Advertisement
ಅವರು ಗುರುವಾರ ಇಲ್ಲಿ ತಾ.ಪಂ. ಸಭೆ ನಡೆಸಿ, ಹಾಸ್ಟೆಲ್‌ಗಳು ಸುವ್ಯವಸ್ಥಿತ ವಾಗಿ ಇರುವಂತೆ ನೋಡಿಕೊಳ್ಳಬೇಕು. ಮೂಲ ಸೌಕರ್ಯ ಉತ್ತಮವಾಗಿ ಇರಬೇಕು. ಅಡುಗೆ ಮನೆ, ಲೈಬ್ರರಿ ಇತ್ಯಾದಿಗಳು ಸರಿ ಇರಬೇಕು ಎಂದು ಬಿಸಿಎಂ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದರು. ಹಾಸ್ಟೆಲ್ ಮಾಡಿಗೆ ಶೀಟ್ ಹಾಕಿಸುವುದಾದರೆ ಶಬ್ದ ಬರದಂತಹ ಶೀಟ್ ಹಾಕಿಸಿ. ಶಾಲೆ ದುರಸ್ತಿ ಹಾಗೂ ಹಾಸ್ಟೆಲ್ ಮೂಲಸೌಕರ್ಯಕ್ಕೆ ಅವಶ್ಯವಿದ್ದರೆ ಮಾಹಿತಿಕೊಡಿ ಎಂದು ಬಿಸಿಎಂ ಅಧಿಕಾರಿ ನರಸಿಂಹ ಪೂಜಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಅವರಲ್ಲಿ ಮಾಹಿತಿ ಪಡೆದರು.
Related Articles
Advertisement
ಶಾಲೆಗಳಲ್ಲಿ ವನಮಹೋತ್ಸವ ನಡೆಸಲು ಸಮಾಜಿಕ ಅರಣ್ಯ ಇಲಾಖೆಯಿಂದ ಗಿಡಗಳನ್ನು ಪಡೆದುಕೊಳ್ಳ ಬಹುದು. ಬೇಡಿಕೆಗಳ ಪಟ್ಟಿ ನೀಡಿ. ಪಂಚಾಯತ್ ಹಂತದಲ್ಲಿ ವಿಂಗಡಿಸಿ ನೀಡಿದರೆ ಸಾಗಾಟದ ವೆಚ್ಚ ಪಂಚಾಯತ್ ಗಳಿಂದ ಪಡೆಯಬಹುದು. ಹಾಸ್ಟೆಲ್ ಗಳ ಆವರಣದಲ್ಲೂ ಗಿಡಗಳನ್ನು ನೆಡಬಹುದು. ದೊಡ್ಡ ಪ್ರಮಾಣದಲ್ಲಿ ಗಿಡಗಳನ್ನು ನೆಡುವುದಾದರೆ ನರೇಗಾ ಯೋಜನೆಯನ್ನು ಬಳಸಬಹುದು ಎಂದು ಸಾಮಾಜಿಕ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ತುಳಸಿ, ನರೇಗಾ ಸಹಾಯಕ ನಿರ್ದೇಶಕ ರಾಜೇಶ್ ಕೆ.ಸಿ. ಅವರಿಂದ ಮಾಹಿತಿ ಪಡೆದರು.
15ನೆಯ ಹಣಕಾಸು ಯೋಜನೆಯಲ್ಲಿ ಅನುದಾನ ಇದೆ, ಕೊರತೆ ಇಲ್ಲ. ಯಾವುದೇ ಇಲಾಖೆಗಳದ್ದು ಅಭಿವೃದ್ಧಿ, ಜನಪರ ಸೌಕರ್ಯದ ಬೇಡಿಕೆಗಳಿದ್ದರೆ ಪಟ್ಟಿಕೊಡಿ. ಆದರೆ ಸೂಕ್ತ ದಾಖಲೆ, ಛಾಯಾಚಿತ್ರಗಳಿರಬೇಕು ಎಂದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಉಪಸ್ಥಿತರಿದ್ದರು.