Advertisement

ಎಸ್ಸಿ ಎಸ್ಟಿ ಮುಂಬಡ್ತಿ: ಸರ್ಕಾರದ ಚಿತ್ತ ಸುಪ್ರೀಂ ನತ್ತ

06:00 AM Jul 27, 2018 | Team Udayavani |

ಬೆಂಗಳೂರು: ಎಸ್ಸಿ, ಎಸ್ಟಿ ನೌಕರರ ಮುಂಬಡ್ತಿ ಪ್ರಕರಣ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದ್ದು, ಸಮ್ಮಿಶ್ರ ಸರ್ಕಾರ ನ್ಯಾಯಾಲಯದ ಸೂಚನೆ ಏನಿರಬಹುದೆಂದು ಕಾಯುತ್ತಿದೆ. 

Advertisement

ಈಗಾಗಲೇ ಬಿ.ಕೆ. ಪವಿತ್ರಾ ಪ್ರಕರಣದಲ್ಲಿ ಸುಪ್ರೀಂ ಎಸ್ಸಿ ,ಎಸ್ಟಿ ನೌಕರರಿಗೆ ನೀಡಿದ್ದ ಸೂಪರ್‌ ನ್ಯೂಮರರಿ ಕೋಟಾ ಮುಂಬಡ್ತಿಯನ್ನು ತೆಗೆದು ಹಾಕಿ ಅರ್ಹತೆ ಮೇಲೆ ಬಡ್ತಿ ನೀಡುವಂತೆ 2017 ಫೆ. 9 ರಂದು ಆದೇಶ ನೀಡಿದೆ. ಈ ಆದೇಶದ ಅನ್ವಯ ಸುಮಾರು 6 ಸಾವಿರಕ್ಕೂ ಹೆಚ್ಚು ಎಸ್ಸಿ, ಎಸ್ಟಿ ನೌಕರರು ಹಿಂಬಡ್ತಿ ಪಡೆದಿದ್ದಾರೆ. ಕೋರ್ಟ್‌ ಆದೇಶದ ಪರಿಣಾಮ ಸುಮಾರು 30 ಸಾವಿರ ಎಸ್ಸಿ, ಎಸ್ಟಿ ಸಿಬ್ಬಂದಿಗೆ ಅನ್ವಯವಾಗಲಿದೆ ಎಂದು ತಿಳಿದು ಬಂದಿದೆ. 

ರಾಜ್ಯ ಸರ್ಕಾರ ಸುಪ್ರೀಂ ಆದೇಶ ಪಾಲನೆಗೆ ಸಮಯ ಕೇಳುತ್ತಲೇ ಎಸ್ಸಿ, ಎಸ್ಟಿ ನೌಕರರ ಹಿತ ಕಾಯಲು ವಿಶೇಷ ಕಾಯ್ದೆ ತಂದಿದ್ದು, ಈಗಾಗಲೇ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಈ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರ್ಕಾರ ಹಿಂಬಡ್ತಿ ಪಡೆದಿರುವ ಎಸ್ಸಿ, ಎಸ್ಟಿ ನೌಕರರಿಗೆ ಸೂಪರ್‌ ನ್ಯೂಮರರಿ ಕೋಟಾದಡಿ ಹೊಸ ಹುದ್ದೆಗಳನ್ನು ಸೃಷ್ಟಿಸಿ, ಈ ಹಿಂದೆ ಇದ್ದ ಹುದ್ದೆಗಳಲ್ಲಿ ಮುಂದುವರಿಯಲು ಹೊಸ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಿದೆ. ಅದರ ಅನುಷ್ಠಾನಕ್ಕಾಗಿ ಸುಪ್ರೀಂ ಆದೇಶಕ್ಕಾಗಿ ಕಾಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next