ಬೆಂಗಳೂರು: ಉಡುಪಿ ಜಿಲ್ಲೆಯ ಸಹಿತ ರಾಜ್ಯಾದ್ಯಂತ ಸೋಮವಾರ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾರಂಭವಾಗಿದೆ. ಹಲವು ದಿನ ಗಳಿಂದ ಮನೆಯಲ್ಲೇ ಕಾಲಕಳೆದಿದ್ದ ಮಕ್ಕಳು ಉತ್ಸಾಹದಿಂದ ಪಾಠ ಆಲಿಸಿದರು. ಆದರೆ ಕೋವಿಡ್ ಸೋಂಕು ಹೆಚ್ಚಿರುವ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಈ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಇನ್ನೂ ಆರಂಭವಾಗಿಲ್ಲ.
ಮೊದಲ ದಿನ ಭೌತಿಕ ಹಾಜರಾತಿ ಕಡಿಮೆಯಿತ್ತು. ಭೌತಿಕ ತರಗತಿಗೆ ಹಾಜರಾತಿ ಕಡ್ಡಾಯ ವಲ್ಲದ ಕಾರಣ ಅರ್ಧಕ್ಕಿಂತಲೂ ಕಡಿಮೆ ಹಾಜರಾತಿ ಇತ್ತು.
ಪಾಸಿಟಿವಿಟಿ ಶೇ. 2ಕ್ಕಿಂತ ಕಡಿಮೆ ಇರುವ ತಾಲೂಕು ವಲಯಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ತರಗತಿಗಳು ನಡೆದವು. ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರ ವರೆಗೆ 6 ಮತ್ತು 7ನೇ ತರಗತಿಗಳು ಹಾಗೂ ಅಪರಾಹ್ನ 2ರಿಂದ 4.30ರ ವರೆಗೆ 8ನೇ ತರಗತಿಗೆ ಪಾಠಗಳು ಪಾಳಿ ಪದ್ಧತಿಯಲ್ಲಿ ನಡೆದವು. 15ರಿಂದ 20 ಮಕ್ಕಳ ತಂಡ ರಚಿಸಿ ಪಾಠ ಮಾಡಲಾಯಿತು.
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಧೈರ್ಯ ತುಂಬಿದರು. ಶಿಕ್ಷಕರು ಮತ್ತು ಆಡಳಿತ ವರ್ಗದ ಜತೆಗೆ ಸಮಾಲೋಚನೆ ನಡೆಸಿದರು. ಸುರಕ್ಷೆಯ ಕ್ರಮ ಅನುಸರಿಸಿ ಶಾಲೆ ಆರಂಭಿಸಲಾಗಿದೆ. 1ರಿಂದ 5ನೇ ತರಗತಿಗಳಿಗೂ ಶಾಲಾರಂಭಕ್ಕೆ ತಜ್ಞರ ಅಭಿ ಪ್ರಾಯ ಮತ್ತು ಒಪ್ಪಿಗೆ ಪಡೆ ಯಲಾಗುತ್ತಿದೆ. 6ರಿಂದ 8ನೇ ತರಗತಿಗಳಿಗೆ ವಿದ್ಯಾರ್ಥಿಗಳ ಹಾಜರಾತಿ ಆಧಾರದ ಮೇಲೆ ಇನ್ನುಳಿದ ತರಗತಿ ಆರಂಭಿ ಸುವ ನಿರ್ಧಾರ ತೆಗೆದುಕೊಳ್ಳು ತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.