Advertisement
ಜಿಲ್ಲಾ ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು, ರಾಜ್ಯ ಸರಕಾರ ಶಾಲೆಗಳನ್ನು ಆರಂಭ ಮಾಡುವ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಮಕ್ಕಳ ದೈಹಿಕ, ಮಾನಸಿಕ ಮತ್ತು ಶೈಕ್ಷಣಿಕ ವಿಷಯದಲ್ಲಿ ಹಿನ್ನಡೆ ಉಂಟಾಗಿದ್ದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಗಾಢವಾದ ನಕಾರಾತ್ಮಕ ಪರಿಣಾಮ ಬೀರಲಿದೆ. ಸರಕಾರಿ ಶಾಲೆಗಳು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಕಲಿಕೆಯ ಜತೆ ಜತೆಗೆ ಮಕ್ಕಳ ದೈಹಿಕ ಬೆಳವ ಣಿಗೆಗೆ ಪೂರಕವಾದ ಬಿಸಿ ಹಾಲು, ಬಿಸಿಯೂಟ, ರೋಗ ನಿರೋಧಕ ವಿಟಮಿನ್ ಮಾತ್ರೆ, ಆರೋಗ್ಯ ತಪಾಸಣೆ ಇತ್ಯಾದಿ ಸೌಲಭ್ಯಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಸರಕಾರ ಈ ವಿಷಯದಲ್ಲಿ ತೀರ್ಮಾ ನಿಸುವುದು ಬಡವರ್ಗಕ್ಕೆ ನಿರ್ಣಾಯಕ ವಾಗಿದೆ ಎಂದರು.
Related Articles
Advertisement
ಶಾಲೆ ತೆರೆಯಲು ಆಗ್ರಹಈಗಾಗಲೇ ನೆರೆ ರಾಜ್ಯಗಳು ಹಾಗೂ ಉತ್ತರ ಭಾರತದ ಹಲವು ರಾಜ್ಯಗಳು ಪ್ರಾಥಮಿಕ, ಪ್ರೌಢ, ವಸತಿ ಶಾಲೆ, ವಸತಿ ನಿಲಯ ಹಾಗೂ ಕಾಲೇಜು ಪುನರಾರಂಭಿಸಲು ಸುತ್ತೋಲೆ ಹಾಗೂ ನಿರ್ದಿಷ್ಟ ಮಾರ್ಗಸೂಚಿಯನ್ನು ಪ್ರಕಟಿಸಿವೆ. ಇದೇ ಮಾದರಿಯಲ್ಲಿ ರಾಜ್ಯ ಸರಕಾರ ಕೂಡ ಯೋಚಿಸಬೇಕಾಗಿದೆ.ಬಡ ಗ್ರಾಮೀಣ ಮಕ್ಕಳ ಹಿತವನ್ನು ಪ್ರಧಾನವನ್ನಾಗಿರಿಸಿಕೊಂಡು ನಮ್ಮ ಸರಕಾರಿ ಶಾಲೆಗಳನ್ನು ಆದಷ್ಟು ಬೇಗ ತೆರೆಯುವುದು ಮಹತ್ವದ ನಿರ್ಧಾರವಾಗುತ್ತದೆ. ಇಲ್ಲವಾದಲ್ಲಿ ಅನೇಕ ಮಕ್ಕಳು ಶಾಲೆಯಿಂದ ದೂರವುಳಿದು ಬಾಲಕಾರ್ಮಿಕ ಪದ್ಧತಿ, ಜೀತ ಪದ್ಧತಿ, ಬಾಲ್ಯ ವಿವಾಹ, ಮಕ್ಕಳ ಸಾಗಾಣಿಕೆಗೆ ಇತ್ಯಾದಿ ಅಪಾಯಗಳಿಗೆ ತುತ್ತಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ. ಮಕ್ಕಳನ್ನು ಈ ಎಲ್ಲ ಅವಘಡಗಳಿಂದ ರಕ್ಷಿಸಿ ಬಾಲ್ಯವನ್ನು ಅನುಭವಿಸಲು ಅವಕಾಶ ಕಲ್ಪಿಸಬೇಕಾದರೆ ಸರಕಾರಿ ಶಾಲೆಗಳು ಶೀಘ್ರವಾಗಿ ತೆರೆಯಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಶೀಘ್ರವಾಗಿ ಒಮ್ಮತದ ತೀರ್ಮಾನಕ್ಕೆ ಬರಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು.