Advertisement

ವಿದ್ಯಾರ್ಥಿ ವೇತನ ಹೆಚ್ಚಳ

11:15 AM Jul 23, 2018 | |

ಹೊಸದಿಲ್ಲಿ: ಅಲ್ಪಸಂಖಾಕ ಸಮುದಾಯದ ಹೆಣ್ಣುಮಕ್ಕಳಿಗೆ ನೀಡಲಾಗುವ ವಿದ್ಯಾರ್ಥಿವೇತನದ ಪ್ರಮಾಣವನ್ನು ಶೇ.15ರಷ್ಟು ಹೆಚ್ಚಳ ಮಾಡಲಾಗಿದೆ. ಕೇಂದ್ರ ಅಲ್ಪಸಂಖ್ಯಾಕ‌ ವ್ಯವಹಾರಗಳ ಸಚಿವಾಲಯದ ಅಡಿ ಬರುವ ಮೌಲಾನಾ ಆಜಾದ್‌ ಶಿಕ್ಷಣ ಪ್ರತಿಷ್ಠಾನ ಈ ನಿರ್ಧಾರ ಕೈಗೊಂಡಿದ್ದು, ಬೇಗಂ ಹಜ್ರತ್‌ ಮಹಲ್‌ ರಾಷ್ಟ್ರೀಯ ವಿದ್ಯಾರ್ಥಿ ವೇತನಕ್ಕೆ ಮೀಸಲಿಡುವ ಮೊತ್ತವನ್ನು ಹೆಚ್ಚಳ ಮಾಡಲು ತೀರ್ಮಾನಿಸಿದೆ. 2017-18ರಲ್ಲಿ 1.15 ಲಕ್ಷ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ರಿಜ್ವನೂರ್‌ ರೆಹಮಾನ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next