ಪಾಟ್ನಾ: ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಗ್ರಾಮಸ್ಥರು ಶಾಲೆಯ ಮುಖ್ಯೋಪಾಧ್ಯಾಯರನ್ನು ಥಳಿಸಿದ್ದಾರೆ. ಪೊಲೀಸರು ಆ ಹೆಡ್ ಮಾಸ್ಟರ್ ರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.
ಜಿಲ್ಲೆಯ ಸೆಮಾಪುರ ಪ್ರದೇಶದ ಪಿಪ್ರಿ ಬಹಿಯಾರ್ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಮುಖ್ಯೋಪಾಧ್ಯಾಯರು 4 ನೇ ತರಗತಿಯ 12 ವರ್ಷದ ವಿದ್ಯಾರ್ಥಿನಿಗೆ ಕಿರುಕುಳ ನೀಡಲು ಯತ್ನಿಸಿದ್ದಾರೆ, ಆಕೆಯ ಕೆನ್ನೆಗೆ ಕಚ್ಚಿದರು. ಹುಡುಗಿ ಕಿರುಚುವುದನ್ನು ಕೇಳಿದ ಕೆಲವು ಜನರು ತರಗತಿಗೆ ಓಡಿಬಂದಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ಸ್ಥಳೀಯರು ಆರೋಪಿ ಮುಖ್ಯೋಪಾಧ್ಯಾಯರನ್ನು ಹಿಡಿದು ಶಾಲೆಯ ಕೊಠಡಿಯಲ್ಲಿ ಬಂಧಿಸಿದ್ದರು. ಏತನ್ಮಧ್ಯೆ, ಹುಡುಗಿಯ ಸಂಬಂಧಿಕರು ಮತ್ತು ಇತರ ಸ್ಥಳೀಯರು ವಿಷಯ ತಿಳಿದು ಶಾಲೆಯ ಹೊರಗೆ ಜಮಾಯಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸಿ, ಮುಖ್ಯೋಪಾಧ್ಯಾಯರನ್ನು ಹೊರಕ್ಕೆ ಕರೆದೊಯ್ಯುತ್ತಿದ್ದಾಗ, ಕೋಪಗೊಂಡ ಗ್ರಾಮಸ್ಥರು ಆರೋಪಿಯ ಮೇಲೆ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ:ರಾಜಕಾರಣಕ್ಕೂ ದರ ಏರಿಕೆಗೂ ಸಂಬಂಧ ಇಲ್ಲ: ಸಚಿವ ಈಶ್ವರಪ್ಪ
ಪೊಲೀಸರ ಎದುರೇ ಗುಂಪೊಂದು ಆರೋಪಿಯ ಅಧ್ಯಾಪಕರ ಮೇಲೆ ಲಾಠಿಯಿಂದ ಹೊಡೆದು ಬಲವಾಗಿ ಥಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಹೊಡೆಯುವ ವಿಡಿಯೋಗಳು ವೈರಲ್ ಆಗಿದೆ.
ಅಪ್ರಾಪ್ತ ವಯಸ್ಕ ವಿದ್ಯಾರ್ಥನಿಗೆ ಕಿರುಕುಳ ನೀಡಲು ಯತ್ನಿಸಿದಾಗ ತಾನು ಮಾನಸಿಕ ಅಸಮರ್ಥನಾಗಿದ್ದೆ ಎಂದು ಆರೋಪಿ ಹೇಳಿಕೊಂಡಿದ್ದಾನೆ.
ಶಾಲೆಯಲ್ಲಿ ಬಾಲಕಿಗೆ ಕಿರುಕುಳ ನೀಡುವುದು ಇದೇ ಮೊದಲಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಇತ್ತೀಚಿನ ಘಟನೆ ಬೆಳಕಿಗೆ ಬಂದಾಗ, ಹಳ್ಳಿಯ ಜನರು ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.