Advertisement

92ನೇ ಜನ್ಮದಿನ ಆಚರಿಸಿಕೊಂಡ ಆಡ್ವಾಣಿ

09:56 AM Nov 10, 2019 | Team Udayavani |

ಹೊಸದಿಲ್ಲಿ: ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ. ಆಡ್ವಾಣಿ ಶುಕ್ರವಾರ 92ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಆಡ್ವಾಣಿಯವರ ನಿವಾಸಕ್ಕೆ ತೆರಳಿ ಶುಭ ಹಾರೈಸಿದ್ದಾರೆ. ಇದರ ಜತೆಗೆ ಟ್ವೀಟ್‌ ಮಾಡಿರುವ ಅವರು, ‘ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಬಿಜೆಪಿಯನ್ನು ಪ್ರಮುಖ ಶಕ್ತಿಯನ್ನಾಗಿ ಪರಿವರ್ತಿಸಿದ ಹೆಗ್ಗಳಿಕೆ ಆಡ್ವಾಣಿಯವರದ್ದು. ವಿದ್ವಾಂಸ, ರಾಜನೀತಿಜ್ಞ ಮತ್ತು ದೇಶದಲ್ಲಿ ಎಲ್ಲರಿಂದ ಗೌರವಕ್ಕೆ ಪಾತ್ರರಾಗಿರುವ ಅವರಿಗೆ ಜನ್ಮದಿನದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

Advertisement

ಪ್ರಜಾಪ್ರಭುತ್ವ ವ್ಯವಸ್ಥೆಗಾಗಿ ಯಾವುದೇ ತತ್ವ-ಸಿದ್ಧಾಂತಗಳ ಜತೆಗೆ ಅವರು ರಾಜಿ ಮಾಡಿ ಕೊಂಡಿ ರಲಿಲ್ಲ ಎಂದೂ ಮೋದಿ ಮತ್ತೂಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ಗಣ್ಯರು ಆಡ್ವಾಣಿ ಅವರಿಗೆ ಶುಭ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next