Advertisement

ಶಾಲೆ ಪದೋನ್ನತಿ ನಾಮಫಲಕ ಅನಾವರಣ

12:11 PM Feb 15, 2020 | Suhan S |

ಬಾದಾಮಿ: ಶಾಲಾ ಅಭಿವೃದ್ಧಿಯಲ್ಲಿ ಸಮುದಾಯ, ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಎಲ್ಲರ ಸಹಕಾರದಿಂದ ಶಾಲೆ ಅಭಿವೃದ್ಧಿ ಹೊಂದಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರಕಾರಿ ಶಾಲೆಯಲ್ಲಿ ಗುಣಮಟ್ಟ ಶಿಕ್ಷಣ ನೀಡಲು ಶ್ರಮಿಸಬೇಕು ಎಂದು ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ಎಂ.ಪಿ. ಮಾಗಿ ಹೇಳಿದರು.

Advertisement

ಶುಕ್ರವಾರ ತಾಲೂಕಿನ ಕಬ್ಬಲಗೇರಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಪದೋನ್ನತಿ ಕಾರ್ಯಕ್ರಮದ ನಾಮಫಲಕ ಅನಾವರಣ ಹಾಗೂ ಕಲಿಕಾ ವಸ್ತುಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಪರಿಪೂರ್ಣವಾದ ಕಲಿಕಾ ಶಾಲಾ ವರ್ಗಕೋಣೆಯಲ್ಲಿ ನಡೆಯಬೇಕು. ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಬೆಳೆಸಬೇಕು. ಗುರುವಿಗೆ ಮಹತ್ತರವಾದ ಸ್ಥಾನ ಇದೆ. ಶಾಲೆ ಇಂದು ಉನ್ನತ್ತೀಕರಣವಾಗಿದೆ. ಈ ಕ್ಲಷ್ಟರ್‌ನಲ್ಲಿ ಮಾದರಿ ಶಾಲೆಯಾಗಿದೆ ಎಂದರು.

ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಆರ್‌.ಎಸ್‌. ಆದಾಪೂರ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ನಾಗರಿಕರು. ಆಧುನಿಕ ಇಂದಿನ ತಂತ್ರಜ್ಞಾನ ಯುಗದಲ್ಲಿ ಅಂತರ್ಜಾಲದ ಮೂಲಕ ಮಕ್ಕಳು ಕಲಿಯುತ್ತಾರೆ. ತಂತ್ರಜ್ಞಾನ ಆಧಾರಿತ ಕಲಿಕೆ ನಡೆಯಬೇಕು. ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ನೀಡಲು ಶಿಕ್ಷಕರು ಶ್ರಮವಹಿಸಿ ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ಕನಕಪ್ಪ ಪರಸನ್ನವರ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಆನಂದಸ್ವಾಮಿ, ಸಮೂಹ ಸಂಪನ್ಮೂಲ ವ್ಯಕ್ತಿ ಸಂತೋಷ ಕೋಟನಕರ, ಮುಖಂಡರಾದ ಕನಕಪ್ಪ ಕಂತಿ, ಮಾರಿಗೆಪ್ಪ, ಭೀಮಪ್ಪ ಪೂಜಾರ, ಭೀಮಪ್ಪ ಮುತ್ತಲಗೇರಿ, ರೂಪಾ ಪೂಜಾರ, ಹನಮಪ್ಪ ಕಂಬಾರ, ಗೋವಿಂದ ತಳವಾರ, ಚುಳಚಪ್ಪ ದಾಸರ, ಕೋನಪ್ಪ ಗೊಲ್ಲರ, ಕೋನಪ್ಪ ಪೂಜಾರ, ರಾಘು ವಾಲಿಕಾರ, ಗುರುನಾಥ ಮುರಾರಿ, ರಂಗಪ್ಪ ಬೇನಾಳ ಸೇರಿದಂತೆ ವಿವಿಧ ಶಾಲೆಯ ಮುಖ್ಯಶಿಕ್ಷಕರು, ಸ್ಥಳೀಯ ಶಾಲೆಯ ಮಕ್ಕಳು, ಪಾಲಕರು ಭಾಗವಹಿಸಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕ ವೈ.ಎಫ್‌. ಶರೀಫ ಮಾತನಾಡಿದರು. ಇದೇ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಪಿ. ಮಾಗಿ, ಸಹಾಯಕ ನಿರ್ದೇಶಕ ಆರ್‌.ಎಸ್‌. ಆದಾಪೂರ, ಸಿಆರ್‌ಪಿ ಸಂತೋಷ ಕೋಟನಕರ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈರಣ್ಣ ಹಲಗಲಿ ಸ್ವಾಗತಿಸಿದರು. ಬಿ.ಎಫ್‌. ಕುಂಬಾರ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next