ಜಾರ್ಜ್‌ಟೌನ್: ಗಯಾನಾದಲ್ಲಿ ಸೋಮವಾರ ಮುಂಜಾನೆ ಶಾಲಾ ವಸತಿ ನಿಲಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 20 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿ ಜಾರ್ಜ್‌ಟೌನ್‌ನಿಂದ ದಕ್ಷಿಣಕ್ಕೆ 200 ಮೈಲಿ (320 ಕಿಲೋಮೀಟರ್) ದೂರದಲ್ಲಿರುವ ಮಹದಿಯಾ ನಗರದ ಮಾಧ್ಯಮಿಕ ಶಾಲೆಯ ವಸತಿ ನಿಲಯದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಗಯಾನೀಸ್ ಸರ್ಕಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಹಲವಾರು ಇತರ ವಿದ್ಯಾರ್ಥಿಗಳು ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಕನಿಷ್ಠ ಏಳು ಮಂದಿಯನ್ನು ಚಿಕಿತ್ಸೆಗಾಗಿ ರಾಜಧಾನಿಗೆ ರವಾನಿಸಲಾಗಿದೆ ಎಂದು ಸರ್ಕಾರ ಹೇಳಿದೆ
ಭದ್ರತಾ ಸಲಹೆಗಾರ ಜೆರಾಲ್ಡ್ ಗೌವಿಯಾ ಪ್ರಕಾರ, 12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಸೇವೆ ಸಲ್ಲಿಸುವ ಶಾಲೆಯಲ್ಲಿ ಮಧ್ಯರಾತ್ರಿಯ ನಂತರ ಬೆಂಕಿ ಕಾಣಿಸಿಕೊಂಡಿತು. ಅದಕ್ಕೆ ಕಾರಣ ಏನಿರಬಹುದು ಎಂದು ತಿಳಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.