Advertisement

ಗ್ರಾಪಂನಿಂದ ಶಾಲೆ ಅಭಿವೃದ್ಧಿ

03:01 PM Feb 01, 2020 | Suhan S |

ಯಲಬುರ್ಗಾ: ತಾಲೂಕಿನ ಗ್ರಾಪಂಗಳಿಂದ ಗ್ರಾಪಂ ವ್ಯಾಪ್ತಿಯ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಮುಂದಾಗಲಿವೆ. ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದ್ದೇನೆ ಎಂದು ತಾಪಂ ಇಒ ಡಾ| ಜಯರಾಂ ಚವಾಣ ಹೇಳಿದರು.

Advertisement

ತಾಲೂಕಿನ ಸಂಗನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಗ್ರಾಪಂ ಹಾಗೂ ಶಿಕ್ಷಣ ಇಲಾಖೆ ವತಿಯಿಂದ

ನಡೆದ ಗ್ರಾಪಂ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಗಳಿಗೆ ಅವಶ್ಯಕವಾಗಿ ಬೇಕಾಗಿರುವ ಕಾಂಪೌಂಡ್‌, ಶಾಲಾ ಮೈದಾನ ನಿರ್ಮಾಣ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವ ಕಾರ್ಯವನ್ನು ಗ್ರಾಪಂಗಳು ಕಡ್ಡಾಯವಾಗಿ ಮಾಡಲಿವೆ. ಪ್ರತಿಯೊಂದು ಶಾಲೆಯ ಮುಖ್ಯಶಿಕ್ಷಕರು ಹಾಗೂ ಎಸ್‌ ಡಿಎಂಸಿ ಸಮಿತಿ ಸದಸ್ಯರು ಗ್ರಾಪಂಗೆ ಸೌಲಭ್ಯಗಳ ಕುರಿತು ಅರ್ಜಿ ಸಲ್ಲಿಸಬೇಕು ಎಂದರು.

ಮಕ್ಕಳಿಗೆ ಕಬ್ಬಿಣದ ಕಡಲೆಯಾಗಿರುವ ಗಣಿತ ವಿಷಯದ ಬಗೆಗಿನ ಭಯ ಹೋಗಲಾಡಿಸಿ ಆತ್ಮಸ್ಥೈರ್ಯ ನೀಡಲು ಗಣಿತ ಸ್ಪರ್ಧೆ ಪೂರಕವಾಗಿದೆ ಎಂದು ತಿಳಿಸಿದರು. ಪಿಡಿಒ ರಾಮಣ್ಣ ದೊಡ್ಡಮನಿ ಮಾತನಾಡಿ, ಪರಿಕರಗಳ ಸಹಾಯದಿಂದ ಬೋಧಿ  ಸುವುದರಿಂದ ಗಣಿತವನ್ನು ಸರಳವಾಗಿ ಅರ್ಥಮಾಡಿಸಬಹುದಾಗಿದೆ. ಇದರ ಜತೆಗೆ ಸರಳ ಸೂತ್ರ ಅನುಸರಿಸಿದರೆ ಗಣಿತದಷ್ಟುಸುಲಭ ವಿಷಯ ಯಾವುದೂ ಇಲ್ಲ. ಕಷ್ಟ ಎನಿಸುವ ವಿಷಯಗಳ ಕಡೆ ಹೆಚ್ಚಿನ ಗಮನ ಹರಿಸಿದರೆ ಎಲ್ಲವೂ ಸಲೀಸಾಗುತ್ತದೆ ಎಂದು ಸಲಹೆ ನೀಡಿದರು.  ಮಕ್ಕಳಿಗೆ ಕ್ಲಿಷ್ಟವೆನಿಸುವಂತಹ ವಿಷಯಗಳನ್ನು ಸರಳ ವಿಧಾನಗಳ ಮೂಲಕ ಕಲಿಸುವ ಪ್ರಯತ್ನ ಶಿಕ್ಷಕರು ಮಾಡಬೇಕು. ವಿವಿಧ ಚಟುವಟಿಕೆ ಆಧಾರಿತ ಕಲಿಕೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಶಾಲೆಯ ಶಿಕ್ಷಕರು ಸರಿಯಾಗಿ ಮಕ್ಕಳ ವಿದ್ಯಾಭ್ಯಾಸದ ಅಭಿವೃದ್ಧಿ ಕಡೆ ವಿಶೇಷ ಗಮನ ಹರಿಸಬೇಕು. ಎಲ್ಲ ವಿಷಯಗಳಿಗಿಂತ ಮಕ್ಕಳಿಗೆ ಗಣಿತ ವಿಷಯ ಹೆಚ್ಚು ಅವಶ್ಯಕವಿದೆ. ಆದರಿಂದ ಮಕ್ಕಳಿಗೆ ಗಣಿತದ ಕುರಿತು ಸರಳ ವಿಧಾನ ಅನುಸರಿಸಿ ಪಾಠ ಬೋಧನೆ ಮಾಡಬೇಕು. ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಗುರುಗಳು ಹೇಳಿದ ಪಾಠವನ್ನು ಸರಿಯಾಗಿ ತಿಳಿದುಕೊಂಡು ಅಭ್ಯಾಸ ಮಾಡಬೇಕು ಎಂದರು.

Advertisement

ಬಸವರಾಜ ಹಳ್ಳಿ, ಲಕ್ಷ್ಮಣ್ಣ ಕೆರಳ್ಳಿ, ಎಸ್‌ ಡಿಎಂಸಿ ಪದಾಧಿಕಾರಿಗಳು, ಮುಖ್ಯಶಿಕ್ಷಕರು, ಗ್ರಾಪಂ ಸದಸ್ಯರು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next