Advertisement

ಆರು ತಿಂಗಳಿಂದ ಶಾಲಾ ಸಿಬ್ಬಂದಿಗೆ ಸಂಬಳವಿಲ್ಲ

04:17 PM Nov 26, 2019 | Team Udayavani |

ಕುದೂರು: ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಮತ್ತು 1ನೇ ತರಗತಿಯಲ್ಲಿ ಇಂಗ್ಲಿಷ್‌ ಮಾಧ್ಯಮ ಕಲಿಕೆಗೆ ಚಾಲನೆ ನೀಡಲಾಗಿರುವ ಕುದೂರು ಮತ್ತು ತಿಪ್ಪಸಂದ್ರ ಗ್ರಾಮಗಳಲ್ಲಿ ಇಬ್ಬರು ಶಿಕ್ಷಕಿಯರು, ಇಬ್ಬರು ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಅದರಲ್ಲಿ ಒಬ್ಬ ಶಿಕ್ಷಕಿ ಮತ್ತು ಒಬ್ಬ ಸಿಬ್ಬಂದಿ (ಆಯಾ)ಗೆ ಆರು ತಿಂಗಳಿನಿಂದ ಸಂಬಳವನ್ನೇ ನೀಡಿಲ್ಲ.

Advertisement

ರಾಜ್ಯದಲ್ಲಿ ಪ್ರಾರಂಭವಾದ ಸರ್ಕಾರಿ ನರ್ಸರಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಕೇವಲ ಮೂವತ್ತು ಮಕ್ಕಳನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆಯ ತೀರ್ಮಾನವಾಗಿತ್ತು. ಆದರೆ, ಕುದೂರು ಮತ್ತು ತಿಪ್ಪಸಂದ್ರ ಹೋಬಳಿ ಮುಖ್ಯ ಕೇಂದ್ರವಾಗಿರುವ ಕಾರಣ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಾಯಿತು. ಹೆಚ್ಚುವರಿ ತರಗತಿಗಳನ್ನು ಆರಂಭ ಮಾಡಲು ಕಟ್ಟಡದ ಅನುಕೂಲವೂ ಇತ್ತು. ಇದರಿಂದ ಸಾರ್ವಜನಿಕರು ಶಾಸಕರಲ್ಲಿ ಮತ್ತೂಂದು ತರಗತಿ ಆರಂಭಿಸಲು ಮನವಿ ಮಾಡಿದರು.

ಶಾಸಕರು ಈ ಸಂಬಂಧವಾಗಿ ಖುದ್ದು ಗಮನ ಹರಿಸಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಅನುಮತಿ ಪಡೆದು ಮತ್ತೂಂದು ತರಗತಿತೆರೆಯಲು ಅವಕಾಶ ಮಾಡಿಕೊಟ್ಟರು. ಆದರೆ ಸರ್ಕಾರದ ನಿರ್ಧಾರವೆಂದರೆ ಮೂವತ್ತು ಮಕ್ಕಳ ಕೊಠಡಿಗೆ ಶಿಕ್ಷಕಿ ಮತ್ತು ಆಯಾಗೆ ಸಂಬಳವನ್ನು ಸರ್ಕಾರದ ವತಿಯಿಂದ ಕೊಡಲಾಗುತ್ತಿದೆ. ಹೆಚ್ಚುವರಿಯಾಗಿ ಪ್ರಾರಂಭವಾದ ಮತ್ತೂಂದು ತರಗತಿಯಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕಿ ಮತ್ತು ಆಯಾಗೆ ಸಂಬಳವನ್ನು ಸ್ಥಳೀಯ ಸಂಪನ್ಮೂಲ ಗಳಿಂದಲೇ ಭರಿಸಬೇಕೆಂಬ ಕಾನೂನು ಮಾಡಿದೆ. ಸಾರ್ವಜನಿಕರ ಒತ್ತಡಕ್ಕೆ ಮಣಿದು ಹೆಚ್ಚುವರಿ ತರಗತಿ ತೆರೆಯಲು ಅನುಮತಿ ದೊರಕಿಸಿಕೊಟ್ಟ ಶಾಸಕರೇ ಸಂಬಳವನ್ನು ಕೊಡುತ್ತೇನೆ ಎಂದು ಹೇಳಿದ್ದರು. ಸ್ಥಳೀಯರು ಶ್ರಮಿಸದ ಕಾರಣ ಸಂಬಳ ಪಡೆಯುವುದು ಕಷ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next