Advertisement

ನಿಲೇಕಣಿ ನೆರವು ಪಡೆಯಿರಿ

06:00 AM Sep 22, 2018 | |

ಹೊಸದಿಲ್ಲಿ: ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಭಾರತೀಯ ವೈದ್ಯಕೀಯ ಕೌನ್ಸಿಲ್‌ (ಎಂಸಿಐ) ತಪಾಸಣೆ ನಡೆಸುವುದಕ್ಕೆ ಸಂಬಂಧಿಸಿದಂತೆ ನೆಟ್‌ವರ್ಕ್‌ ಆಧರಿತ ತಾಂತ್ರಿಕ ಪರಿಹಾರವನ್ನು ಒದಗಿಸಲು ಯುಐಡಿಎಐ ಮಾಜಿ ಮುಖ್ಯಸ್ಥ ನಂದನ್‌ ನಿಲೇಕಣಿ ಸಹಾಯವನ್ನು ಸುಪ್ರೀಂ ಕೋರ್ಟ್‌ ಕೇಳಿದೆ. ಎಂಸಿಐ ನಡೆಸಿದ ತಪಾಸಣೆಯ ವೇಳೆ ಖಾಸಗಿ ವೈದ್ಯಕೀಯ ಕಾಲೇಜುಗಳ ಮಧ್ಯೆ ಗಂಭೀರ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದು, ಈ ಸಂಬಂಧ ಖಾಸಗಿ ಕಾಲೇಜುಗಳು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದವು. ವಿಚಾರಣೆ ವೇಳೆ ಇದಕ್ಕೆ ಸೂಕ್ತ‌ ಪರಿಹಾರವನ್ನು ತಾಂತ್ರಿಕವಾಗಿ ಒದಗಿಸಲು ತಾಂತ್ರಿಕ ಪರಿಣಿತಿ ಹೊಂದಿರುವ ನಂದನ್‌ ನಿಲೇಕಣಿಯನ್ನು ವಿನಂತಿಸಬೇಕು ಎಂದು ಹಿರಿಯ ವಕೀಲ ಕಪಿಲ್‌ ಸಿಬಲ್‌ ಸಲಹೆ ನೀಡಿದ್ದರು. ಅದರಂತೆ ನಂದನ್‌ ನಿಲೇಕಣಿಗೆ ಈ ಅಧಿಕಾರವನ್ನು ಸುಪ್ರೀಂಕೋರ್ಟ್‌ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next