Advertisement

ಮಾದರಿಯಾಗಲಿ ಶತಮಾನೋತ್ತರದ ಶಾಲೆ

08:03 PM Sep 22, 2021 | Team Udayavani |

ಬೆಳ್ತಂಗಡಿ: ತಾಲೂಕಿನ ಕೇಂದ್ರ ಸ್ಥಳದ ಕೋಟ್ಲಾಯ ಗುಡ್ಡೆ ಕೆಳಭಾಗದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡ ತಾಲೂಕಿನ ಎರಡನೇ ಅತೀ ಹಿರಿಯ ದ.ಕ. ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಕರ ಅಗತ್ಯಗಳು, ಕಟ್ಟಡದ ಲಭ್ಯತೆಗಳನ್ನು ಸಾಕಾರಗೊಳಿಸದ್ದರ ಪರಿಣಾಮ ಶಾಲೆ ಶತಮಾನಗಳಷ್ಟೆ ಬಡವಾಗಿದೆ.

Advertisement

1905ರಲ್ಲಿ ಆರಂಭವಾಗಿರುವ ಶಾಲೆಗೆ 116 ವರ್ಷ ಸಂದಿದೆ. ಬ್ರಿಟಿಷ್‌ ಆಡಳಿತದ ಅವಧಿಯಲ್ಲಿ ಆರಂಭ ಗೊಂಡಿದ್ದ ಶಾಲೆ ಈಗಲೋ ಆಗಲೋ ಎಂಬಂತಿರುವ ಹೆಂಚಿನ ಕಟ್ಟಡದಲ್ಲೇ ಮಕ್ಕಳು ಶಿಕ್ಷಣ ಪಡೆ ಯುತ್ತಿದ್ದಾರೆ. ಯುನಿಸೆಫ್‌ ಮಾದರಿ ಶಿಕ್ಷಣ ಮೂಲಕ ಮಕ್ಕಳಿಗೆ ಪ್ರಾಯೋಗಿಕ ಶಿಕ್ಷಣ ಒದಗಿಸಲಾಗುತ್ತಿದೆ. ಜತೆಗೆ ಲೈಫ್‌ ಲ್ಯಾಬ್‌ನ್ನು ಹೊಂದಿದೆ.

ಶಾಲೆಯ ಅಭಿವೃದ್ಧಿಗೆ ಕೃಷ್ಣ ಪಡ್ವೆಟ್ನಾಯ, ವೆಂಕಟಕೃಷ್ಣ ಹೆಬ್ಟಾರ್‌, ಅಣ್ಣಪ್ಪಯ್ಯ ಮಾಸ್ಟರ್‌ ದಾನವಾಗಿ ನೀಡಿದ 4.57 ಎಕ್ರೆ ಸ್ಥಳವಿದೆ. ಕಳೆದ ವರ್ಷ 1ರಿಂದ 8ನೇ ತರಗತಿ ವರೆಗೆ 122 ಮಕ್ಕಳ ದಾಖಲಾತಿಯಿದ್ದು, ಪ್ರಸಕ್ತ ವರ್ಷ 170 ಮಕ್ಕಳ ದಾಖಲಾತಿಯಾಗಿದೆ. ಈ ಬಾರಿ ಸರಕಾರಿ ಶಾಲೆಗಳತ್ತ ಮಕ್ಕಳು ಮುಖ ಮಾಡಿದ್ದರಿಂದ ಒಂದು ವರ್ಷದ ಅವಧಿಯಲ್ಲಿ 48 ಮಕ್ಕಳ ಏರಿಕೆಯಾಗಿದೆ.

ಸದ್ಯದ ಆವಶ್ಯಕತೆ:

ಶಾಸಕ ಹರೀಶ್‌ ಪೂಂಜ ಅವರ ಚಿಂತನೆಯಲ್ಲಿ 20 ಕೋಟಿ ರೂ. ಅನು ದಾನದಲ್ಲಿ ಇದೇ ಶಾಲೆಯಿರುವ ಸ್ಥಳದಲ್ಲಿ ಮಾದರಿ ಶಾಲೆ ನಿರ್ಮಿಸಲು ನೀಲ ನಕಾಶೆ ಸಜ್ಜಾಗಿದೆ. ಹಾಗಾದಲ್ಲಿ ಸರಕಾರಿ ಶಾಲೆಗಳಲ್ಲಿ ಪೈಕಿ ಅತ್ಯುತ್ತಮ ಶಾಲೆಯಾಗಿ ಹೊರಹೊಮ್ಮಲಿದೆ. ಆದರೆ ನಿರ್ಮಾಣಕ್ಕೆ ಕನಿಷ್ಠ 2 ವರ್ಷಗಳ ಅವಧಿ ಬೇಕೆಂದು ಅಂದಾಜಿಸಲಾಗಿದೆ. ಸದ್ಯ ಈ ಶಾಲೆಯಲ್ಲಿ ಕಂಪ್ಯೂಟರ್‌ ಕೊಠಡಿ ಇದ್ದರೂ 5 ಕಂಪ್ಯೂಟರ್‌ ಆವಶ್ಯವಿದೆ. 5 ಸ್ಮಾರ್ಟ್‌ ಟಿವಿ, ಎಲ್‌.ಕೆ.ಜಿ., ಯು.ಕೆ.ಜಿ. 1, 2, 3 ತರಗತಿಗೆ 5 ಹೊಸ ಕಟ್ಟಡಗಳ ಆವಶ್ಯಕತೆಯಿದೆ.

Advertisement

ಆಂಗ್ಲಮಾಧ್ಯಮವಿದೆ; ಶಿಕ್ಷಕರಿಲ್ಲ  :

ಪ್ರಸಕ್ತ 1ನೇ ತರಗತಿಯಿಂದ 8ನೇ ತರಗತಿವರೆಗೆ ಕನ್ನಡ ಮಾಧ್ಯಮ, ಅದರಲ್ಲಿ 1ರಿಂದ 3ನೇ ತರಗತಿ ಆಂಗ್ಲ ಮಾಧ್ಯಮವಿದೆ. ಎಲ್‌.ಕೆ.ಜಿಯಲ್ಲಿ 20 ಮಕ್ಕಳು, ಯು.ಕೆ.ಜಿ.ಯಲ್ಲಿ 14 ಮಕ್ಕಳಿದ್ದಾರೆ. ಇಲ್ಲಿ ಒಟ್ಟು 7 ಶಿಕ್ಷಕರ ಹುದ್ದೆಗಳಿದ್ದು, 4 ಮಾತ್ರ ಭರ್ತಿಯಾಗಿವೆ. ಈ ಪೈಕಿ ಆಂಗ್ಲ ಮಾಧ್ಯಮಕ್ಕೆ ಶಿಕ್ಷಕರೇ ಇಲ್ಲ. ಇರುವ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಇರುವ ಕೊಠಡಿಗಳಲ್ಲಿ ಗ್ರಂಥಾಲಯ, ಪ್ರಯೋಗಾಲಯ ಇರುವುದರಿಂದ ಕೊಠಡಿ ಕೊರತೆ ಕಂಡುಬಂದಿದೆ. 4 ಎಕ್ರೆ ಸ್ಥಳವಿದ್ದರೂ ವ್ಯವಸ್ಥಿತ ಆಟದ ಮೈದಾನವಿಲ್ಲ. ಮಕ್ಕಳನ್ನು ಶಾಲೆಗೆ ಸೆಳೆಯಲು ಪೂರ್ಣಪ್ರಮಾಣದ ಹುದ್ದೆಗಳೂ ಮಂಜೂರಾಗಬೇಕಿದೆ.

ಲಾಕ್‌ಡೌನ್‌ನಿಂದಾಗಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಇದನ್ನು ಮತ್ತಷ್ಟು ಹೆಚ್ಚಿಸಲು ನಮ್ಮಲ್ಲಿ ಗುಣಾ ತ್ಮಕ ಶಿಕ್ಷಣದ ಜತೆ ಮೂಲ ಸೌಲಭ್ಯ ಪಡೆ ಯಲು ಹಳೆ ವಿದ್ಯಾರ್ಥಿಗಳು, ದಾನಿಗಳು, ಶಾಸಕರ ನೆರವಿನಿಂದ ಪ್ರಯತ್ನಿ ಸಲಾಗುವುದು. ಮಾದರಿ ಶಾಲೆ ಆಗುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿ ಸಬೇಕಾಗಿದೆ  ಸುರೇಶ್‌ ಎಂ., ಮುಖ್ಯೋಪಾಧ್ಯಾಯ

 

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next