Advertisement

ಸ್ಕಾಡಾ ಕಾಮಗಾರಿ ಪರಿಶೀಲನೆ

05:53 PM Aug 09, 2017 | Team Udayavani |

ನಾರಾಯಣಪುರ: ಕೇಂದ್ರಿಯ ಜಲ ಆಯೋಗದಿಂದ ನಿಯೋಜಿತ ನಿರ್ದೇಶಕರ ತಂಡದ ಸದಸ್ಯರು ಕೃಷ್ಣಾ ಭಾಗ್ಯ ಜಲ ನಿಗಮದ ಅಡಿ ಪ್ರಗತಿಯಲ್ಲಿರುವ ಸ್ಕಾಡಾ ಕಾಮಗಾರಿ ಪರಿಶೀಲಿಸಿದರು. ಸ್ಕಾಡಾದ ಮಾಸ್ಟರ್‌ ಕಂಟ್ರೋಲ್‌ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ ಸದಸ್ಯರು ಕಾಮಗಾರಿ ಕುರಿತು ಸಂಬಂಧಿಸಿದ ಗುತ್ತಿಗೆ ಕಂಪನಿ ಎಂಡಿ ಹಾಗೂ ಕೆಬಿಜೆಎನ್‌ಎಲ್‌ ಮುಖ್ಯ ಇಂಜಿನಿಯರಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ದೇಶದಲ್ಲೆ ಮೊದಲು ಪ್ರಾಯೋಗಿಕವಾಗಿ ಕೃಷ್ಣಾ ಅಚ್ಚು ಕಟ್ಟು ಭಾಗದ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ಅಡಿಯಲ್ಲಿ ಬರುವ ಹುಣಸಗಿ ಶಾಖಾ ಕಾಲುವೆ ಅದರ ಉಪ ಕಾಲುವೆಗಳಿಗೆ ಅಳವಡಿಸಲಾದ ಅಟೋಮೇಶನ್‌ ಗೇಟ್‌ಗಳ ಕಾರ್ಯನಿರ್ವಹಣೆ ಕುರಿತು ಕೇಂದ್ರಿಯ ಜಲ ಆಯೋಗದ ನಿರ್ದೇಶಕ ಎನ್‌.ವಿ. ಸತೀಶ ಹಾಗೂ ಸಹಾಯಕ ನಿರ್ದೇಶಕಿ
ಉಮಾ ಡಿ. ಒಳಗೊಂಡ ತಂಡವು ಮಾಹಿತಿ ಪಡೆದು ಕೆಲ ಸಲಹೆ ಸೂಚನೆ ನೀಡಿತು. ಅಚ್ಚುಕಟ್ಟು ಭಾಗದ ರೈತರು ಇಂತಹ ವಿಶಿಷ್ಠ
ಯೋಜನೆ ಲಾಭ ಪಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜಲಾಶಯದ ನೀರಿನ ಮಟ್ಟ, ಕಾಲುವೆಯಲ್ಲಿ ಹರಿಯುತ್ತಿರುವ
ನೀರಿನ ಪ್ರಮಾಣ, ಎಪಿಎಂಸಿ ಧಾರಣಿ, ಹವಾಮಾನ, ಜಮೀನಿಗೆ ಬೇಕಾದ ನೀರಿನ ಬೇಡಿಕೆ ಸೇರಿದಂತೆ ಇತರೆ ಅಗತ್ಯ ಮಾಹಿತಿ
ಒದಗಿಸುವ ಕಿಯೋಸ್ಕ್ ಯಂತ್ರದ ಕಾರ್ಯವೈಖರಿ ಬಗ್ಗೆ ಅ ಧಿಕಾರಿಗಳಿಂದ ಮಾಹಿತಿ ಪಡೆದ ರೈತರು, ಇದರ ಬಳಕೆ ಕುರಿತು ಜಾಗೃತಿ ಮೂಡಿಸಿ ಅಗತ್ಯ ಜ್ಞಾನ ಒದಗಿಸುವಂತೆ ಕೋರಿದರು. ನಿರ್ದೇಶಕರ ತಂಡ ಬುಧವಾರ ಜೇವರ್ಗಿ ಶಾಖಾ ಕಾಲುವೆ ಕಾಮಗಾರಿ ವೀಕ್ಷಣೆ
ಮಾಡಲಿದೆ ಎಂದು ಕೆಬಿಜೆಎನ್‌ಎಲ್‌ ಮೂಲಗಳಿಂದ ತಿಳಿದು ಬಂದಿದೆ. ಕೆಬಿಜೆಎನ್‌ಎಲ್‌ ವಲಯದ ಮುಖ್ಯ ಇಂಜಿನಿಯರ್‌ ಎಚ್‌.ಕೆ. ಕೃಷ್ಣೇಗೌಡ, ಅಧೀಕ್ಷಕ ಅಭಿಯಂತರ ವೀರಣ್ಣ ನಗರೂರು, ಕಾರ್ಯನಿರ್ವಾಹಕ ಇಂಜಿನಿಯರ್‌ ಎಂ. ತಂಬಿದೊರೈ, ಗೇಟ್ಸ್‌ ಉಪ ವಿಭಾಗದ ಎಇಇ ಆರ್‌.ಎಲ್‌. ಹಳ್ಳೂರ, ಗುತ್ತಿಗೆ ವಹಿಸಿಕೊಂಡಿರುವ ಮೆಕಾಟ್ರಾನಿಕ್ಸ್‌ ಎಂಡಿ ಅಶೋಕ ಕರ್ವಾ, ಎಇಗಳಾದ ರಾಘವೇಂದ್ರ, ಜೀವನ, ಕೆಬಿಜೆಎನ್‌ಎಲ್‌ ಅಧಿ ಕಾರಿಗಳು, ಮೆಕಾಟ್ರಾನಿಕ್ಸ್‌ ಸಿಬ್ಬಂದಿ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next