠ್ಯ, ಪಠ್ಯೇತರ ಚಟುವಟಿಕೆಗಳ ಕುರಿತು ಚರ್ಚೆ, ವಿಷಯ ವಿನಿಮಯ, ಶಾಲೆಯಲ್ಲೇ ಗುರುಗಳಿಗೆ ಪ್ರಶ್ನೆ ಕೇಳಿ ಸಂಶಯ ನಿವಾರಿಸಿಕೊಳ್ಳುವ ಮೂಲಕ ಪೂರ್ಣ ಪ್ರಮಾಣದಲ್ಲಿ ಜ್ಞಾನಾರ್ಜನೆಗೆ ಅನುಕೂಲ ವಾಗುವ ಭೌತಿಕ ತರತಿಗಳು ಆರಂಭವಾಗುತ್ತಿವೆ.
Related Articles
Advertisement
ಆರೋಗ್ಯದ ಜತೆಗೆ ಕಲಿಕೆಯೂ ಅತೀ ಮುಖ್ಯ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಹೆತ್ತವರು, ಪೋಷಕರು, ಬೋಧಕರ ಆರೋಗ್ಯ ಗಮನದಲ್ಲಿ ಇರಿಸಿಕೊಂಡು ತಜ್ಞರ ಸಲಹೆಯಂತೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ಗುಂಪುಗಳ ರಚನೆಯನ್ನು ಮಾಡಲಾಗಿದೆ. ಆನ್‌ಲೈನ್, ಪರ್ಯಾಯ ಮಾರ್ಗದಲ್ಲಿ ತರಗತಿಗಳು ಮುಂದುವರಿಯಲಿವೆ.
ಕಲಿಕೆಗೆ ಬೇಕಾದ ಎಲ್ಲ ರೀತಿಯ ಸುರಕ್ಷ ಕ್ರಮಗಳನ್ನು ಕೈಗೊಂಡಿದ್ದೇವೆ. ಬಹುತೇಕ ಎಲ್ಲ ಶಿಕ್ಷಕರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಅವರು ಮಾಸ್ಕ್ ಸರಿಯಾಗಿ ಧರಿಸಿದ್ದಾರೆಯೇ ಎಂಬುದನ್ನು ಗಮನಿಸುವ ಜತೆಗೆ ಮನೆಯಿಂದಲೇ ಬಿಸಿನೀರು ಹಾಗೂ ಲಘು ಉಪಾಹಾರ ನೀಡುವುದು ಉತ್ತಮ.
ಮಕ್ಕಳು ಆತಂಕಕ್ಕೆ ಒಳಗಾಗದೆ ಸೋಮವಾರದಿಂದ ಶಾಲೆಗಳಿಗೆ ಹಾಜರಾಗಿ. ಸೋಮವಾರ ಬೆಳಗ್ಗೆ ಶಿಕ್ಷಣ ಸಚಿವರೊಂದಿಗೆ ಕೆಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದೇನೆ. ಮಕ್ಕಳು ಶಾಲೆಗೆ ಬರಬೇಕು, ಕಲಿಕೆ ನಡೆಯಬೇಕು, ಜತೆಗೆ ಕೋವಿಡ್ ಸುರಕ್ಷೆಯೂ ಇರಬೇಕು. -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ