Advertisement

ಎಸ್‌ಸಿಡಿಸಿಸಿ ಬ್ಯಾಂಕ್‌ ಡಾ|ಎಂ.ಎನ್‌.ಆರ್‌. 6ನೇ ಅವಧಿಗೆ ಪುನರಾಯ್ಕೆ

02:16 PM Apr 03, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಎಸ್‌ಸಿಡಿಸಿಸಿ ಬ್ಯಾಂಕ್‌) ನಅಧ್ಯಕ್ಷರಾಗಿ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಸತತ 6ನೇ ಅವಧಿಗೆ ಪುನರಾಯ್ಕೆಗೊಂಡಿದ್ದಾರೆ. ವಿನಯಕುಮಾರ್‌ ಸೂರಿಂಜೆ ಉಪಾಧ್ಯಕ್ಷ ರಾಗಿ ಪುನರಾಯ್ಕೆಗೊಂಡಿ ದ್ದಾರೆ.

Advertisement

ಮಂಗಳವಾರ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಮಂಗಳೂರು ಉಪವಿಭಾಗದ ಆಯುಕ್ತ ರವಿಚಂದ್ರ ನಾಯಕ್‌ ಚುನಾವಣ ಪ್ರಕ್ರಿಯೆ ನಡೆಸಿಕೊಟ್ಟರು.

1994ರಲ್ಲಿ ಅಧಿಕಾರ ವಹಿಸಿ ಕೊಂಡಾಗ ಒಟ್ಟು ಠೇವಣಿ 64 ಕೋಟಿ ರೂ., ಹೊರ ಬಾಕಿ ಸಾಲ 46 ಕೋಟಿ ರೂ., ಲಾಭ 40 ಲಕ್ಷ ರೂ. ಮಾತ್ರವಿತ್ತು. ಆದರೆ ಇಂದು ಬ್ಯಾಂಕಿನ ಠೇವಣಿ 3,886 ಕೋಟಿ ರೂ., ಒಟ್ಟು 3,702 ಕೋಟಿ ರೂ. ಸಾಲ ವಿತರಿಸಿದ್ದು, ಒಟ್ಟು ವ್ಯವಹಾರ 7,588 ಕೋಟಿ ರೂ. ಆಗಿರುತ್ತದೆ. ಕೇವಲ 18 ಶಾಖೆಗಳಿದ್ದ ಈ ಬ್ಯಾಂಕ್‌ ಈಗ 106 ಶಾಖೆಗಳನ್ನು ಹೊಂದಿದೆ.

ಎಸ್‌ಸಿಡಿಸಿಸಿ ಬ್ಯಾಂಕಿನ ಎಲ್ಲ ಶಾಖೆಗಳು ಗಣಕೀಕರಣಗೊಂಡು ಇಂಟರ್‌ನೆಟ್‌ ಸಂಪರ್ಕ ಹೊಂದಿ, ಕೋರ್‌ ಬ್ಯಾಂಕಿಂಗ್‌ ಸೇವೆಯನ್ನು ನೀಡುತ್ತಿವೆ. ಗ್ರಾಹಕರ ಮನೆ ಬಾಗಿ ಲಿಗೆ ಬ್ಯಾಂಕ್‌ ಎನ್ನುವ ಆಶಯ ದೊಂದಿಗೆ ಮೊಬೈಲ್‌ ಬ್ಯಾಂಕಿಂಗನ್ನು ಕಾರ್ಯ ರೂಪಕ್ಕೆ ತಂದ ಹೆಗ್ಗಳಿಕೆ ಇವರದು. ರೈತರಿಗೆ ಎಸ್‌ಸಿಡಿಸಿಸಿ ಬ್ಯಾಂಕಿನ ಮೂಲಕ ರುಪೇ ಕಿಸಾನ್‌ ಕ್ರೆಡಿಟ್‌ ಕಾರ್ಡನ್ನು ನೀಡುವ ಮೂಲಕ ಚಾರಿತ್ರಿಕ ದಾಖಲೆಗೈದಿ ದ್ದಾರೆ.

ಪ್ರಸ್ತುತ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ
ರಾಗಿರುವ ಅವರು ಇಪ್ಕೋ ರಾಷ್ಟ್ರೀಯ ಸಂಸ್ಥೆ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕಿನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕಿನ ಅಧ್ಯಕ್ಷರಾಗಿ 2005ರಿಂದ 2010ರ ವರೆಗೆ ಕಾರ್ಯ ನಿರ್ವಹಿಸಿದ್ದಾರೆ.

Advertisement

ವಿನಯ ಕುಮಾರ್‌ ಉಪಾಧ್ಯಕ್ಷ ಆಡಳಿತ ಮಂಡಳಿ ಸಭೆಯಲ್ಲಿ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ನಿರ್ದೇಶಕರಾದ ಬಿ. ನಿರಂಜನ್‌, ಟಿ.ಜಿ. ರಾಜಾರಾಮ ಭಟ್‌, ಭಾಸ್ಕರ್‌ ಎಸ್‌. ಕೋಟ್ಯಾನ್‌, ಎಂ.ವಾದಿರಾಜ ಶೆಟ್ಟಿ, ಕೆ.ಎಸ್‌. ದೇವರಾಜ್‌, ರಾಜು ಪೂಜಾರಿ, ಶಶಿಕುಮಾರ್‌ ರೈ, ಬಿ, ದೇವಿಪ್ರಸಾದ್‌ ಶೆಟ್ಟಿ, ಬೆಳಪು, ಎಸ್‌.ಬಿ. ಜಯರಾಮ್‌ ರೈ, ಮೋನಪ್ಪ ಶೆಟ್ಟಿ ಎಕ್ಕಾರು,ಬಿ. ಅಶೋಕ್‌ ಕುಮಾರ್‌ ಶೆಟ್ಟಿ, ಮಹೇಶ್‌ ಹೆಗ್ಡೆ, ಕೆ. ಹರಿಶ್ಚಂದ್ರ, ಕೆ. ಜೈರಾಜ್‌ ಬಿ. ರೈ, ಅಪೆಕ್ಸ್‌ ಬ್ಯಾಂಕ್‌ ಪ್ರತಿನಿಧಿ ಸದಾಶಿವ ಉಳ್ಳಾಲ, ಸಹಕಾರ ಸಂಘಗಳ ಉಪ ನಿಬಂಧಕ ಸುರೇಶ್‌ ಗೌಡ, ಬ್ಯಾಂಕಿನ ಸಿಇಒ ರವೀಂದ್ರ ಬಿ., ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಂಜುನಾಥ್‌ ಸಿಂಗ್‌, ಬ್ಯಾಂಕಿನ ಮಹಾ ಪ್ರಬಂಧಕ ಗೋಪಿನಾಥ್‌ ಭಟ್‌, ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ತ್ರಿವೇಣಿ ರಾವ್‌ ಉಪಸ್ಥಿತರಿದ್ದರು.

25 ವರ್ಷ ಅಧ್ಯಕ್ಷತೆ
ದಿ| ಮೊಳಹಳ್ಳಿ ಶಿವರಾಯರು ಸತತ 21 ವರ್ಷ ಈ ಬ್ಯಾಂಕನ್ನು ಮುನ್ನಡೆಸಿದ್ದರು. 1994ರಲ್ಲಿ ಅಧ್ಯಕ್ಷ ರಾಗಿ ಆಯ್ಕೆಗೊಂಡ ರಾಜೇಂದ್ರ ಕುಮಾರ್‌ ನಿರಂತರ 25 ವರ್ಷ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಮೂಲಕ ಸುದೀರ್ಘ‌ ಕಾಲ ಬ್ಯಾಂಕನ್ನು ಮುನ್ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಅವಧಿಯಲ್ಲಿ ಬ್ಯಾಂಕಿಗೆ 18 ಬಾರಿ ಅಪೆಕ್ಸ್‌ ಬ್ಯಾಂಕ್‌ ಪ್ರಶಸ್ತಿ, 16 ಬಾರಿ ನಬಾರ್ಡ್‌ ರಾಜ್ಯ ಪ್ರಶಸ್ತಿ, ಸಹಿತ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next