ಕಾರವಾರ: ಉತ್ತರ ಕನ್ನಡದಲ್ಲಿ ಶಾಲೆಗಳು ವರ್ಷದ ಆರಂಭದ ದಿನವೇ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮುಖದಲ್ಲಿ ಸಂತೋಷ ಅರಳಿದ್ದು ಕಂಡು ಬಂತು.
ಕಾರವಾರದಲ್ಲಿ 173 ವರ್ಷಗಳ ಇತಿಹಾಸವಿರುವ ಸರ್ಕಾರಿ ಪ್ರೌಢಶಾಲೆಗೆ ಸಿಇಒ ಪ್ರಿಯಂಕಾ ಡಿಡಿಪಿಐ ಜೊತೆ ಭೇಟಿ ನೀಡಿ ಸ್ಯಾನಿಟೈಜರ್ ಹಾಗೂ ನೀರಿನ ವ್ಯವಸ್ಥೆ, ಮಾಸ್ಕ್ ಹಾಗೂ ವಿದ್ಯಾರ್ಥಿಗಳ ಕೋಣೆಯ ವ್ಯವಸ್ಥೆ ಪರಿಶೀಲಿಸಿದರು.
ಎಸ್‌ಎಸ್‌ಎಲ್‌ಸಿ ಓದು 36 ಮಕ್ಕಳನ್ನು 12 ವಿದ್ಯಾರ್ಥಿಗಳಿಗೆ ಒಂದು ಕೊಠಡಿ ಮಾದರಿಯಲ್ಲಿವಿಂಗಡಿಸಿದ್ದನ್ನು ವೀಕ್ಷಿಸಿದರು. ಅಲ್ಲದೇ ಒಂದುಬೆಂಚ್‌ಗೆ ಓರ್ವ ವಿದ್ಯಾರ್ಥಿಗನ್ನು ಕುಳ್ಳಿರಿಸಿ ಕೋವಿಡ್‌ನಿಯಮಗಳನ್ನು ಪಾಲಿಸಲಾಗಿತ್ತು. ನಂತರ ಸಿಇಅವರು ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಸಂಜೆ ವೇಳೆಗೆ ಡಿಡಿಪಿಐ ಹರೀಶ್ ಗಾಂವ್ಕರ್ ವಿದ್ಯಾರ್ಥಿಗಳ ಹಾಜರಾತಿ ಬಗ್ಗೆ ಮಾಹಿತಿ ನೀಡಿದರು.
ಕಾರವಾರ ಜಿಲ್ಲೆಯಲ್ಲಿ 186 ಪ್ರೌಢಶಾಲೆಗಳಿದ್ದು 9482ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಕಲಿಯುತ್ತಿದ್ದಾರೆ. ಈ ಪೈಕಿ ಶೇ.70 ರಷ್ಟು ವಿದ್ಯಾರ್ಥಿಗಳು ಮೊದಲ ದಿನವೇ ಶಾಲೆಗೆ ಹಾಜರಾಗಿದ್ದರು. 6624 ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದರು. ಹಿರಿಯ ಪ್ರಾಥಮಿಕ ಶಾಲೆಗಳಸಂಖ್ಯೆ 785 ಇದ್ದು, ಇಲ್ಲಿ 31476 ವಿದ್ಯಾರ್ಥಿಗಳ ಪೈಕಿ12960 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದರು. 6ರಿಂದ 9 ನೇ ತರಗತಿ ವಿದ್ಯಾರ್ಥಿಗಳ ಸಂಖ್ಯೆ ಆಧರಿಸದಿನ ಬಿಟ್ಟು ದಿನ ಶಾಲೆಗೆ ಬರುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಹಾಗಾಗಿ ಇಲ್ಲಿ ಹಾಜರಾತಿ ಶೇ. 41 ಇತ್ತು ಎಂದು ಡಿಡಿಪಿಐ ಮಾಹಿತಿ ನೀಡಿದರು.
ಕಿರಿಯ ಪ್ರಾಥಮಿಕ ಶಾಲೆಗಳನ್ನು ಇನ್ನು ಪ್ರಾರಂಭಿಸಲಾಗಿಲ್ಲ. 1266 ಪ್ರಾಥಮಿಕ ಶಾಲೆಗಳಪೈಕಿ 785 ಹಿರಿಯ ಪ್ರಾಥಮಿಕ ಶಾಲೆಗಳಾಗಿವೆ. 186 ಪ್ರೌಢಶಾಲೆಗಳ ಸಂಖ್ಯೆ ಇದೆ. ಈ ಪೈಕಿ 984 ಸರ್ಕಾರಿ ಶಾಲೆಗಳಾಗಿವೆ.
ಶಾಲೆಗಳನ್ನು ಸ್ವಚ್ಚ ಮಾಡಿ ಸ್ಯಾನಿಟೈಜ್ ಮಾಡಲಾಗಿತ್ತು. ತಳಿರು ತೋರಣಗಳಿಂದ ಶಾಲೆಗಳನ್ನು ಶೃಂಗರಿಸಲಾಗಿತ್ತು. ಶಾಲೆ ಪ್ರಾರಂಭೋತ್ಸವ ಎಂಬಬ್ಯಾನರ್ ಪ್ರತಿ ಶಾಲೆಗಳ ಎದುರು ರಾರಾಜಿಸುತ್ತಿದ್ದವು.ಶಿಕ್ಷಕರು ಹಾಗೂ ಮಕ್ಕಳು ಉತ್ಸಾಹದಿಂದ ಇದ್ದುದುಕಂಡು ಬಂತು. ಎಲ್ಲಾ ಶಾಲೆಗಳಲ್ಲಿ ಮಾಸ್ಕಮತ್ತು ಸ್ಯಾನಿಟೈಜರ್ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿತ್ತು.