Advertisement
ಹಿಂಜರಿಕೆ: ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸರ್ಕಾರಿ ಶಾಲೆಗಳನ್ನು ಆರಂಭಿಸಿ ವಿದ್ಯಾಗಮ ಯೋಜನೆ ಪುನಃ ಆರಂಭಿಸಲಾಗಿದೆ. ಆದರೆ ಕೊರೊನಾ ಸೋಂಕಿನ ಭೀತಿಯಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿದಿದ್ದು, ಶಾಲೆಗಳಲ್ಲಿ ಹಾಜರಾತಿ ಪ್ರಮಾಣ ಮಾತ್ರ ಕ್ಷೀಣಿಸಿದೆ. ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆ ಆರಂಭಿ ಸಿರುವುದಕ್ಕೆ ಹಾಜರಾದ ವಿದ್ಯಾರ್ಥಿಗಳು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಹಲವು ತಿಂಗಳಿಂದ ಶಾಲೆಗಳಿಲ್ಲದೇ ಬೇಜಾರಾಗಿತ್ತು. ಇದೀಗ ಆರಂಭಿಸಿದ್ದರಿಂದ ಒಳ್ಳೆಯದಾಗಿದೆ. ಯಾವುದೇ ಆತಂಕವಿಲ್ಲದೆ ಪಾಠದ ವ್ಯವಸ್ಥೆಯನ್ನು ಶಿಕ್ಷಕರು ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Related Articles
Advertisement
ದಾಖಲಾತಿ ಹೆಚ್ಚುವ ವಿಶ್ವಾಸ: ಶಾಲೆ ಆರಂಭಗೊಂಡಿದ್ದರೂ ಸಹ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿಲ್ಲ. ಹೊಸ ವರ್ಷ ಆಗಿರುವುದರಿಂದ ವಿದ್ಯಾರ್ಥಿಗಳು ಭಾಗವಹಿ ಸಿಲ್ಲ ಎಂದು ಅಂದಾಜಿಸಲಾಗಿದ್ದು, ಮುಂದಿನ ದಿನಗಳಲ್ಲಿವಿದ್ಯಾ ರ್ಥಿಗಳಲ್ಲಿ ಮತ್ತು ಪೋಷಕರ ಮನದಲ್ಲಿ ಮನೆ ಮಾಡಿರುವ ಆತಂಕ ನಿವಾರಣೆಯಾಗಿ ಶಾಲೆಗಳಲ್ಲಿ ದಾಖಲಾತಿಗಳ ಸಂಖ್ಯೆ ಹೆಚ್ಚಾಗಲಿದೆ ಎಂಬ ವಿಶ್ವಾಸವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಖಾಸಗಿ ಶಾಲೆಗಳಲ್ಲಿ ಶೇ.50 ಹಾಜರಿ : ಜಿಲ್ಲಾದ್ಯಂತ ಶುಕ್ರವಾರದಿಂದ ಶಾಲೆಗಳು ಆರಂಭಗೊಂಡರೂ ಸಹ ಸರ್ಕಾರಿ ಶಾಲೆಗಳಲ್ಲಿ ಉತ್ಸಾಹ ಕಂಡು ಬಂದಿಲ್ಲ. ಆದರೆ ಖಾಸಗಿ ಶಾಲೆಗಳಲ್ಲಿ ಶೇ.50 ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಈಗಾಗಲೇ ವಾಟ್ಸ್‌ಆಪ್ ಮೂಲಕ ಟೀಚಿಂಗ್ ಮೆಟೀರಿಯಲ್ ಕಳುಹಿಸಿ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಿಕೊಂಡಿರುವ ಖಾಸಗಿ ಶಾಲಾ ಆಡಳಿತ ಮಂಡಳಿಯವರಿಗೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕೋವಿಡ್ ಸೋಂಕಿನ ಭೀತಿಯ ನಡುವೆಯೂ ಜಿಲ್ಲೆಯಲ್ಲಿ ಶಾಲೆ ಆರಂಭಕ್ಕೆಉತ್ತಮ ಸ್ಪಂದನೆ ಸಿಕ್ಕಿದೆ. ಜಿಲ್ಲಾದ್ಯಂತ ಸುಮಾರು 30-40% ವಿದ್ಯಾರ್ಥಿ ಗಳು ಹಾಜರಾಗಿದ್ದಾರೆ. ಪೋಷಕರು ಸಹ ಶಿಕ್ಷಣ ಇಲಾಖೆ ಮತ್ತುಸರ್ಕಾರದ ಮೇಲೆ ವಿಶ್ವಾಸಯಿಟ್ಟು ಮಕ್ಕಳನ್ನು ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. –ನಾಗೇಶ್, ಡಿಡಿಪಿಐ, ಸಾರ್ವಜನಿಕ ಶಿಕ್ಷಣ ಇಲಾಖೆ
ಶಾಲೆಗಳು ಮುಚ್ಚಿದ್ದರಿಂದ ಬೇಜಾರಾಗಿತ್ತು. ಸರ್ಕಾರ ಕೆಲವೊಂದು ನಿಯಮಗಳನ್ನುಜಾರಿಗೊಳಿಸಿ ಶಾಲೆ ಆರಂಭಿಸಿರುವುದರಿಂದ ಅನುಕೂಲವಾಗಿದೆ. ಕೋವಿಡ್ ಹಿನ್ನೆಲೆ ಪೋಷಕರಲ್ಲಿ ಆತಂಕಯಿದೆ. ಕೋವಿಡ್ ಮಾರ್ಗಸೂಚಿ ಪಾಲಿಸಿದರೆ ಯಾವುದೇ ಅಪಾಯ ಇಲ್ಲ. –ಮುಸ್ಕಾನ್ ಖಾನಂ, ಒಂಬತ್ತನೇ ತರಗತಿ, ಸ.ಪ್ರೌ. ಶಾಲೆ, ಶಿಡ್ಲಘಟ್ಟ
ಕೋವಿಡ್-19ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶಾಲೆಗಳು ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಕಡಿಮೆಸಂಖ್ಯೆಯಲ್ಲಿ ಹಾಜರಾಗಿದ್ದಾರೆ.ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ. –ಮಂಜುಳಾ, ಸಹಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ, ಶಿಡ್ಲಘಟ್ಟ
ಮಕ್ಕಳನ್ನು ಶಾಲೆಗೆ ಕಳುಹಿಸಿದ್ದೇವೆ. ನಿರ್ಲಕ್ಷ್ಯ ವಹಿಸದೆ ಶಾಲೆಗಳು ನಡೆದರೆ ಮಕ್ಕಳು ಆರೋಗ್ಯವಾಗಿ ರುತ್ತಾರೆ. ಜೊತೆಗೆ ಪೋಷಕರು ಸಹ ಶಾಲೆಗಳ ವ್ಯವಸ್ಥೆಗಳನ್ನು ಪರಿಶೀಲಿಸಬೇಕು. ಆಗ ಮಾತ್ರ ಆತಂಕ ನಿವಾರಣೆಯಾಗುತ್ತದೆ. –ಜಬೀನ್ ತಾಜ್, ಪೋಷಕರು, ಶಿಡ್ಲಘಟ್ಟ
ಹಲವು ತಿಂಗಳ ನಂತರ ಶಾಲೆ ಆರಂಭಗೊಂಡಿರುವುದು ಸಂತೋಷ ವಾಗಿದೆ. ಕೋವಿಡ್ ಮಾರ್ಗಸೂಚಿ ಪಾಲಿಸುತ್ತಿದ್ದೇವೆ. ಶಿಕ್ಷಕರು ನಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ. –ಎಂ.ಸಾನಿಯಾ, ಒಂಬತ್ತನೇ ತರಗತಿ, ಸರ್ಕಾರಿ ಪ್ರೌಢ ಶಾಲೆ ಶಿಡ್ಲಘಟ್ಟ