Advertisement

ಅನುಸೂಚಿತ ಜಾತಿ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆ

12:45 PM Dec 15, 2018 | Team Udayavani |

ಬೀದರ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ಅಧ್ಯಕ್ಷತೆಯಲ್ಲಿ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡ (ದೌರ್ಜನ್ಯ ನಿಯಂತ್ರಣ) 1995 ನಿಯಮ 17ರ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆ ನಡೆಯಿತು.

Advertisement

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರೇಮಸಾಗರ ದಾಂಡೇಕರ ಅವರು, 2016-17 ಹಾಗೂ 2018-19ನೇ ಆರ್ಥಿಕ ಸಾಲಿನ ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಸಂತ್ರಸ್ತರಿಗೆ ನೀಡಲಾದ ಪರಿಹಾರ ಧನದ ಬಗ್ಗೆ ಮಾಹಿತಿ ನೀಡಿದರು. 2016-17ನೇ ಸಾಲಿನಲ್ಲಿ ಒಟ್ಟು 31 ಪ್ರಕರಣಗಳಿಗೆ 40,59,500 ರೂ. ಪರಿಹಾರ ಧನ, 2017-18ನೇ ಸಾಲಿನಲ್ಲಿ 29 ಪ್ರಕರಣಗಳಿಗೆ 29,90,000 ರೂ. ಪರಿಹಾರ ಧನ ಮತ್ತು 2018-19ನೇ ಸಾಲಿನಲ್ಲಿ ಡಿಸೆಂಬರ್‌ 12ರ ವರೆಗೆ ಒಟ್ಟು 9 ಪ್ರಕರಣಗಳಿಗೆ 33,97,500 ರೂ. ಪರಿಹಾರ ಧನವನ್ನು ಮಂಜೂರು ಮಾಡಲಾಗಿದೆ. ಹೊಸದಾಗಿ ಬಂದ ಏಳು ಅರ್ಜಿಗಳು ಬಾಕಿ ಇವೆ ಎಂದು ಸಭೆಗೆ ವಿವರಿಸಿದರು.

ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಬಾಕಿ ಪ್ರಕರಣಗಳ ವಿಲೇವಾರಿಗೆ ಒತ್ತು ಕೊಡಲು ಸೂಚಿಸಿದರು. ಸಭೆಯಲ್ಲಿ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡ 1995 ನಿಯಮ 17ರ ರಿತ್ಯ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ಗೋವಿಂದ ಮಹಾರಾಜರು, ಎಂ.ಎಸ್‌. ಕಟಗಿ, ಟಿ.ಜೆ. ಹಾದಿವಾಗಿ, ಬೀದರ ಡಿಎಸ್‌ಪಿ ಎಸ್‌.ವೈ.ಹುಣಸಿಕಟ್ಟಿ, ಭಾಲ್ಕಿ ಡಿಎಸ್‌ಪಿ ವೆಂಕನಗೌಡ ಪಾಟೀಲ, ಹುಮನಾಬಾದ್‌ ಡಿಎಸ್‌ಪಿ ಮಹೇಶ್ವರಪ್ಪ, ವಿವಿಧ ತಾಲೂಕುಗಳ
ತಹಶೀಲ್ದಾರರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next