Advertisement

ಶಾಲೆ-ಪಿಯು ಕಾಲೇಜು ಆರಂಭ

02:54 PM Aug 23, 2021 | Team Udayavani |

ಬೆಂಗಳೂರು: ಕೋವಿಡ್‌ ಅಡೆತಡೆ ನಡುವೆಯೂ ಸೋಮವಾರದಿಂದ ರಾಜ್ಯದಲ್ಲಿ 9, 10 ಮತ್ತುಪಿಯು ಕಾಲೇಜುಗಳು ಕೋವಿಡ್‌ ಮುಂಜಾಗರೂಕತಾ ಕ್ರಮಗಳೊಂದಿಗೆ ಆರಂಭವಾಗಲಿದೆ.

Advertisement

ಕೋವಿಡ್‌ ಸೋಂಕು ಅಧಿಕ ಇರುವ ಜಿಲ್ಲೆಗಳನ್ನುಹೊರತು ಪಡಿಸಿ ಉಳಿದ ಜಿಲ್ಲೆಯಲ್ಲಿ 9ರಿಂದ 12ನೇತರಗತಿವರೆಗೆ ಭೌತಿಕ ತರಗತಿಗಳು ನಡೆಯಲಿವೆ.ಬಹಳ ದಿನಗಳ ನಂತರ ಶಾಲಾ -ಕಾಲೇಜುಗಳುಆರಂಭವಾಗುತ್ತಿದ್ದು ವಿದ್ಯಾರ್ಥಿಗಳು ಕೂಡ ಭೌತಿಕತರಗತಿಯಲ್ಲಿ ಶಿಕ್ಷಕರ ಪಾಠ ಕೇಳಲುಕಾತುರರಾಗಿದ್ದಾರೆ.

ತರಗತಿಗಳ ಆರಂಭಕ್ಕೆ ಶಿಕ್ಷಣಇಲಾಖೆ ಕೂಡ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಪೂರ್ಣಗೊಳಿಸಿದೆ. 2021-22ನೇ ಸಾಲಿನ ಶೈಕ್ಷಣಿಕವರ್ಷ ಜೂ.15ರಿಂದ ಆರಂಭವಾಗಿದ್ದರೂ ಕೂಡಕೋವಿಡ್‌ 2ನೇ ಅಲೆಯ ಹಿನ್ನೆಲೆಯಲ್ಲಿ ಭೌತಿಕತರಗತಿಗಳು ಆರಂಭವಾಗಿರಲಿಲ್ಲ.ಈಗಾಗಲೇ ತಜ್ಞರು ಸುರಕ್ಷತಾ ಕ್ರಮಗಳನ್ನುಕೈಗೊಂಡು ಶಾಲಾ-ಕಾಲೇಜುಗಳು ಭೌತಿಕ ತರಗತಿಗಳನ್ನು ಆರಂಭಿಸಬಹುದು ಎಂದು ಹೇಳಿರುವಹಿನ್ನೆಲೆಯಲ್ಲಿ ಸರ್ಕಾರ ಶಾಲೆಗಳ ಆರಂಭಕ್ಕೆ ಅಣಿಯಾಗಿದೆ.

ಕಾಲೇಜು ಶಿಕ್ಷಣ ಇಲಾಖೆ ಕೂಡ ಭೌತಿಕತರಗತಿಗಳ ಆರಂಭಕ್ಕೆ ಪ್ರತ್ಯೇಕ ಮಾರ್ಗಸೂಚಿಬಿಡುಗಡೆ ಮಾಡಿದೆ.ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ: ಭೌತಿಕತರಗತಿಗಳನ್ನು ನಡೆಸಲು ಶಾಲಾ-ಕಾಲೇಜು ಆಡಳಿತಮಂಡಳಿಗಳು ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್‌ಮಾಡಿವೆ.

ಸರ್ಕಾರ ನೀಡಿರುವ ಎಸ್‌ಒಪಿಯನ್ನುಕಡ್ಡಾಯವಾಗಿ ಅನುಷ್ಠಾನ ಮಾಡಲು ಬೋಧಕಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಶಾಲಾ ಆಡಳಿತಮಂಡಳಿಗಳು ಸಭೆ ನಡೆಸಿ ಸೂಚನೆ ನೀಡಿವೆ.ಶಾಲೆಗಳು ಕಟ್ಟುನಿಟ್ಟಾಗಿ ಸುರಕ್ಷತಾ ಕ್ರಮಗಳನ್ನುಅನುಸರಿಸುವ ಬಗ್ಗೆ ಖಾತರಿ ಮಾಹಿತಿ ಪಡೆದನಂತರವೇ ಪಾಲಕರು ತಮ್ಮ ಮಕ್ಕಳನ್ನು ಶಾಲೆಗಳಿಗೆಕಳುಹಿಸಬಹುದಾಗಿದೆ. ಜತೆಗೆ ಶಾಲೆಗೆ ಬರಲುಇಚ್ಛಿಸುವವಿದ್ಯಾರ್ಥಿಗಳುಹಾಜರಾತಿಗೆಪಾಲಕರಿಂದಕಡ್ಡಾಯವಾಗಿ ಅನುಮತಿ ಪತ್ರ ತರಬೇಕಾಗಿದೆ.

Advertisement

ಗಡಿಜಿಲ್ಲೆ ದಕ್ಷಿಣ ಕನ್ನಡ, ಕೊಡಗು,ಉಡುಪಿ ಸೇರಿದಂತೆಕೋವಿಡ್‌ ಪಾಸಿಟಿವ್‌ ರೇಟ್‌ ಶೇ.2ಕ್ಕಿಂತ ಹೆಚ್ಚಿರುವಜಿಲ್ಲೆಗಳಲ್ಲಿ ಶಾಲಾ -ಕಾಲೇಜುಗಳು ಬಂದ್‌ಆಗಿರಲಿವೆ.ಶೇ.50ರಷ್ಟು ವಿದ್ಯಾರ್ಥಿಗಳಿಗೆ ಪಾಠ: ತರಗತಿಯಒಟ್ಟು ವಿದ್ಯಾರ್ಥಿಗಳ ಪೈಕಿ ಶೇ.50 ವಿದ್ಯಾರ್ಥಿಗಳಿಗೆಮಾತ್ರ ಅವಕಾಶ ಕಲ್ಪಿಸಬೇಕು ಎಂದುಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆ ಹಿನ್ನೆಲೆಯಲ್ಲಿಪಿಯು ಕಾಲೇಜುಗಳಲ್ಲಿ ತಲಾ ಮೂರು ದಿನಗಳಂತೆವಿದ್ಯಾರ್ಥಿಗಳನ್ನು ವಿಂಗಡಿಸಿ ಪಾಠ ಹೇಳಿಕೊಡಲಾಗುತ್ತದೆ.

ಹಾಗೆಯೇ ಪ್ರೌಢಶಾಲೆಗಳಲ್ಲಿಅರ್ಧ ದಿನವಷ್ಟೇ ತರಗತಿಗಳನ್ನು ನಡೆಸುವಂತೆ ಶಿಕ್ಷಣಇಲಾಖೆ ಸುತ್ತೋಲೆಯಲ್ಲಿ ಸೂಚಿಸಿದೆ. ಉಳಿದವಿದ್ಯಾರ್ಥಿಗಳಿಗೆ, ಉಳಿದ ಅವಧಿಗೆ ಆನ್‌ಲೈನ್‌ಅಥವಾ ಪರ್ಯಾಯಕ್ರಮಗಳ ಮೂಲಕ ಬೋಧನೆಮುಂದುವರಿಸಲು ಶಿಕ್ಷಕರಿಗೆ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next