ಕೋಲಾರ: ನಗರದ ಭೋವಿ ಕಾಲೋನಿಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಾಗೂ ಶಾಲೆಯ ದೇವಾಂಗಪೇಟೆ ಸರ್ಕಾರಿ ಶಾಲೆ ಎಂಬ ಹೆಸರಿನಲ್ಲಿ ಇದ್ದರೂ ಕೆಲವು ವ್ಯಕ್ತಿಗಳು ಈ ಜಾಗ ತಮ್ಮದೆಂದು ಗದ್ದಲ ಸೃಷ್ಟಿಸಿರುವ ದೂರಿನ ಹಿನ್ನೆಲೆ ತಹಶೀಲ್ದಾರ್ ನಾಗರಾಜ್ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸ್ಥಳದಲ್ಲಿ ಸುಮಾರು 20 ವರ್ಷಗಳಿಂದ ಶಾಲೆ ನಡೆಯುತ್ತಿದ್ದ ಪ್ರಾರಂಭದಲ್ಲಿ ಕೆಲವು ವ್ಯಕ್ತಿಗಳು ಅಡ್ಡಿ ಮಾಡಿದ್ದಾರೆ. 2007ರಲ್ಲಿ ತಕರಾರು ಜಮೀನಿನಲ್ಲಿ ಸರ್ಕಾರಿ ಶಾಲೆಯನ್ನು ಕಟ್ಟಬಹುದೆಂದು ಕೋರ್ಟ್ ತೀರ್ಪು ನೀಡಿದೆ. ಶಾಲಾಕಟ್ಟಡ ನಿರ್ಮಾಣವಾಗಿ ಶಾಲೆ ನಡೆ ಯುತ್ತಿದೆ. ಆದರೆ, ಕೆಲವರು ಈ ಸ್ಥಳವು ಸರ್ವೆ ನಂಬರ್ 187 ರಲ್ಲಿ ಶಾಲೆ ದಾಖಲೆಗಳಲ್ಲಿ ಇರುವು ದರಿಂದ ಈ ಶಾಲೆಯು ಇನ್ನು ಹೊರಗಡೆಗೆ ಹೋಗಬೇಕೆಂದು ಈ ಸ್ಥಳವು ನಮ್ಮದೆಂದು 2006ರಿಂದ ತಕರಾರು ತೆಗೆದಿದ್ದು, ಶಿಕ್ಷಕರನ್ನು ಹೆದರಿಸಿದ್ದಾರೆ.
ಆದ್ದರಿಂದ ಈ ಶಾಲೆ ಸರ್ವೆ ನಂಬರ್ 185 ರಲ್ಲಿ ಇರುವುದರಿಂದ ಹಾಗೂ ಈ ಸ್ಥಳವು ಸರ್ಕಾರಿ ಜಾಗವಾಗಿರುವುದರಿಂದ ಸರ್ವೇ ನಂಬರ್ 187ರ ಬದಲಾಗಿ 185 ಸರ್ವೇ ನಂಬರ್ ನಮೂದು ಮಾಡಿದಲ್ಲಿ ಎಲ್ಲದಕ್ಕೂ ಪರಿಹಾರ ಸಿಗುತ್ತದೆ. ಸರ್ವೆಯರ್ ಶಾಲೆಯ ಸುತ್ತಮುತ್ತಲಿನ ಚೆಕ್ ಬಂದಿ ಕಾಲುವೆ ದಕ್ಷಿಣಕ್ಕೆ ನಂಜೇಗೌಡರ ಮನೆ ಪೂರ್ವಕ್ಕೆ ರಾಮಯ್ಯನವರ ಮನೆ ಉತ್ತರಕ್ಕೆ ರಸ್ತೆ ಇರುವುದರಿಂದ ಸರ್ವೇ ನಂಬರ್ 187 ಬದಲಾಗಿ 185 ಎಂದು ನಮೂದಿಸಿಲ್ಲ. ಮಕ್ಕಳ ವಿದ್ಯಾ ಭ್ಯಾಸಕ್ಕೂ ತೊಂದರೆ ನೀಡಬಾರದು ಎಂದರು.
ಇದೇ ವೇಳೆ ತಹಶೀಲ್ದಾರ್ ಎಚ್ಚರಿಕೆ ನೀಡಿ, ಶಾಲೆ ನಡೆಯಲಿ. ಜಾಗ ನಿಮ್ಮದಾಗಿದ್ದರೆ ಕೋರ್ಟ್‌ನಲ್ಲಿ ಪರಿಹರಿಸಿಕೊಳ್ಳಿ ಎಂದು ಸೂಚಿಸಿ ದರು. ಮಾಜಿ ನಗರಸಭಾ ಸದಸ್ಯ ಚಂದ್ರಮೌಳಿ, ನಗರದ ಆರಕ್ಷಕ ಠಾಣೆಯ ಅಧಿಕಾರಿ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಆರ್. ಶ್ರೀನಿವಾಸನ್, ಮುಖ್ಯಶಿಕ್ಷಕಿ ಪ್ರಭಾವತಿ ನಾಗರಾಜ್ ಇತರರಿದ್ದರು.