Advertisement
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿಯ ಒಟ್ಟು 16 ನಿರ್ದೇಶಕ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ, ಬ್ಯಾಂಕ್‌ನ ಹಾಲಿ ಅಧ್ಯಕ್ಷ ಡಾ|ಎಂ. ಎನ್. ರಾಜೇಂದ್ರ ಕುಮಾರ್ ನೇತೃತ್ವದ ಸಹಕಾರ ಬಳಗವು ಎಲ್ಲ 16 ಸ್ಥಾನಗಳನ್ನು ಗೆಲ್ಲುವ ಮೂಲಕದಾಖಲೆ ನಿರ್ಮಿಸಿದೆ. ಇನ್ನು ಒಟ್ಟು 14 ಸ್ಥಾನಕ್ಕೆಸ್ಪರ್ಧಿಸಿದ್ದ ಸಹಕಾರಿ ಭಾರತಿಯ ಎಲ್ಲ ಅಭ್ಯರ್ಥಿಗಳು ಸೋತಿದ್ದು, ಯಾವುದೇ ಸ್ಥಾನ ಪಡೆದುಕೊಂಡಿಲ್ಲ.
ಉಪ ವಿಭಾಗ ಆಯುಕ್ತ ರವಿಚಂದ್ರ ಚುನಾವಣಾಧಿಕಾರಿಯಾಗಿದ್ದರು. ಚುನಾವಣೆ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಬ್ಯಾಂಕ್ ಆವರಣದಲ್ಲಿ ಸಹಕಾರ ಬಳಗದ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಚುನಾವಣೆಗೆ ಸ್ಪರ್ಧಿಸಿದ್ದ ಡಾ|ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದ 16 ಸ್ಪರ್ಧಿಗಳಾದ ಭಾಸ್ಕರ್ ಎಸ್.
ಕೋಟ್ಯಾನ್, ವಿನಯ್ ಕುಮಾರ್ ಸೂರಿಂಜೆ, ಕೆ. ಹರೀಶ್ಚಂದ್ರ, ಎಸ್. ರಾಜು ಪೂಜಾರಿ, ಎಂ. ಮಹೇಶ್ ಹೆಗ್ಡೆ, ದೇವಿಪ್ರಸಾದ್ ಶೆಟ್ಟಿ, ಬಿ.ಅಶೋಕ್ ಕುಮಾರ್ ಶೆಟ್ಟಿ, ಕೆ.ಎಸ್. ದೇವರಾಜ್, ಶಶಿಕುಮಾರ್ ರೈ.ಬಿ, ಎಂ. ವಾದಿರಾಜ ಶೆಟ್ಟಿ, ಬಿ.ನಿರಂಜನ, ಟಿ.ಜಿ. ರಾಜರಾಮ ಭಟ್, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಜೈರಾಜ್ ಬಿ.ರೈ, ಎಸ್.ಬಿ.ಜಯರಾಮ ರೈ ಗೆಲುವು ಸಾಧಿಸಿದ್ದಾರೆ. ಸುಳ್ಯ, ಪುತ್ತೂರು ಸಹಿತ ಕೆಲವು ತಾಲೂಕುಗಳಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಸಹಕಾರಿ ಭಾರತಿ ಮೇಲುಗೈ ಹೊಂದಿದ್ದರೂ, ಸದಸ್ಯರ ಅಡ್ಡ ಮತದಾನದ ಪರಿಣಾಮ ಅವರು ಮತ ಕಳೆದುಕೊಳ್ಳುವಂತಾಯಿತು. ದಕ್ಷಿಣ ಕನ್ನಡ ಜಿಲ್ಲಾ
ಕೇಂದ್ರ ಸಹಕಾರ ಬ್ಯಾಂಕ್‌ಗೆ ಮತ್ತೆ ಅಧ್ಯಕ್ಷರಾಗಿ ಮುಂದುವರಿಯುವ ಅವಕಾಶವನ್ನು ಡಾ|ಎಂ.ಎನ್. ರಾಜೇಂದ್ರ ಕುಮಾರ್ ಪಡೆದುಕೊಂಡಿದ್ದಾರೆ.
Related Articles
ನಿರ್ಮಿಸಿರುವ ರಾಜೇಂದ್ರ ಕುಮಾರ್‌ಗೆ 6ನೇ ಬಾರಿಗೆ ಅಧ್ಯಕ್ಷರಾಗಿ ಮುಂದುವರಿಯುವ ಅದೃಷ್ಟ ಈ ಭರ್ಜರಿ ಗೆಲುವಿನೊಂದಿಗೆ ಒಲಿದು ಬಂದಿದೆ. ಒಂದು ವೇಳೆ, 6ನೇ ಬಾರಿಗೆ ಮುಂದುವರಿದರೆ, ಮತ್ತೆ ಮುಂದಿನ 5 ವರ್ಷಗಳಿಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾಗುವ ಮೂಲಕ ಬರೋಬ್ಬರಿ 30 ವರ್ಷಗಳ ಸುದೀರ್ಘ ಅವಧಿಗೆ ಅಧಿಕಾರಗಾದಿ ಹೊಂದುವ ಮೂಲಕ ಮತ್ತೂಂದು ದಾಖಲೆ ನಿರ್ಮಿಸಲಿದ್ದಾರೆ.
Advertisement
ಸಹಕಾರ ಬಳಗದ ಗೆಲುವು: ಫಲಿತಾಂಶ ಪ್ರಕಟವಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ|ಎಂ. ಎನ್. ರಾಜೇಂದ್ರ ಕುಮಾರ್ ಅವರು, ಸಹಕಾರಕ್ಷೇತ್ರದಲ್ಲಿ ಕಳೆದ 25 ವರ್ಷದಲ್ಲಿ ಅಧ್ಯಕ್ಷ ಸ್ಥಾನದಿಂದ ನಾನು ಸಹಕಾರಿ ಕ್ಷೇತ್ರದ ಬೆಳವಣಿಗೆಯ ಹಿತದೃಷ್ಟಿಯಿಂದ ಸೇವೆ ಸಲ್ಲಿಸಿದ್ದೇನೆ. ಅವಿರೋಧವಾಗಿ ಆಯ್ಕೆಯಾಗುತ್ತಿದ್ದ ಬ್ಯಾಂಕ್‌ನಲ್ಲಿ ಈ ಬಾರಿ ಚುನಾವಣೆ ನಡೆದಿದೆ. 16 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 16 ಸ್ಥಾನಗಳನ್ನು ಕೂಡ ನಮ್ಮ ನೇತೃತ್ವದ ಸಹಕಾರಿ ಬಳಗ ಗೆದ್ದುಕೊಂಡಿದೆ ಎಂಬುದು ಸಂತಸದ ವಿಚಾರ ಎಂದರು. ಅಭಿವೃದ್ಧಿ ಯ ಏಕಮೇವ ಕಾರಣದಿಂದ ನಮ್ಮ ಸಹಕಾರಿ ಬಳಗ ಮುಂದಿನ ದಿನಗಳಲ್ಲಿ ಹೊಸ ಹೆಜ್ಜೆಗಳೊಂದಿಗೆ ಮುನ್ನಡೆಯಲಿದ್ದೇವೆ. ಸಹಕಾರಿ ಕ್ಷೇತ್ರದ ಇತರ ಹಂತಗಳಲ್ಲಿಯೂ ನಮ್ಮ ಸಂಘಟನೆ ಸ್ಪರ್ಧೆಗೆ ನಿರ್ಧರಿಸಲಿದೆ. ಮತದಾನದ ದಿನದವರೆಗೆ ನಮಗೆ ರಾಜಕೀಯ ವಿಚಾರವಿರುತ್ತದೆ. ಆದರೆ ಫಲಿತಾಂಶ ಬಂದ ಬಳಿಕ ನಾವೆಲ್ಲ ಸಹಕಾರಿಗಳು ಎಂಬ ಮನೋಭಾವ ನಮ್ಮದು. ಎಲ್ಲರನ್ನೂ ಜತೆಯಾಗಿ
ಕರೆದುಕೊಂಡು ಮುನ್ನಡೆಯುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗುವುದು ಎಂದರು. ರಾಜಕೀಯ ಸೇರ್ಪಡೆ ಕುರಿತ ಪ್ರಶ್ನೆಗೆ ಉತ್ತರಿಸಿದ ರಾಜೇಂದ್ರ ಕುಮಾರ್, ಇತ್ತೀಚೆಗೆ ನೆಹರೂ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದೇನೆ. ಇಲ್ಲಿಯವರೆಗೆ ರಾಜಕೀಯ ಗೊತ್ತಿಲ್ಲ. ಮುಂದೆ ಏನು ಎಂದು ಗೊತ್ತಿಲ್ಲ. ಆದರೆ, ರಾಜಕೀಯ ಬರುವುದಾದರೆ ನಾನೆಂದೂ ನನ್ನ ಇಷ್ಟದ ಸಹಕಾರ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಜೇತ
16 ನಿರ್ದೇಶಕರು ಭಾಗವಹಿಸಿದ್ದರು.