Advertisement

ರಾಮಮಂದಿರ ವಿವಾದ ಕೋರ್ಟ್ ಹೊರಗೆ ಇತ್ಯರ್ಥಪಡಿಸಿಕೊಳ್ಳಿ: ಸುಪ್ರೀಂ ಸಲಹೆ

12:55 PM Mar 21, 2017 | Team Udayavani |

ನವದೆಹಲಿ:ಕಳೆದ 6 ವರ್ಷಗಳಿಂದ ಬಾಕಿ ಉಳಿದಿದ್ದ ಅಯೋಧ್ಯೆಯ ರಾಮ ಮಂದಿರ ಬಾಬ್ರಿ ಮಸೀದಿ ವಿವಾದದ ಕುರಿತಂತೆ, ನ್ಯಾಯಾಂಗದ ಹೊರಗೆ ಪರಸ್ಪರ ಮಾತುಕತೆ ಮೂಲಕ ಸೌಹಾರ್ದತೆಯಿಂದ ಇತ್ಯರ್ಥಪಡಿಸಿಕೊಳ್ಳುವುದು ಉತ್ತಮವಾದ ಬೆಳವಣಿಗೆ ಎಂದು ಮಂಗಳವಾರ ಸುಪ್ರೀಂಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ.

Advertisement

ರಾಮಜನ್ಮಭೂಮಿ, ಬಾಬ್ರಿ ಮಸೀದಿ ವಿವಾದ ಧಾರ್ಮಿಕ ಹಾಗೂ ಭಾವನಾತ್ಮಕ ವಿಚಾರಕ್ಕೆ ಸಂಬಂಧಿಸಿದ್ದು, ಹಾಗಾಗಿ ಹಿಂದೂಗಳ ಮತ್ತು ಮುಸ್ಲಿಮರ ಸುಮಾರು ಶತಮಾನದಷ್ಟು ಹಳೆಯ ವಿವಾದದ ಇತ್ಯರ್ಥವನ್ನು ಸಂಧಾನದ ಮೂಲಕ ನಡೆಸಲು ತಾವು ಪ್ರಿನ್ಸಿಪಾಲ್ ರಂತೆ ಮಧ್ಯವರ್ತಿಯಾಗಿ ಕುಳಿತುಕೊಳ್ಳಲು ಸಿದ್ಧ ಎಂದು ಸುಪ್ರೀಂ ಸಿಜೆಐ ಜೆಎಸ್ ಖೇಹರ್ ಈ ಸಂದರ್ಭದಲ್ಲಿ ಹೇಳಿದರು.

ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಶೀಘ್ರವೇ ನಡೆಸಬೇಕು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಹಿಂದೂ, ಮುಸ್ಲಿಂ ಮುಖ್ಯಸ್ಥರು ಒಟ್ಟಾಗಿ ಕುಳಿತು ಮಾತುಕತೆ ನಡೆಸಿ ಒಂದು ನಿರ್ಧಾರಕ್ಕೆ ಬರುವಂತೆ ಹೇಳಿದರು.

ಇದೊಂದು ಸೂಕ್ಷ್ಮ ಮತ್ತು ಭಾವನಾತ್ಮಕ ವಿಚಾರವಾಗಿದ್ದರಿಂದ ಈ ವಿವಾದವನ್ನು ಪರಸ್ಪರ ಮಾತುಕತೆ ಮೂಲಕ ಕೋರ್ಟ್ ಹೊರಗೆ ಇತ್ಯರ್ಥಪಡಿಸಿಕೊಳ್ಳುವುದು ಉತ್ತಮ, ಅದರ ಫಲಿತಾಂಶ ಏನು ಎಂಬುದನ್ನು ಮಾರ್ಚ್ 31ರ ವಿಚಾರಣೆ ವೇಳೆ ತಿಳಿಸುವಂತೆ ನಿರ್ದೇಶನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next