Advertisement

ಪುರಿ ಮೇಲೆ ಸುಪ್ರೀಂ ನಿಗಾ

06:00 AM Jun 09, 2018 | Team Udayavani |

ಹೊಸದಿಲ್ಲಿ: ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ ಅರ್ಚಕರಿಂದ ಭಕ್ತರು ಶೋಷಣೆಗೆ ಒಳಗಾಗುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಶುಕ್ರವಾರ ಕೆಲವು ನಿರ್ದೇಶನಗಳನ್ನು ನೀಡಿದೆ. ಅಲ್ಲದೆ, ಆಡಳಿತದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡು, ಮುಂದಿನ ತಿಂಗಳು ನಡೆಯಲಿರುವ ವಾರ್ಷಿಕ ರಥ ಯಾತ್ರೆಯ ತನಕ ತನ್ನ ನಿರ್ದೇಶನ ಪಾಲಿಸುವಂತೆ ಆದೇಶಿಸಿದೆ. ಭಕ್ತಾದಿಗಳು ಯಾವುದೇ ಶೋಷಣೆಗೆ ಒಳಗಾಗದೇ ಜಗನ್ನಾಥನ ದರ್ಶನ ಪಡೆಯುವಲ್ಲಿ ಸುಪ್ರೀಂನ ಈ ನಿರ್ದೇಶನ ಮಹತ್ವ ದ್ದಾಗಲಿದೆ. ಇವೆಲ್ಲದರ ನಡುವೆ, ದೇವಾಲಯದ ಆಡಳಿತದ ಬಗ್ಗೆ ಸಮಗ್ರ ವರದಿ ಸಂಗ್ರಹಿಸಿ ಒಪ್ಪಿಸುವಂತೆ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next