Advertisement
ಕಾಣಿಯೂರು ಸಮೀಪದ ದೋಳ್ಪಾಡಿ ಗ್ರಾಮದ ಸರಕಾರಿ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಡಿಸೆಂಬರ್ 14ರಂದು ಅತ್ಯಾಚಾರ ಪ್ರಯತ್ನ ನಡೆದಿತ್ತು. ಸಂತ್ರಸ್ತ ಬಾಲಕಿ ಶಾಲೆಯಿಂದ ಸಂಜೆ ಮನೆಗೆ ವಾಪಸ್ಸಾಗುತಿದ್ದ ವೇಳೆ ಮರಕ್ಕಡ ಎಂಬಲ್ಲಿ ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೋರ್ವ ವಿದ್ಯಾರ್ಥಿಯನ್ನು ತಡೆದು ಪಕ್ಕದ ಪೊದೆಗೆ ಎಳೆದೊಯ್ದು ಅತ್ಯಚಾರಕ್ಕೆ ಯತ್ನಿಸಿದ್ದ.
ಏನು ನಡೆಯಿತು ಆ ದಿನ?
ಡಿ.14ರಂದು ದೋಳ್ಪಾಡಿ ಸರಕಾರಿ ಶಾಲೆ ಮಕ್ಕಳು ಸಂಜೆ ಶಾಲೆ ಬಿಟ್ಟು ಮನೆಗೆ ವಾಪಸ್ಸಾಗುತಿದ್ದರು. ಅದೇ ಶಾಲೆಯ ಐದನೆ ತರಗತಿ ವಿದ್ಯಾರ್ಥಿನಿ ಸ್ವಲ್ಪ ಮುಂದಿನಿಂದ ಹೋಗುತ್ತಿದ್ದಳು. ಆಕೆಯ ಹಿಂದಿಂದ ಆಕೆಯ ಎಂಟು ಮಂದಿ ಸಹಪಾಠಿಗಳು ಗುಂಪಾಗಿ ತೆರಳುತಿದ್ದರು.
Related Articles
Advertisement
ಸಂತ್ರಸ್ತೆ ವಿದ್ಯಾರ್ಥಿನಿ ವ್ಯಕ್ತಿಯ ದೌರ್ಜನ್ಯಕ್ಕೆ ನಲುಗಿ ಒದ್ದಾಡುತಿದ್ದದನ್ನು ಕಂಡ ಮಕ್ಕಳ ಗುಂಪಿನಲ್ಲಿದ್ದ 11 ವರ್ಷದ ಅಕ್ಷಯ್ ತುಳು ಭಾಷೆಯಲ್ಲಿ ‘ಅಪ್ಪಗ್ ಪಂಡ್ದ್, ಇತ್ತೆ ಅಪ್ಪನ್ ಲೆತೊಂದು ಬರ್ಪೆ, ಆಯಗ್ ಕಲ್ಪಾಪೆ…’ (ಅಪ್ಪನಿಗೆ ಹೇಳಿ ಈಗ ಅಪ್ಪನ್ನನ್ನು ಕರೆದುಕೊಂಡು ಬರ್ತೇನೆ ಮತ್ತು ಕಲಿಸ್ತೇನೆ ಅವನಿಗೆ…!) ಎಂದು ಹೇಳಿ ತನ್ನ ಸಹಪಾಠಿಗಳನ್ನು ಅಲ್ಲಿಯೇ ಇರಲು ಸೂಚಿಸಿ ಆತ ಮತ್ತು ಸಹೋದರ ಅನ್ವಿತಾ (ವಯಸ್ಸು 8) 300 ಮೀ ದೂರದಲ್ಲಿರುವ ಮನೆಗೆ ಓಡಿ ಹೋಗಿ ಹೆತ್ತವರಿಗೆ ಮಾಹಿತಿ ನೀಡಿದ್ದಾರೆ.
ಮನೆಯ ಪಕ್ಕದ ಕಾಡಿನಲ್ಲಿ ಸೊಪ್ಪು ಸಂಗ್ರಹಿಸುತಿದ್ದ ಮಕ್ಕಳಿಬ್ಬರ ತಾಯಿ ಹರ್ಷಪ್ರಭ ವಿಷಯ ತಿಳಿದು ಪಕ್ಕದ ಮನೆಯವರಿಗೆ ತಿಳಿಸಿ ಅವರನ್ನೆಲ್ಲಾ ಕರೆದುಕೊಂಡು ಘಟನಾ ಸ್ಥಳಕ್ಕೆ ಓಡಿ ಬರುತ್ತಾರೆ. ಈ ಸಂದರ್ಭದಲ್ಲಿ ಮಕ್ಕಳ ಬೊಬ್ಬೆ ಹಾಗೂ ಮಕ್ಕಳಿಬ್ಬರು ‘ತಂದೆಯನ್ನು ಕರೆದುಕೊಂಡು ಬರುತ್ತೇನೆ…’ ಎಂದು ಹೇಳಿದ್ದರಿಂದ ಬೆದರಿದ ಆರೋಪಿ ಕಂಗಾಲಾಗಿ ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಈ ಘಟನೆಯಲ್ಲಿ ಬಾಲಕಿಯ ದೇಹದ ಮೇಲೆ ಪರಚಿದ ಗಾಯಗಳಾಗಿತ್ತು.
ಈ ವಿಷಯ ಊರಲ್ಲಿ ತಿಳಿಯುತ್ತಿದ್ದಂತೆ ಎಲ್ಲರೂ ಸೇರಿಕೊಂಡು ಪರಾರಿಯಾದ ಆರೋಪಿಯ ಹುಡುಕಾಟಕ್ಕೆ ಯತ್ನಿಸುತ್ತಾರೆ. ಸಂತ್ರಸ್ತ ಬಾಲಕಿಯ ಹೆತ್ತವರು ಕಡಬ ಠಾಣೆಯಲ್ಲಿ ದೂರನ್ನು ಸಹ ನೀಡಿದ್ದರು.
ಹೆತ್ತವರ ದೂರಿನ ಆಧಾರದಲ್ಲಿ ಪ್ರಕರಣವನ್ನು ದಾಖಲಿಸಿಕೊಂಡ ಕಡಬ ಪೊಲೀಸರು ಎಡಮಂಗಲ ಗ್ರಾಮದ ಕೊಳಂಬೆ ನಿವಾಸಿ 34 ವರ್ಷದ ಶಿವರಾಮ್ ಎನ್ನುವ ಆರೋಪಿಯನ್ನು ಡಿಸೆಂಬರ್ 16 ಸೋಮವಾರದಂದು ಆತನ ಮನೆಯಿಂದಲೇ ಬಂಧಿಸುತ್ತಾರೆ. ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ 15 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾನೆ.ಆ ವ್ಯತಿರಿಕ್ತ ಸನ್ನಿವೇಶದಲ್ಲಿಯೂ ಶಾಲಾ ಬಾಲಕರು ತೋರಿದ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಎಲ್ಲರೂ ಪ್ರಶಂಸಿಸುತ್ತಿದ್ದಾರೆ. ಡಿ.25ರಂದು ಸ್ಥಳಿಯವಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಎಂಟು ಮಂದಿ ಮಕ್ಕಳನ್ನು ಅವರ ಈ ವಿಶಿಷ್ಟ ಸಾಧನೆಗಾಗಿ ಸಮ್ಮಾನಿಸಲಾಯಿತು. ಮುಗ್ಧ ಮನಸ್ಸಿನ ಮಕ್ಕಳ ಧೈರ್ಯ ಹಾಗೂ ಸಮಯಪ್ರಜ್ಞೆಯಿಂದ ಸಂಭವಿಸಬಹದಾಗಿದ್ದ ಸಂಭಾವ್ಯ ಅನಾಹುತವೊಂದು ತಪ್ಪಿದ್ದು ಸಂತ್ರಸ್ತ ಬಾಲಕಿಯ ಹೆತ್ತವರು ನಿಟ್ಟುಸಿರುಬಿಟುವಂತಾಗಿದೆ. ಆಪತ್ತಿನ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಸಮಯಪ್ರಜ್ಞೆ ಮೆರೆಯಬೇಕೆಂಬುದುನ್ನು ಈ ಪುಟಾಣಿಗಳು ತೋರಿಸಿಕೊಟ್ಟಿರುವುದು ವಿಶೇಷವೇ ಸರಿ.