Advertisement

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅತೀ ಹಿಂದುಳಿದ ಸಮುದಾಯದ ಮೀಸಲಾತಿಗೆ ಸುಪ್ರೀಂ ಸಮ್ಮತಿ

02:45 PM Aug 01, 2024 | Team Udayavani |

ನವದೆಹಲಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಲ್ಲಿನ ಅತೀ ಹಿಂದುಳಿದ ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿಒಳ ಮೀಸಲಾತಿಯನ್ನು ನೀಡುವ ಪ್ರಸ್ತಾಪಕ್ಕೆ ಸುಪ್ರೀಂಕೋರ್ಟ್‌ ನ ಏಳು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ಗುರುವಾರ (ಆಗಸ್ಟ್‌ 01) ಸಮ್ಮತಿ ಸೂಚಿಸಿದೆ.

Advertisement

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅತೀ ಹಿಂದುಳಿದ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವ ಬಗ್ಗೆ ಸುಪ್ರೀಂಕೋರ್ಟ್‌ ಚೀಫ್‌ ಜಸ್ಟೀಸ್‌ ಡಿ.ವೈ.ಚಂದ್ರಚೂಡ್‌ ಅವರನ್ನೊಳಗೊಂಡ ಏಳು ಸದಸ್ಯರ ಸಾಂವಿಧಾನಿಕ ಪೀಠ 6:1ರ ಬಹುಮತದಲ್ಲಿ ಮಹತ್ವದ ತೀರ್ಪು ನೀಡಿದ್ದು, ಜಸ್ಟೀಸ್‌ ಬೇಲಾ ತ್ರಿವೇದಿ ಈ ಪ್ರಸ್ತಾಪಕ್ಕೆ ಅಸಮ್ಮತಿ ಸೂಚಿಸಿದ್ದರು.

ಆಂಧ್ರಪ್ರದೇಶ Vs ಇ.ವಿ. ಚಿನ್ನಯ್ಯ ಅವರ ಪ್ರಕರಣದಲ್ಲಿನ 2004ರ ಪಂಚ ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಪೀಠ ನೀಡಿರುವ ತೀರ್ಪನ್ನು ತಳ್ಳಿ ಹಾಕಿದೆ. ಆ.1ರಂದು ನೀಡಿರುವ ಏಳು ಜಡ್ಜ್‌ ಗಳ ಪೀಠದಲ್ಲಿ ಜಸ್ಟೀಸ್‌ ಬಿಆರ್‌ ಗವಾಯಿ, ಜಸ್ಟೀಸ್‌ ವಿಕ್ರಮ್‌ ನಾಥ್‌, ಜಸ್ಟೀಸ್‌ ಪಂಕಜ್‌ ಮಿಥಾಲ್‌, ಜಸ್ಟೀಸ್‌ ಮನೋಜ್‌ ಮಿಶ್ರಾ ಮತ್ತು ಜಸ್ಟೀಸ್‌ ಸತೀಶ್‌ ಚಂದ್ರ ಮಿಶ್ರ ಅವರನ್ನೊಳಗೊಂಡಿದೆ.

ಸಮಾಜದಲ್ಲಿ ವ್ಯವಸ್ಥಿತವಾದ ತಾರತಮ್ಯವನ್ನು ಎದುರಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಮೇಲಕ್ಕೇರಲು ಅಸಾಧ್ಯವಾಗಿದೆ. ಸಂವಿಧಾನದ 14 ಕಲಂ ಜಾತಿಯ ಒಳ ಮೀಸಲಾತಿಗೆ ಅವಕಾಸ ಕಲ್ಪಿಸಿದೆ. ಐತಿಹಾಸಿಕ ಮತ್ತು ಪ್ರಾಯೋಗಿಕ ಪುರಾವೆಗಳು ಪರಿಶಿಷ್ಟ ಜಾತಿ ಸಾಮಾಜಿಕವಾಗಿ ಭಿನ್ನಜಾತಿಯ ವರ್ಗವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಚೀಫ್‌ ಜಸ್ಟೀಸ್‌ ಡಿ.ವೈ.ಚಂದ್ರಚೂಡ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next