Advertisement

‘The kerala story’ ನಿಷೇಧ: ಪಶ್ಚಿಮ ಬಂಗಾಳ ಸರಕಾರದ ಆದೇಶಕ್ಕೆ ಸುಪ್ರೀಂ ತಡೆ

03:52 PM May 18, 2023 | Team Udayavani |

ನವದೆಹಲಿ : ವಿವಾದಗಳಿಂದ ಸುದ್ದಿಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ರಾಜ್ಯದಲ್ಲಿ ಪ್ರದರ್ಶಿಸುವುದನ್ನು ನಿಷೇಧಿಸಿ ಪಶ್ಚಿಮ ಬಂಗಾಳ ಸರಕಾರ ಮೇ 8ರಂದು ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ತೆರವುಗೊಳಿಸಿದೆ.

Advertisement

ರಾಜ್ಯ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪಶ್ಚಿಮ ಬಂಗಾಳ ಕರ್ತವ್ಯ ಬದ್ಧವಾಗಿದೆ ಎಂದು ಹೇಳಿದೆ.” ಸಾರ್ವಜನಿಕ ಅಸಹಿಷ್ಣುತೆಯ ಮೇಲೆ ಪ್ರೀಮಿಯಂ ಹಾಕಲು ಕಾನೂನನ್ನು ಬಳಸಲಾಗುವುದಿಲ್ಲ, ಇಲ್ಲದಿದ್ದರೆ ಎಲ್ಲಾ ಚಲನಚಿತ್ರಗಳು ಒಂದೇ ಸ್ಥಳದಲ್ಲಿ ಇರುತ್ತವೆ” ಎಂದು ನ್ಯಾಯಾಲಯ ಗಮನಿಸಿದೆ.

ಚಿತ್ರದ ನಿರ್ಮಾಪಕರು ನಿಷೇಧವನ್ನು ತೆಗೆದುಹಾಕುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಂತರ ಈ ಆದೇಶ ಬಂದಿದೆ. ಈ ಹಿಂದೆ, ನಿಷೇಧಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ಮಾಪಕರು ಸಲ್ಲಿಸಿದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next