Advertisement
ಜಾಯ್ ಹ್ಯಾರಿಸ್ ಗರ್ಲ್ಸ್ ಇಂಟರ್ ಕಾಲೇಜ್ ಪ್ರಾಂಶುಪಾಲೆ ಮಮತಾ ದೀಕ್ಷಿತ್ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಗುಂಪು ಶಾಲೆಯ ಡ್ರೆಸ್ ಕೋಡ್ ಬಗ್ಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪಿಗಳು ತನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
Related Articles
Advertisement
ಆಗ್ರಾದ ಜಿಲ್ಲಾ ಇನ್ಸ್‌ಪೆಕ್ಟರ್ ಆಫ್ ಸ್ಕೂಲ್ ಮನೋಜ್ ಕುಮಾರ್ ಪ್ರತಿಕ್ರಿಯಿಸಿ “ದೂರು ಇತ್ತು. ನಾವು ಎರಡೂ ಕಡೆಯ ಹೇಳಿಕೆಗಳನ್ನು ತೆಗೆದುಕೊಂಡಿದ್ದೇವೆ. ಪ್ರಾಂಶುಪಾಲರು ಅವರ ಹೇಳಿಕೆಯನ್ನು ನೀಡಿದರು. ನಾವು ಸಿಬಂದಿಗಳನ್ನೂ ಸಹ ಪ್ರಶ್ನಿಸಿದ್ದೇವೆ. ಆರಂಭದಲ್ಲಿ ಹೆಚ್ಚಿನ ಶುಲ್ಕ ವಸೂಲಿ ಮಾಡುವ ಬಗ್ಗೆ ದೂರು ಬಂದಿತ್ತು. ಅದನ್ನು ಪರಿಹರಿಸಲಾಗಿದೆ. ನಂತರ, ವೈಯಕ್ತಿಕ ವಿವಾದದ ವಿಷಯಗಳು ಬೆಳಕಿಗೆ ಬರಲಾರಂಭಿಸಿದವು ಎಂದು ಹೇಳಿದ್ದಾರೆ.
“ದೂರುಗಳು ಉಲ್ಬಣಗೊಂಡವು ಮತ್ತು ಪ್ರಾಂಶುಪಾಲರ ವಿಡಿಯೋ ವೈರಲ್ ಆಯಿತು. ನಾವು ಇದನ್ನು ಆಡಳಿತ ಮಂಡಳಿಯೊಂದಿಗೆ ಸಭೆಯ ಮೂಲಕ ಪರಿಹರಿಸುತ್ತೇವೆ. ಹಿಜಾಬ್ ಮತ್ತು ಬುರ್ಖಾದ ಬಗ್ಗೆ ದೂರಿಗೆ ಸಂಬಂಧಿಸಿದಂತೆ, ನಾವು 2 ದಿನಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ ಎಂದು ಹೇಳಿದ್ದಾರೆ.