Advertisement
ಕೋವಿಡ್ ಮಹಾಮಾರಿಗೆ ಭಯಭೀತರಾಗಿ ಮನೆ ಹಿಡಿದು ಕುಳಿತುಕೊಂಡಿದ್ದ ಮಕ್ಕಳು ಶಾಲೆಗಳಲ್ಲಿ ಹಾಜರಾದರು. ಶುಕ್ರವಾರ ಹೊಸ ವರ್ಷದಿಂದ ಆರಂಭಗೊಂಡ ಶಾಲೆಗಳಲ್ಲಿ ಆತಂಕದಿಂದಲೇ ಶಾಲೆಗಳತ್ತ ಹೆಜ್ಜೆ ಹಾಕಿದ್ದರೂ ಮಕ್ಕಳಲ್ಲಿ ಉತ್ಸಾಹಮಾತ್ರ ಕಡಿಮೆ ಆಗಿರಲಿಲ್ಲ. 10 ತಿಂಗಳ ಒಂದಾದೆವು ಎಂಬ ಸಾರ್ಥಕ ಭಾವ ಎಲ್ಲರಲ್ಲೂ ಕಂಡು ಬಂತು. ಕೋವಿಡ್ ಹಾವಳಿ ಇಳಿಮುಖವಾಗುತ್ತಿದ್ದಂತೆ ಸರ್ಕಾರ ಶಾಲೆ ಆರಂಭಕ್ಕೆ ಹಸಿರು ನಿಶಾನೆ ತೋರಿದ್ದು, ಹೀಗಾಗಿ ಕೋವಿಡ್ ನಿಯಮವಾಳಿಗಳಂತೆ ಶಾಲೆಗಳಲ್ಲೂ ಆರಂಭಿಸಲಾಗಿತ್ತು. ಬೆಳಗಾವಿ ಹಾಗೂಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಬಂದಿದ್ದರು.
Related Articles
Advertisement
ಸಿಹಿ ತಿನ್ನಿಸಿ ಮಕ್ಕಳಿಗೆ ಸ್ವಾಗತ :
ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಸಿಹಿ ಪದಾರ್ಥ ನೀಡಿ ಸ್ವಾಗತಿಸಲಾಯಿತು. ಮಕ್ಕಳು ಒಳ ಬರುತ್ತಿದ್ದಂತೆ ಶಿಕ್ಷಕರು ಸಿಹಿ ತಿನಿಸು ನೀಡಿದರು. ಶಾಲೆಗಳಲ್ಲಿ ಬಲೂನ್‌ಗಳನ್ನು ಕಟ್ಟಿ, ತಳೀರು ತೋರಣಗಳಿಂದ ಸಿಂಗರಿಸಲಾಗಿತ್ತು. ಮೊದಲ ದಿನ ಪಾಠಕ್ಕಿಂತ ಮಕ್ಕಳ ಸಂತಸ-ಉತ್ಸಾಹದಲ್ಲಿಯೇ ದಿನ ಕಳೆಯಿತು. ನಿರೀಕ್ಷೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದಿದ್ದರು. ಸಮವಸ್ತ್ರ ಧರಿಸಿ ಶಾಲೆಗೆ ಆಗಮಿಸಿದ್ದರು.
ವಿದ್ಯಾರ್ಥಿಗಳು ಮೊದಲ ದಿನ ಬಹಳ ಉತ್ಸಾಹದಿಂದ ಶಾಲೆಗೆ ಬಂದಿದ್ದರು. 10 ತಿಂಗಳ ನಂತರ ಶಾಲೆಗೆ ಬಂದಾಗ ಅವರನ್ನು ನೋಡುವ ಸೌಭಾಗ್ಯ ನಮ್ಮೆಲ್ಲರಲ್ಲಿಯೂ ಇತ್ತು. ಕೋವಿಡ್ ಎಂಬ ಮಹಾಮಾರಿಯ ಆತಂಕವಿಲ್ಲದೇ, ಭಯಭೀತರಾಗದೇ ಭಾಗವಹಿಸಿದ್ದರು. ಸಿಹಿ ತಿನಿಸು ನೀಡಿ ಮಕ್ಕಳನ್ನು ಸ್ವಾಗತಿಸಿಕೊಂಡಿದ್ದು ವಿಶೇಷವಾಗಿತ್ತು. –ಪ್ರವೀಣಕುಮಾರ ಅಂಗಡಿ, ಶಿಕ್ಷಕರು, ಪ್ರೌಢಶಾಲೆ ಮಾಸ್ತಮರ್ಡಿ.
–ಭೈರೋಬಾ ಕಾಂಬಳೆ