Advertisement

Kannada Cinema; ನ.24ರಂದು ತೆರೆಗೆ ಬರಲಿದೆ ‘ಸ್ಕೂಲ್ ಡೇಸ್’

04:53 PM Nov 18, 2023 | Team Udayavani |

ಶಾಲಾ ದಿನಗಳ ಸುತ್ತ ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಇವೆಲ್ಲವೂ ಶಾಲೆಯಲ್ಲಿ ವಿದ್ಯಾರ್ಥಿಗಳು ಮಾಡಿದ ತುಂಟತನಗಳು, ಹರೆಯದ ಪ್ರೀತಿಯನ್ನು ತೋರಿಸಿವೆ. ಈಗ ಇದೇ ರೀತಿ ಶಾಲಾ ದಿನಗಳನ್ನೇ ಮುಖ್ಯವಾಗಿಟ್ಟುಕೊಂಡು ಸಿನಿಮಾವೊಂದು ತಯಾರಾಗಿದೆ. ಅದು “ಸ್ಕೂಲ್‌ ಡೇಸ್‌’. ಈ ಚಿತ್ರ ನ.24ರಂದು ತೆರೆಕಾಣುತ್ತಿದೆ.

Advertisement

ಉಮೇಶ್‌ ಎಸ್‌ ಹಿರೇಮಠ ನಿರ್ಮಾಣದಲ್ಲಿ ಸಂಜಯ್‌ ಹೆಚ್‌ ನಿರ್ದೇಶಿಸಿರುವ ಈ ಚಿತ್ರದ ಟ್ರೇಲರ್‌ ಹಾಗೂ ಹಾಡುಗಳ ಪ್ರದರ್ಶನ ಇತ್ತೀಚೆಗೆ ನಡೆಯಿತು. “ಶಾಲೆಯ ದಿನಗಳ ಕುರಿತಾದ ಚಿತ್ರವಿದು. ಅದರಲ್ಲೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸುತ್ತಲ್ಲಿನ ಕಥೆ. ಈ ಚಿತ್ರ ಸಂಪೂರ್ಣ ಉತ್ತರ ಕರ್ನಾಟಕದ ಭಾಷೆಯಲ್ಲೇ ಮೂಡಿಬಂದಿದೆ. ಉತ್ತರ ಕರ್ನಾಟಕದಲ್ಲೇ ಚಿತ್ರೀಕರಣ ನಡೆದಿದೆ. ಚಿತ್ರ ನೋಡಿದಾಗ ನಮ್ಮ ಸ್ಕೂಲ್‌ ಡೇಸ್‌… ನೆನಪಾಗುವುದು ಖಚಿತ’ ಎನ್ನುವುದು ನಿರ್ದೇಶಕ ಸಂಜಯ್‌ ಮಾತು.

“ನಾನು ಮೂಲತಃ ಉದ್ಯಮಿ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಸಿನಿಮಾ ನೋಡಿದಾಗ ನನ್ನ ಹಿಂದಿನ ದಿನಗಳು ನೆನಪಾದವು’ ಎನ್ನುವುದು ನಿರ್ಮಾಪಕ ಉಮೇಶ್‌ ಮಾತು. ಚಿತ್ರದ ಹಾಡುಗಳಿಗೆ ಕೆ.ಎಂ.ಇಂದ್ರ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಟಿಸಿರುವ ಅರ್ಜುನ್‌ ಬಳ್ಳಾರಿ, ಸಂಗಮ್‌ ಮಠದ್‌, ನೇಹಾ, ವಿವೇಕ್‌ ಜಂಬಗಿ ಸಿನಿಮಾ ಬಗ್ಗೆ ಮಾತನಾಡಿದರು

Advertisement

Udayavani is now on Telegram. Click here to join our channel and stay updated with the latest news.

Next